ಚಳ್ಳಕೆರೆ :
ಬಯಲು ಸೀಮೆ ಜನರಿಗೆ ವರದಾನವಾದ ವಾಣಿವಿಲಾಸ ಸಾಗರ ಜಲಾಶಯ ನಾಲ್ಕನೇ ಬಾರಿಗೆ ಕೋಡಿ ಬಿದ್ದಿರುವುದು ರೈತರ ಮೊಗದಲ್ಲಿ ಮಂದಹಾಸ ಬೀರುವಂತೆ ಮಾಡಿದೆ.
ವಾಣಿವಿಲಾಸಸಾಗರ ಕರ್ನಾಟಕದ ಹಳೆಯ ಅಣೆಕಟ್ಟುಗಳಲ್ಲಿ ಒಂದು. ವೇದಾವತಿ ನದಿಗೆ ಅಡ್ಡಲಾಗಿ, ‘ಮಾರಿಕಣಿವೆ’ ಎಂಬಲ್ಲಿ ಕಟ್ಟಲಾಗಿರುವ ಈ ಅಣೇಕಟ್ಟು ಹಿರಿಯೂರಿನಿಂದ ಸುಮಾರು ೨೦ ಕಿ .ಮೀ. ದೂರದಲ್ಲಿದೆ. ಇದರ ಎತ್ತರ ೫೦ ಮೀ, ಉದ್ದ ೪೦೫ ಮೀಟರ್ ಗಳು. ೧೩೫ ಅಡಿಗಳವರೆಗೆ ನೀರನ್ನು ಸಂಗ್ರಹಿಸಬಹುದಾಗಿದೆ. ಹಿರಿಯೂರು ತಾಲ್ಲೂಕಿನ ಸುಮಾರು ೧/೩ ರಷ್ಟು (ಸುಮಾರು ೧೦,೦೦೦ ಹೆಕ್ಟೇರ್ ಪ್ರದೇಶ) ನೆಲಕ್ಕೆ ನೀರುಣಿಸುವುದಲ್ಲದೆ ಹಿರಿಯೂರು ಮತ್ತು ಚಿತ್ರದುರ್ಗ ನಗರಗಳಿಗೆ ಕುಡಿಯುವ ನೀರನ್ನೂ ಒದಗಿಸುತ್ತದೆ. ಸಿಮೆಂಟ್ ಉಪಯೋಗವಿಲ್ಲದೆ ಕೇವಲ ಗಾರೆಯಿಂದಲೇ ಇದನ್ನು ಕಟ್ಟಲಾಗಿದೆ. ಒಂದು ಬದಿಯಿಂದ ನೋಡಿದಾಗ, ‘ಭಾರತದ ಭೂಪಟ’ವನ್ನು ಸಹ ನಾವು ಕಾಣಬಹುದಾಗಿದೆ.
ಮಾರಿಕಣಿವೆ ಎಂದು ಜನಪ್ರಿಯವಾಗಿ ಕರೆಯಲ್ಪಡುವ ವಾಣಿ ವಿಲಸಾಸಾಗರ ಭಾರತದ ಕರ್ನಾಟಕ ರಾಜ್ಯದ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಸಮೀಪವಿರುವ ಒಂದು ಅಣೆಕಟ್ಟು. ಇದು ರಾಜ್ಯದ ಅತ್ಯಂತ ಹಳೆಯ ಅಣೆಕಟ್ಟು. ಈ ಅಣೆಕಟ್ಟನ್ನು ವೇದವತಿಯ ನದಿಗೆ ಅಡ್ಡಲಾಗಿ ಮೈಸೂರು ಮಹಾರಾಜರು ಸ್ವಾತಂತ್ರ್ಯ ಪೂರ್ವ ನಿರ್ಮಿಸಿದರು. ಅಣೆಕಟ್ಟು ಒಂದು ಅತ್ಯಾಧುನಿಕ ವಾಸ್ತುಶಿಲ್ಪವಾಗಿದೆ, ಆ ಕಾಲದಲ್ಲಿ ಎಂಜಿನಿಯರಿಂಗ್ ಅದ್ಭುತವಾಗಿದೆ ಮತ್ತು ಸುತ್ತಮುತ್ತಲಿನ ನಗರಗಳು, ಪಟ್ಟಣಗಳು ಮತ್ತು ಹಳ್ಳಿಗಳಿಗೆ ನೀರನ್ನು ಒದಗಿಸುತ್ತದೆ, ಇವುಗಳು ಮಧ್ಯ ಕರ್ನಾಟಕದ ಡೆಕ್ಕನ್ ಪ್ರದೇಶದ ಒಣ ಪ್ರದೇಶಗಳಾಗಿವೆ. ಎಂದು ಹೇಳಲಾಗುತ್ತದೆ.
ಒಟ್ಟಾರೆ ಬಯಲು ಸೀಮೆ ಜನರಿಗೆ ವಾಣಿವಿಲಾಸ ಸಾಗರ ಕೇವಲ ಕುಡಿಯುವ ನೀರಿಗಲ್ಲದೆ ಕೃಷಿ ಭೂಮಿ ರೈತರಿಗೆ ವರದಾನವಾಗುತ್ತದೆ ಎಂದು ಈ ಭಾಗದ ರೈತರು ಸಂತಸ ವ್ಯಕ್ತಪಡಿಸುತ್ತಾರೆ

