ಚಳ್ಳಕೆರೆ :
ಈರುಳ್ಳಿ, ದಾಳಿಂಬೆ, ಟಮೋಟೋ, ಪಪ್ಪಾಯಿ, ಶೇಂಗಾ ಸೇರಿದಂತೆ ನಷ್ಟವಾದ ಎಲ್ಲಾ ಬೆಳೆಗಳಿಗೆ
ಪರಿಹಾರ ಕೋಡುವಂತೆ ಕಿಸಾನ್ ಸಂಘದವತಿಯಿಂದ ತಹಶಿಲ್ದಾರ್ ಗೆ ಮನವಿ.
ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶ ವತಿಯಿಂದ ಮನವಿ ಸಲ್ಲಿಸಿ ಆಕ್ರೋಶ ವ್ಯಕ್ತಪಡಿಸಿದರು.
ಚಳ್ಳಕೆರೆ
ತಾಲ್ಲೂಕಿನಾದ್ಯಂತ ಕೃಷಿಕರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದು, ಈ ಭಾಗದ ರೈತರು ಕೃಷಿಯ
ಆಧಾರದಲ್ಲಿ ಜೀವನ ಸಾಗಿಸುತ್ತಿದ್ದು, ಈ ವರ್ಷದ
ಅನಾವೃಷ್ಟಿಯಿಂದ ಬೆಳೆಯನ್ನು ಬೆಳೆದು ರೈತರು ನಷ್ಟದ ಅಂಚಿನಲ್ಲಿರುತ್ತಾರೆ. ಆದ್ದರಿಂದ ನಮ್ಮ
ಮಳೆಯ ಅತೀವೃಷ್ಟಿ ಮತ್ತು
ಜಿಲ್ಲೆಯಾದ್ಯಂತ ಮತ್ತು ತಾಲ್ಲೂಕಿನಾದ್ಯಂತ ರೈತರಿಗೆ ಈರುಳ್ಳಿ ಮತ್ತು ಶೇಂಗಾ ಬೆಳೆಗೆ ಎಕರೆಗೆ
ಸುಮಾರು 45 ಸಾವಿರದಿಂದ 60 ಸಾವಿರದವರೆಗೂ ಖರ್ಚು ಇರುತ್ತದೆ. ಮತ್ತು ಟಮೋಟಾದಲ್ಲಿ
1 ಎಕರೆಗೆ 60 ರಿಂದ 80 ಸಾವಿರ, ಹಾಗೂ ದಾಳಿಂಬೆ ಬೆಳೆಗೆ ಖರ್ಚು ಎಕರೆಗೆ ಸುಮಾರು 1
ರಿಂದ 1.5 ಲಕ್ಷದವರೆಗೆ ಒಬ್ಬ ರೈತ ಖರ್ಚನ್ನು ಮಾಡಿರುತ್ತಾರೆ, ಬೆಳೆದಿರುವ ಬೆಳೆಗೆ ಸರಿಯಾದ
ನಿಗದಿತ ಬೆಲೆ ಸಿಗದ ಕಾರಣ ರೈತರು ಕಂಗಾಲಾಗಿದ್ದು, ಇಂದು ರೈತನ ಜೀವನ ಬಹಳ ಅತಂತ್ರ
ಸ್ಥಿತಿಯಲ್ಲಿರುತ್ತದೆ ಆದ್ದರಿಂದ ಸರಕಾರ ಪರಿಹಾರ ನೀಡಬೇಕು ಎಂದು ಜಿಲ್ಲಾಧ್ಯಕ್ಷ ಕರಿಕೆರೆ ತಿಪ್ಪೇಸ್ವಾಮಿ ಹೇಳಿದರು.
ಅದಕ್ಕಾಗಿ ಅವರು ಬಿತ್ತನೆಗೆ ಸಾಲದ ರೂಪದಲ್ಲಿ ಹಣವನ್ನು ತಂದು ಬಿತ್ತನೆಗೆ
ಉಪಯೋಗಿಸುವ ಹಣವನ್ನು ಮರುಪಾವತಿ ಮಾಡುವ ಸ್ಥಿತಿಯಲ್ಲಿ ಇರುವುದಿಲ್ಲ, ಇದರಿಂದ
ಬಹಳಷ್ಟು ರೈತರು ಆತ್ಮಹತ್ಯೆಗೆ ಒಳಗಾಗಿರುತ್ತಾರೆ.
ಸಾಲದ ಮರು ಪಾವರಿ ಮಾಡದೆ ಆಗದ
ಪಕ್ಷದಲ್ಲಿ ಬಹಳಷ್ಟು ರೈತರು ಅವರ ಜಮೀನನ್ನು ಮಾರಾಟ ಮಾಡಿರುತ್ತಾರೆ. ಇದನ್ನು ತಪ್ಪಿಸಲು
ಸರ್ಕಾರದಿಂದ ರೈತರು ಖರ್ಚು ಮಾಡಿದ ಹಣದಲ್ಲಿ ಶೇಖಡಾ 80%ರಷ್ಟು ರೈತರು ಬೆಳೆದಿರುವ
ಬೆಳೆಗೆ ನಷ್ಟ ಪರಿಹಾರ ಭರಿಸಿಕೊಡಬೇಕೆಂದು ಭಾರತೀಯ ಕಿಸಾನ್ ಸಂಘದ ವತಿಯಿಂದ
ಮನವಿ ಮಾಡಿಕೊಳ್ಳುತ್ತೇವೆ
ಇದೇ ಸಂಧರ್ಭದಲ್ಲಿ ಉಮೇಶ್ ಗೌಡ, ಯರಗುಂಟಪ್ಪ, ಸುರೇಂದ್ರ ನಾಗಭೂಷಣ್, ಇತರರು ಪಾಲ್ಗೊಂಡಿದ್ದರು.

