ಚಳ್ಳಕೆರೆ : ಬಯಲು ಸೀಮೆ ಅರಣ್ಯ ಪ್ರದೇಶಗಳಲ್ಲಿ ಅಳಿದುಳಿದಿರುವಂತಹ ಕಾಡುಪ್ರಾಣಿಗಳ ರಕ್ಷಣೆಗೆ ಸರ್ಕಾರ ಮುಂದಾಗಬೇಕು..

ಚಳ್ಳಕೆರೆ ತಾಲೂಕಿನಲ್ಲಿ ಇರುವ ಅರಣ್ಯ ಅಧಿಕಾರಿಗಳು ತಮ್ಮ ಅರಣ್ಯ ವ್ಯಾಪ್ತಿಗೆ ಒಳಪಡುವಂತಹ ನಿಷೇಧಿತ ಅರಣ್ಯ ಪ್ರದೇಶಗಳಿಗೆ ಮಾನವ ನಿಷೇಧಿತ ವಲಯವನ್ನಾಗಿ ಬೋರ್ಡ್ ಹಾಕಬೇಕು, ಹಾಗೂ ನಿಷೇಧಿತ ಪ್ರದೇಶ ಎಂದು ಕಟ್ಟೇಚ್ಚರ ಹೊರಡಿಸಬೇಕು ಅಳಿದುಳಿದಿರುವ ಕಾಡು ಪ್ರಾಣಿಗಳ ರಕ್ಷಣೆಗೆ ಅಧಿಕಾರಿಗಳು ಸನ್ನದರಾಗಬೇಕು.

ತಾಲೂಕಿನಲ್ಲಿ ಅರಣ್ಯ ಇಲಾಖೆಗೆ ಒಳಪಡುವ ವಲಯವನ್ನು ಗುರುತಿಸಿ ಅರಣ್ಯ ಅಧಿಕಾರಿಗಳ ಗಸ್ತು ಮಾಡುವ ಮೂಲಕ ಕಾಡು ಪ್ರಾಣಿಗಳನ್ನು ರಕ್ಷಿಸಬೇಕು, ಅದರಂತೆ ಪುರ್ಲಹಳ್ಳಿ, ನನ್ನಿವಾಳ ಗುಡ್ಡ, ಕೆಡಿ ಕೋಟೆ ಈಗೇ ಹಲವು ಪ್ರದೇಶದಲ್ಲಿ ಸಾರಂಗಗಳ ಓಡಾಟ ಆಹಾರಕ್ಕೆ ಒಂದು ಕಡೆಯಿಂದ ಮತ್ತೊಂದು ಕಡೆಗೆ ಓಗುವುದು ವಾಡಿಕೆ ಅದರಂತೆ ರಕ್ಷಣೆ ಅತೀ ಮುಖ್ಯವಾಗಿದೆ.

ಅದರಂತೆ ಇತ್ತಿಚೀನ ದಿನಗಳಲ್ಲಿ ಕಾಡು ಪ್ರಾಣಿಗಳನ್ನು ಬೇಟೆಯಾಡುವವರ ಸಂಖ್ಯೆ ಬಯಲು ಸೀಮೆಯಲ್ಲಿ ಹೆಚ್ಚಾಗಿದೆ. ಕಾಡಿನಲ್ಲಿ ವಾಸ ಮಾಡುವ ಕೆಲ ಪ್ರಾಣಿಗಳನ್ನು ಬೇಟೆಯಾಡುವುದು, ಅವುಗಳ ಸಂತತಿ ಇಲ್ಲದೆ ಹಾಗೆ ಮಾಡುವುದು ಮನುಷ್ಯ ವಿನಾಷ ಬುದ್ದಿಗೆ ಕಡಿವಾಣ ಹಾಕಬೇಕಿದೆ.

ಕಾಡು ಪ್ರಾಣಿಗಳನ್ನು ರಕ್ಷಣೆ ಮಾಡಿ ಮುಂದಿನ ಪೀಳಿಗೆಗೆ ಕೊಂಡುಯ್ಯುಬೇಕು ಆದ್ದರಿಂದ ಚಳ್ಳಕೆರೆ ತಾಲೂಕಿನಲ್ಲಿ ಸಾರಂಗಗಳ ಹಾಗೂ ಮೊಲಗಳನ್ನು ಬೇಟೆಯಾಡಲು ರಾತ್ರಿವೇಳೆ ತಿರುಗಾಡುವುದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತದೆ.

ಆದ್ದರಿಂದ ಬೇಟೆಗಾರರನ್ನು ಹತ್ತಿಕ್ಕಲು ಅರಣ್ಯ ಅಧಿಕಾರಿಗಳು ಗಸ್ತು ಹಾಗೂ ನಿಷೇಧಿತ ವಲಯಗಳಿಗೆ ಮಾನವ ನಿಷೇಧಿತ ಎಂದು ನಾಮಫಲಕಗಳನ್ನು ಹಾಕುವುದರ ಮೂಲಕ ನಿಷೇಧಿತ ವಲಯಗಳಿಗೆ ನಿರ್ಬಂಧಿಸಬೇಕು ಕಾಡುಪ್ರಾಣಿಗಳನ್ನು ರಕ್ಷಿಸಬೇಕು ಎಂದು ವನ್ಯಜೀವಿ ಸಂರಕ್ಷಣಾ ಹಿತಾಸಕ್ತಿ ತಂಡ ಹಾಗೂ ಸಾರ್ವಜನಿಕರ ಒಕ್ಕೂರಲು ಹಾಗಿದೆ..

About The Author

Namma Challakere Local News
error: Content is protected !!