ಚಿತ್ರದುರ್ಗ ನಗರದ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಶಾಲಾ ಶಿಕ್ಷಣ (ಪದವಿ ಪೂರ್ವ) ಚಿತ್ರದುರ್ಗ ಹಾಗೂ ಶ್ರೀ ನೀಲಕಂಠಯ್ಯ ಮೆಮೋರಿಯಲ್ ಪದವಿ ಪೂರ್ವ ಕಾಲೇಜು, ಚಿತ್ರದುರ್ಗ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಜಿಲ್ಲಾಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಚಳ್ಳಕೆರೆ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಬಾಲಕಿಯರ ವಾಲಿಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಕಬ್ಬಡ್ಡಿ ಪಂದ್ಯಾವಳಿಯಲ್ಲಿ ದ್ವಿತೀಯ ಸ್ಥಾನ ಮತ್ತು ವಿದ್ಯಾರ್ಥಿಗಳು ಬಾಲಕರ ಬಾಸ್ಕೇಟ್ ಬಾಲ್‌ನಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದು ವಿಜೇತರಾಗಿ ಜಿಲ್ಲಾ ಮಟ್ಟದಿಂದ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಈ ವಿಜೇತ ಕ್ರೀಡಾಪಟುಗಳಿಗೆ ಜಿಲ್ಲಾ ಉಪನ್ಯಾಸಕರ ಸಂಘದ ಮಾಜಿ ಅಧ್ಯಕ್ಷ ಎಸ್.ಲಕ್ಷö್ಮಣ ಪ್ರಶಸ್ತಿ ಪತ್ರ ಫಲಕ ವಿತರಿಸಿ ನಂತರ ಮಾತನಾಡಿ ಪ್ರತಿಭೆ ಮತ್ತು ಕೌಶಲ್ಯ ಗ್ರಾಮೀಣಾ ಭಾಗದ ವಿದ್ಯಾರ್ಥಿಗಳಲ್ಲಿ ಇರುತ್ತದೆ. ಅನ್ನುವುದಕ್ಕೆ ಈ ವಿಜೇತ ಕ್ರೀಡಾಪಟುಗಳೇ ಸಾಕ್ಷಿ ಕ್ರೀಡೆಗಳಲ್ಲಿ ಸೋಲು ಗೆಲುವು ಭಾಗವಹಿಸುವುದು ಮುಖ್ಯ. ಹೆಚ್ಚು ಹೆಚ್ಚು ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಭಾಗವಹಿಸುವುದರಿಂದ ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗುತ್ತಾರೆ. ವಿಜೇತ ಬಯಲುಸೀಮೆ ಗ್ರಾಮೀಣಾ ಕ್ರೀಡಾಕೂಟಗಳಿಗೆ ಶುಭ ಹಾರೈಸಿದರು.
ರಾಜ್ಯಶಾಸ್ತç ಉಪನ್ಯಾಸಕ ಹಾಗೂ ಕ್ರೀಡಾ ಕಾರ್ಯದರ್ಶಿ ಹೆಚ್.ಆರ್.ಜಬೀವುಲ್ಲಾ ಮಾತನಾಡಿ ನನ್ನ ಶ್ರಮಕ್ಕೆ ಕ್ರೀಡಾಪಟುಗಳು ವಿಜೇತರಾಗಿ ಜಿಲ್ಲಾ ಮಟ್ಟದಿಂದ ರಾಜ್ಯಮಟ್ಟಕ್ಕೆ ಆಯ್ಕೆಯಾಗಿ ಜಿಲ್ಲಾ ಮತ್ತು ಕಾಲೇಜಿಗೆ ಕೀರ್ತಿ ತಂದಿರುವುದು ತುಂಬಾ ಸಂತೋಷ ತಂದಿದೆ ಎಂದರು. ವಿಜೇತ ಕ್ರೀಡಾಪಟುಗಳು ಕ್ರೀಡಾ ಕಾರ್ಯದರ್ಶಿಯನ್ನು ಆಟದ ಮೈದಾನದಲ್ಲಿ ಮೇಲಕ್ಕೆ ಎತ್ತಿ ಜಯ ಘೋಷಣೆ ಕೂಗಿದರು.

ಬಾಲಕಿಯರ ವಾಲಿಬಾಲ್ ತಂಡ : ತನುಶ್ರೀ (ತಂಡದನಾಯಕಿ), ಯಶಸ್ವಿನಿ, ಸಂಜನ, ಕೀರ್ತನಾ, ಕೌಸರ್, ಅಕ್ಷತಾ, ಚಂದನ, ಮಾನಸ, ಐಶ್ವರ್ಯ
ಬಾಲಕಿಯರ ಕಬಡ್ಡಿ ತಂಡ : ಗಿರಿಜಮ್ಮ (ತಂಡದನಾಯಕಿ), ಸುಷ್ಮಿತ, ಸ್ಪಪ್ನ ಅರ್ಚನಾ, ಕಾವ್ಯ, ಮೇಘನಾ, ಪಲ್ಲವಿ
ಬಾಲಕರ ಬಾಸ್ಕೇಟ್‌ಬಾಲ್ ತಂಡ : ಅರುಣ್ (ತಂಡದ ನಾಯಕ) ಮಂಜುನಾಥ, ಅಭಿಯಾದವ್, ನವಾಜ್, ರಾಕೇಶ್
ಇದೇ ಸಂದರ್ಭದಲ್ಲಿ ಕ್ರೀಡಾ ಕಾರ್ಯದರ್ಶಿ ಇಮ್ರಾನ್, ಸಾಂಸ್ಕೃತಿಕ ಚಟುವಟಿಕೆಗಳ ಕಾರ್ಯದರ್ಶಿ ಹಾಗೂ ಸಾಹಿತಿ, ನಾಗರಾಜ್ ಬೆಳಗಟ್ಟ, ರಾಜ್ಯ ಪ್ರಶಸ್ತಿ ಪುರಸ್ಕೃತ ಉಪನ್ಯಾಸಕ ಡಾ. ತಿಮ್ಮಣ್ಣ, ಉಪನ್ಯಾಸಕರಾದ ಮಂಜುನಾಥ, ಕರುಡಪ್ಪ, ಪೂರ್ಣಚಾರ್, ಮಧು, ದೈಹಿಕ ಉಪನ್ಯಾಸಕ ರಿಜ್ವಾನ್, ವಾಲಿಬಾಲ್ ತರಬೇತಿದಾರರಾದ ಪವನ್ ಮತ್ತು ಚಮನ್, ಇತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಕ್ರೀಡಾಪಟುಗಳಿಗೆ ಕಾಲೇಜಿನ ಪ್ರಾಚಾರ್ಯ ಎಂ.ರವೀಶ್, ಉಪನ್ಯಾಸಕರ ವೃಂದ ಹಾಗೂ ಸಿಬ್ಬಂದಿ ಅಭಿನಂದಿಸಿದೆ.

About The Author

Namma Challakere Local News
error: Content is protected !!