ಚಳ್ಳಕೆರೆ : ಎನ್.ದೇವರಹಳ್ಳಿ ಗ್ರಾಮದಲ್ಲಿ ನಡೆದ ಅಂತರ್ಜಾತಿ ವಿವಾಹದ ಕಾರಣದಿಂದ ಉದ್ಭವಿಸಿದ ಸಾಮಾಜಿಕ ಬಹಿಷ್ಕಾರ ಅಂಗವಾಗಿ ಕಳೆದ ಹಲವು ದಿನಗಳಿಂದ ಒಂದು ತಿಂಗಳು ಹಸುಳೆಯೊಂದಿಗೆ ಸಾಂತ್ವನ ಕೇಂದ್ರದಲ್ಲಿ ಆಶ್ರಯ ಪಡೆದಿದ್ದ ದಂಪತಿ ಇಬ್ಬರು ಇಂದು ಸ್ವ ಗ್ರಾಮಕ್ಕೆ ಅಧಿಕಾರಿಗಳ ಸಮ್ಮುಖದಲ್ಲಿ ಮರಳಿದ್ದಾರೆ.
ಕಳೆದ ನಾಲ್ಕು ದಿನಗಳ ಹಿಂದೆ ಗ್ರಾಮದವರ ಬಹಿಷ್ಕಾರದ ಹಿನ್ನಲೆಯಲ್ಲಿ ಗ್ರಾಮವನ್ನು ತೊರೆದು ಸಾಂತ್ವನ ಕೇಂದ್ರದಲ್ಲಿ ಆಶ್ರಯ ಪಡೆದಿದ್ದ ಸಾವಿತ್ರಮ್ಮ, ಮಣಿಕಂಠ ರವನ್ನು ಸ್ವ ಗ್ರಾಮಕ್ಕೆ ಬರುವ ಪೂರ್ವವಾಗಿ ಅಧಿಕಾರಿಗಳ ತಂಡ
ಬಹಿಷ್ಕಾರ ವಿರುದ್ಧ ಜಾಗೃತಿ ಮೂಡಿಸುವ ಸಲುವಾಗಿ ಜಿಲ್ಲಾ ಪಂಚಾಯಿತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ತಂಡ ಗ್ರಾಮಕ್ಕೆ ಕಳೆದ ನಾಲ್ಕು ದಿನಗಳಿಂದ ಭೇಟಿ ನೀಡಿ ಗ್ರಾಮಸ್ಥರಿಗೆ ಜಾಗೃತಿ ಮೂಡಿಸಿ ಇಂದು ಸಾಂತ್ವನ ಕೇಂದ್ರದಿAದ ದಂಪತಿಗಳನ್ನು ಗ್ರಾಮಕ್ಕೆ ಕರೆತಂದು ಸ್ವಾಗತ ಕೋರಿದ್ದಾರೆ.
ಇನ್ನೂ ತಹಶೀಲ್ದಾರ್ ರೇಹಾನ್ ಪಾಷ ಮಾತನಾಡಿ, ಗ್ರಾಮದಲ್ಲಿ ಇವರಿಗೆ ಯಾವುದೇ ರೀತಿಯಲ್ಲಿ ತೊಂದರೆ ನೀಡುವುದು, ತಿರಸ್ಕಾರ ಮನೋದೋರಣೆ ತೋರುವುದು ಕಂಡು ಬಾರಬಾರದು, ಎಲ್ಲರಂತೆ ಇವರು ಕೂಡ ನಿಮ್ಮ ಮಕ್ಕಳಂತೆ ಕಾಣಬೇಕು ಜಗತ್ತಿನಲ್ಲಿ ಎಲ್ಲಾ ಜಾತಿಗಳು ಒಂದೇ ಸಮಾನವಾಗಿ ಕಾಣಬೇಕು ಇವರ ದಂಪಾತ್ಯ ಜೀವನ ಸುಖಕರವಾಗಿರಲಿ ಎಂದು ಹೇಳೀದರು.
ಇನ್ನೂ ತಾಪಂ. ಇಓ ಜೆ.ಕೆ.ಹೊನ್ನಯ್ಯ ಮಾತನಾಡಿ, ಸಾಮಾಜಿಕ ಮೌಢ್ಯತೆಯು ಸಮಾಜಕ್ಕೆ ಅಪಾಯಕಾರಿಯಾಗಿದ್ದು, ಯಾವುದೇ ನಾಗರೀಕರೂ ಇಂತಹ ಘಟನೆಗಳಿಗೆ ಬೆಂಬಲಿಸಬಾರದು. ಇವರು ಸಹ ಗ್ರಾಮದಲ್ಲಿ ತಮ್ಮವರಂತೆ ಕಾಣಬೇಕು, ಇಂದಿನ ಆಧುನಿಕ ಯುಗದಲ್ಲಿ ಸ್ನೇಹ ಸಹಬಾಳ್ವೆ ಜೀವನ ಅನುಸರಿಸಬೇಕು, ಎಲ್ಲಾರೂ ಪ್ರೀತಿ ವಿಶ್ವಾಸದಿಂದ ಕೂಡಿ ಬಾಳಬೇಕು ಎಂದರು.
ತಳಕು ವೃತ್ತ, ಗ್ರಾಮಾಂತರ ಠಾಣೆ ಸಿಪಿಐ.ಕೆ.ಸಮೀವುಲ್ಲಾ ಮಾತನಾಡಿ, ಕಳೆದ ನಾಲ್ಕು ದಿನಗಳಿಂದ ಈ ಪ್ರಕರಣಕ್ಕೆ ಇಂದು ಸುಖಾಂತ್ಯ ಕಂಡಿದೆ ಆದ್ದರಿಂದ ಮುಂದಿನ ದಿನಗಳಲ್ಲಿ ತಾಲೂಕಿನಲ್ಲಿ ಇಂತಹ ಬಹಿಷ್ಕಾರ, ದೌರ್ಜನ್ಯ ಪ್ರಕರಣಗಳು ಮರುಕಳಿಸದಂತೆ ಕಾನೂನು ಕ್ರಮ ಕೈಗೊಳ್ಳುವ ಹಾಗೂ ಜೈಲು ಶಿಕ್ಷೆ ಇದೆ ಸಮಾಜದ ಸ್ವಾಸ್ಥ್ಯ ಹಾಳು ಮಾಡಿ ಸಾಮರಸ್ಯ, ಸೌಹಾರ್ದಕ್ಕೆ ಧಕ್ಕೆ ತರುವ ಬಹಿಷ್ಕಾರ ಪ್ರಕರಣಗಳು ಆಗಬಾರದು ಎಂದರು.
ಈ ಸಮಯದಲ್ಲಿ ತಹಶೀಲ್ದಾರ್ ರೇಹಾನ್ ಪಾಷ, ಇಓ ಹೊನ್ನಯ್ಯ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಮಂಜುನಾಥ್, ಸಿಪಿಐ ಸಮಿವುಲ್ಲಾ, ಪಿಎಸ್‌ಐ ದೇವರಾಜ್, ಸಿಡಿಪಿಓ ಹರಿಪ್ರಸಾದ್, ಪಿಡಿಓ. ಹಾಗೂ ಇತರೆ ಇಲಾಖೆಯ ಅಧಿಕಾರಿಗಳು ಗ್ರಾಮಸ್ಥರು, ಸಂಘಟನೆಯವರು ಪಾಲ್ಗೊಂಡಿದ್ದರು.