ಚಳ್ಳಕೆರೆ : ಮಾದಿಗ ಸಮದಾಯ ಹಾಗೂ ಸರ್ವ ಜನಾಂಗದ ಬಂಧುಗಳೇ ಬಂಧು ಎನ್ನುವ ಪದವು ಒಲವಿನ, ಕರುಳಿನ, ಆತ್ಮೀಯ ಬಂಧನವನ್ನು ಸೂಚಿಸುವಂತಹದ್ದು, ನಿಮ್ಮನ್ನ ಬಂಧುಗಳೆAದು ಕರೆಯಲು ತುಂಬಾ ಹೆಮ್ಮೆ ಎಂದೆನಿಸುತ್ತದೆ. ಇತಿಹಾಸದ ಪುಟಗಳನ್ನು ತಿರುವಿಹಾಕಿದಾಗ ಸಮುದಾಯಗಳ ಸಂಘರ್ಷ ಸಾಮರಸ್ಯಕ್ಕೆ ಭಾರತೀಯ ಸ್ತರವಿನ್ಯಾಸದಲ್ಲಿ ಸಹಸಂಬAಧವನ್ನು ಕಾಣಬಹುದು ಎಂದು ಮಾದಿಗ ಯುವ ಸೇನೆ ಜಿಲ್ಲಾಧ್ಯಕ್ಷ ಚೌಳೂರ್ ಪ್ರಕಾಶ್ ಹೇಳಿದರು.
ಅವರು ನಗರದ ಅಂಚೆ ಕಛೇರಿಯಲ್ಲಿ ಅ.1 ರಂದು ನಡೆಯುವ ಚಿತ್ರದುರ್ಗ ಜಿಲ್ಲೆಯ ಶಾಸಕರುಗಳು, ಸಚಿವರಿಗೆ, ಹಾಗೂ ಚಳ್ಳಕೆರೆ ತಾಲ್ಲೂಕು ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರುಗಳು, ಸದಸ್ಯರುಗಳಿಗೆ ಹಾಗೂ ನಗರಸಭಾ ಸದಸ್ಯರುಗಳಿಗೆ ಅಭಿನಂದನಾ ಸಮಾರಂಭದ ಅಂಗವಾಗಿ ಪತ್ರ ಚಳುವಳಿ ಮಾಡಿ ಮಾತನಾಡಿದರು. ಶರಣಪರಂಪರೆಯ ಮಾದಾರ ಚೆನ್ನಯ್ಯರಾದಿಯಾಗಿ ಇತರೆ ಸಮುದಾಯದೊಂದಿಗೆ ಬಂಧನವನ್ನು ಬೆಳೆಗಿಸಿವೆ, ಮೂಡಿಸಿವೆ. ಆ ಬೆಳಕಲ್ಲಿ ಇಂದು ನಾವುಗಳು ಸಹಬಾಳ್ವೆಯಿಂದ ಬಾಳಬೇಕಾಗಿದೆ. ಈ ಹಿನ್ನೆಲೆಯೊಂದಿಗೆ ನಾವು ಮುಂದೆಸಾಗಬೇಕಾಗಿದೆ. ಎಲ್ಲಾ ಸಮುದಾಯವ ಬಂದು ಮಾಡುವ ರಂಗವೇ ರಾಜಕೀಯರಂಗ ಇದು ವರ್ತಮಾನದ ವಾಸ್ತವ, ಅದಕ್ಕಾಗಿಯೇ ಅಂಬೇಡ್ಕರ್ ಹೇಳಿದ್ದು ‘ರಾಜ್ಯಾಧಿಕಾರ ಸಮಸ್ತ ಅಭಿವೃದ್ಧಿಯ ಕೀಲಿಕೈ’ ಇಂತಹ ರಾಜ್ಯಾಧಿಕಾರವು ಕೇಂದ್ರೀಕರಣವಾಗದAತೆ ಸಂವಿಧಾನ ರಕ್ಷಣೆ ಮಾಡುತ್ತದೆ. ಅದೇ ರೀತಿಯಾಗಿ ಪ್ರಜಾಧಿಕಾರವು ವಲಸಿಗ ಕೇಂದ್ರೀಕರಣವಾಗದAತೆ ರಕ್ಷಣೆ ಮಾಡುವುದು ಸ್ಥಳೀಯ ಮತದಾರರ ಜವಾಬ್ದಾರಿಯಾಗಿದೆ ಎಂದರು.
ಅ.1ರAದು ನಡೆಯುವ ಕಾರ್ಯಕ್ರಮಕ್ಕೆ ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರುಗಳು, ಸದಸ್ಯರುಗಳಿಗೆ ಪತ್ರಚಳುವಳಿ ಮೂಲಕ ಅವರಿಗೆ ಆಹ್ವಾನ ನೀಡಲಾಗುತ್ತಿದೆ ಎಂದು ಚನ್ನಮ್ಮನಾಗತಿಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಬಿ.ಆನಂದಕುಮಾರ್ ಹೇಳಿದರು.
ಇದೇ ಸಂಧರ್ಭದಲ್ಲಿ ಮಾದಿಗ ದಂಡೋರ ಜಿಲ್ಲಾಧ್ಯಕ್ಷ ದ್ಯಾವರನಹಳ್ಳಿ ತಿಪ್ಪೇಸ್ವಾಮಿ, ಮಾದಿಗ ಗುತ್ತಿಗೆದಾರರ ಸಂಘ ಅಧ್ಯಕ್ಷ ಜಗದೀಶ್, ಮುಡಲಗಿರಿಯಪ್ಪ, ರಾಜಶೇಖರ್, ಮಹಾದೇವಪುರ ಆಂಜಿನೇಯ, ಮಹದೇವಪುರ, ಯೋಗೀಶ್ ಚೌಳೂರ್, ಕೆಪಿ ಮೋಹನ್ ಕುಮಾರ್, ಸುರೇಶ್, ದೊಡ್ಡೇರಿ, ಷಣ್ಮುಖಪ್ಪ ಗ್ರಾಪಂ.ಸದಸ್ಯರು ಮುಂತಾದವರು ಉಪಸ್ಥಿತರಿದ್ದರು