ಚಳ್ಳಕೆರೆ : ಶಿಕ್ಷಣ ಇಲಾಖೆಯಲ್ಲಿ ಅಧಿಕಾರ ವಿಕೇಂದ್ರಿಕರಣ ಹಾಗುತ್ತಿದೆ ,ಇದನ್ನು ನಿಲ್ಲಿಸಬೇಕು, ಶಿಕ್ಷಣ ಇಲಾಖೆಯಲ್ಲಿ ಮಹತ್ವದ ಬದಲಾವಣೆ ತರಬೇಕು, ಶೈಕ್ಷಣಿಕವಾಗಿ ಮಂಜೂರಾದ ಹುದ್ದೆಗೆ ಸಮಾನವಾಗಿ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಶ್ರೀ ತರಳಬಾಳು ಜಗದ್ಗುರು ಶ್ರೀಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ನುಡಿದರು.ಅವರು ನಗರದ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಚಳ್ಳಕೆರೆ ತಾಲೂಕು ಮಟ್ಟದ ಖಾಸಗಿ ಅನುದಾನ ರಹಿತ ಶಾಲಾ ಆಡಳಿತ ಮಂಡಳಿಗಳ ಟ್ರಸ್ಟ್ವತಿಯಿಂದ ರಾಜ್ಯ ಮಟ್ಟದ ಶೈಕ್ಷಣಿಕ ಸಮಾವೇಶ, ಹಾಗೂ ಶಿಕ್ಷಕರ ದಿನಾಚರಣೆ ಹಾಗೂ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿಭಾಗವಹಿಸಿ ಉದ್ಘಾಟನೆ ನೆರೆವೆರಿಸಿ ಮಾತನಾಡಿದರು. ಸುಮಾರು ವರ್ಷಗಳಿಂದ ಸರಕಾರದಲ್ಲಿ ಖಾಲಿ ಹುದ್ದೆ ಹಾಗೆಯೇ ಉಳಿಯುತ್ತಿವೆ ಇನ್ನೂ ಇದರ ಅನುದಾನ ಅನ್ಯ ಕೆಲಸಗಳಿಗೆ ಬಳಕೆ ಮಾಡುವುದು ದುರ್ದೈವದ ಸಂಗತಿಯಾಗಿದೆ ಇನ್ನೂ ಈ ಮಹತ್ವದ ಬದಲಾವಣೆಗೆ ಶಿಕ್ಷಣ ಸಚಿವರು ಮಹತ್ವದ ಬದಲಾವಣೆ ತರುವ ಮೂಲಕ ತಂದೆ ಮಾಜಿ ಮುಖ್ಯಮಂತ್ರಿ ದಿ.ಕುಮಾರ್ ಬಂಗಾರಪ್ಪರ ಹಾದಿಯಲ್ಲಿ ನಡೆಯಬೇಕು, ಅದರಂತೆ ಮುಂದಿನ ಶೈಕ್ಷಣಿಕ ಸಮಾವೇಶ ಸಿರಿಗೆರೆ ಶ್ರೀ ಮಠದಲ್ಲಿ ನಡೆಸಲು ನಮ್ಮ ಸಹಾಕಾರವಿದೆ ಎಂದು ಹಿತವಚನ ನುಡಿದರು.ಇನ್ನೂ ರಾಜ್ಯಶಿಕ್ಷಣ ಸಚಿವ ಮಧುಬಂಗಾರಪ್ಪ ಮಾತನಾಡಿ, ಸರಕಾರ ನೀಡಿದಂತಹ ಶಿಕ್ಷಣ, ಸಂಸ್ಕೃತಿ, ಸಂಗೀತ ಶ್ರೀ ತರಳುಬಾಳು ಮಠದಲ್ಲಿ ಶ್ರೀಗಳ ಕೃಪೆಯಿಂದ ಆಭಾಗದ ಮಕ್ಕಳಿಗೆ ಸಿಗುತ್ತಿದೆ ಅದರಂತೆ ಅವರ ಸಲಹೆ ಅವಶ್ಯ, ಈಡೀ ರಾಜ್ಯದಲ್ಲಿ ಸುಮಾರು 76ಸಾವಿರ ಅನುದಾನ ಸಹಿತ, ಹಾಗೂ ಸರಕಾರಿ ಶಾಲೆಗಳು ಇವೆ, ಸುಮಾರು1ಕೋಟಿ20ಲಕ್ಷ, ಮಕ್ಕಳು ಇದ್ದಾರೆ, ಇನ್ನೂ 41ಸಾವಿರ ಪ್ರಾಥಮಿಕ ಶಾಲೆಗಳು ಇದ್ದರೆ, ಪ್ರೌಢಶಾಲೆಗಳು 6ಸಾವಿರ ಶಾಲೆಗಳು ಇವೆ. ಸುಮಾರು 17.ಸಾವಿರದಷ್ಟು ಶಾಲೆಗಳಲ್ಲಿ ಕೇವಲ 25 ಮಕ್ಕಳಂತೆ ಇರುವ ಶಾಲೆಗಳು ಇವೆ, ಹುಟ್ಟಿದ ಪ್ರತಿಯೊಂದು ಮಗುವು ಶಿಕ್ಷಣದಿಂದ ವಂಚಿತವಾಗಬಾರದು ಎಂಬ ಸದುದ್ದೇಶದಿಂದ ಪ್ರತಿಹಳ್ಳಿಯಲ್ಲಿಯೂ ಕೂಡ ಶಾಲೆಗಳು ಗುಣಮಟ್ಟದ ಶಿಕ್ಷಣ ನೀಡುತ್ತಿವೆ, ಅದರಂತೆ ರಾಜ್ಯದಲ್ಲಿ ಮಾದರಿ ಪರೀಕ್ಷೆಗೆ ಕ್ರಮ ಕೈಗೊಳ್ಳಲಾಗಿದೆ, ಯಾವುದೇ ಮಗುವು ಪೇಲ್ ಹಾಗದೇ ಮುಂದಿನ ವ್ಯಾಸಂಗಕ್ಕೆ ಹೊಗುವ ದೃಷ್ಠಕೊನದ ಮೂಲಕ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಮೂಲಕ ಮೂರು ಅವಕಾಶಗಳನ್ನು ನೀಡುವ ಮೂಲಕ ರಾಜ್ಯದಲ್ಲಿ ಮೂರನೇ ಪರೀಕ್ಷೆ ಬರೆದ ಸುಮಾರು 1.ಲಕ್ಷದ 20 ಸಾವಿರ ವಿದ್ಯಾರ್ಥಿಗಳಲ್ಲಿ ಸುಮಾರು 40.ಸಾವಿರ ವಿದ್ಯಾರ್ಥಿಗಳು ಪಾಸ್‌ಹಾಗಿ ಮುಂದಿನ ವ್ಯಾಸಂಗಕ್ಕೆ ಅರ್ಹತೆ ಪಡೆದಿದ್ದಾರೆ ಆದ್ದರಿಂದ ಮುಂದಿನ ದಿನಗಳಲ್ಲಿ ಪೇಲ್ ಮಾಡುವ ಪ್ರಸಂಗ ಇರಬಾರದು ಆದರೆ ಗುಣಮಟ್ಟದ ಶಿಕ್ಷಣದ ಜೊತೆಗೆ ಉತ್ತಮ ರೀತಿಯಲ್ಲಿ ಪರೀಕ್ಷೆ ನಡೆಸುವ ಮೂಲಕ ಪದವಿ ಪೂರ್ವ ಕಾಲೇಜಿನಲ್ಲಿ ಈ ವ್ಯವಸ್ಥೆಗೆ ಕ್ರಮ ಜರುಗಿಸಲಾಗುತ್ತದೆ ಎಂದರು.ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಮಾತನಾಡಿ, ಸಮಾಜದ ಸುಧಾರಣೆಗೆ ಗುಣಮಟ್ಟದ ಶಿಕ್ಷಣ ಜಾಗೃತಿ ಬೆಳೆಯಬೇಕಿದೆ. ಶಿಕ್ಷಣ ಸಂಸ್ಥೆಗಳು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಬೇಕಿದೆ. ಶಿಕ್ಷಣ, ದಾಸೋಹ ಮತ್ತು ಶಿಸ್ತಿಗೆ ಹೆಸರಾಗಿರುವ ಸಿರಿಗೆರೆ ಮಠದ ಶಿಕ್ಷಣ ಸಂಸ್ಥೆಗಳನ್ನು ಅನುಸರಿಸಬೇಕಿದೆ ಎಂದು ಹೇಳಿದರು.ಸ್ಥಳೀಯ ಶಾಸಕ ಟಿ.ರಘುಮೂರ್ತಿ ಮಾತನಾಡಿ, ಶಾಲೆಯಲ್ಲಿ ಮಕ್ಕಳು ಹಸಿವಿನಿಂದ ಬಳಲುಬಾರದು ಎಂದು ವಾರಕ್ಕೆ ಎರಡು ಬಾರಿ ಬಾಳೆಹಣ್ಣು, ಚುಕ್ಕಿ ಹಾಗೂ ಮೊಟ್ಟೆ ನೀಡಲಾಗುತ್ತಿದೆ, ಇನ್ನೂ ರಾಜ್ಯದಲ್ಲಿ ಅತೀ ಶಿಕ್ಷಣಕ್ಕೆ ಅತೀ ಹೆಚ್ಚಿನ ಮಹತ್ವ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ.ಶಿವಕುಮಾರ್ ರವರು ಸಿಎಸ್‌ಆರ್ ಪಂಡ್ ನೀಡುವ ಮೂಲಕ ಶಿಕ್ಷಣಕ್ಕೆ ಒತ್ತು ನೀಡಿದ್ದಾರೆ,ಇದರಂತೆ ರಾಜ್ಯದಲ್ಲಿ ಶಾಲಾ ಕಟ್ಟಡ ಹಾಗೂ ಶಿಥಿಲಎಂಬ ಸಮಸ್ಯೆಗಳಿಗೆ ಮುಕ್ತಿ ಕಾಣಲು ಸನ್ನದಾಗಿದೆ ಎಂದರು.ಬಾಕ್ಸ್ ಮಾಡಿ :ಸರಕಾರಿ ಶಾಲೆ ಶಿಕ್ಷಕರಂತೆ ಖಾಸಗಿ ಶಾಲೆ ಶಿಕ್ಷಕರ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನಕ್ಕೆ ಮುಂದಿನ ದಿನಗಳಲ್ಲಿ ಚರ್ಚೆ ನಡೆಸಲಾಗುತ್ತಿದೆ, ಖಾಸಗಿ ಶಾಲೆ ಶಿಕ್ಷಕರ ಆರೋಗ್ಯ ಸಮಸ್ಯೆ ಹಾಗು ವಿಮೆ ಬಗ್ಗೆ ಆರ್ಥಿಕ ಕೃಡಿಸಿಕೊಂಡು ಪ್ರಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.ಪ್ರಾಸ್ತವಿಕವಾಗಿ ಮಾತನಾಡಿದ ಡಿ.ದಯಾನಂದ ಪ್ರಹ್ಲಾದ್ ರವರು, ಈಡೀ ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಖಾಸಗಿ ಶಾಲೆ ಶಿಕ್ಷಣ ಮಂಡಳಿಗಳನ್ನು ಒಂದು ವೇದಿಕೆಗೆ ತರುವ ಕೆಲಸವಾಗಿದೆ ಅದರಂತೆ ರಾಜ್ಯ ಸರಕಾರ ನಮ್ಮ ಬೇಡಿಕೆಗಳನ್ನು ಗಂಬೀರವಾಗಿ ಪರಿಗಣಿಸಿ ಸರಕಾರಿ ಶಾಲೆಗಳ ಶಿಕ್ಷಕರಂತೆ ಖಾಸಗಿ ಶಾಲೆಗಳ ಶಿಕ್ಷರನ್ನು ನಡೆಸಿಕೊಳ್ಳಬೇಕು, ಗುರುವಿನ ಸ್ಥಾನ ಪವಿತ್ರವಾದದ್ದು ಸರ್ವಕಾಲಕ್ಕೂ ಗುರುಸ್ಥಾನ ಮಹತ್ವ ಪಡೆದಿದೆ ಎಂದರು.ಇನ್ನೂ ಕಾಮ್ಸ್ ಸಂಘಟನೆಯ ಕಾರ್ಯದರ್ಶಿ ಡಿ.ಶಶಿಕುಮಾರ್ ಮಾತನಾಡಿ, ಸರಕಾರಿ ಶಾಲೆಗಳಲ್ಲಿ ವ್ಯಾಸಂಗಮಾಡುವ ಮಕ್ಕಳ ಹಿತ ದೃಷ್ಟಿಯಿಂದ ಬಿಸಿಯೂಟ ಮಾಡಿರುವುದು ಒಳ್ಳೆಯ ಬೆಳವಣಿಗೆ ಆದರಂತೆ ಖಾಸಗಿ ಶಾಲೆಗಳ ಮಕ್ಕಳಿಗೂ ವಿಸ್ತರಿಸಬೇಕು, ಇನ್ನೂ ಶಾಲೆಗಳಿಗೆ ಪರವಾನಿಗೆ ನೀಡುವ ವಿಚಾರದಲ್ಲಿ ಭೂಪರಿವರ್ತನೆ ಎರಡು ಹಂತದಲ್ಲಿ ನೀಡುವುದು ರದ್ದುಪಡಿಸಿ ಶೈಕ್ಷಣಿಕ ಹಿತ ದೃಷ್ಠಿಯಿಂದ ಏಕಮುಖವಾಗಿ ನೀಡಬೇಕು, ರಾಜ್ಯ ಶಿಕ್ಷಣ ನೀತಿಯ ವೈಜ್ಞಾನಿಕ ಚಿಂತನೆಗಳನ್ನು ಜಾರಿಗೊಳಿಸಬೇಕು ಎಂದರು.ಇನ್ನೂ ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್, ರೂಪ್ಸಾ ಕರ್ನಾಟಕ ರಾಜ್ಯಾಧ್ಯಕ್ಷ ಲೋಕೇಶ್ ತಾಳಿಕಟ್ಟೆ, ಕಾಮ್ಸ್ ಸಂಘಟನೆಯ ಕಾರ್ಯದರ್ಶಿಡಿ.ಶಶಿಕುಮಾರ್, ಪ್ರಾಸ್ತವಿಕವಾಗಿ ಮಾತನಾಡಿದ ಡಿ.ದಯಾನಂದ ಪ್ರಹ್ಲಾದ್, ತಾಲೂಕು ಅಧ್ಯಕ್ಷ ಯಾದಲಗಟ್ಟೆ ಜಗನ್ನಾಥ್ ಮಾತನಾಡಿದರು.ಇನ್ನೂ ಕಾರ್ಯಕ್ರಮದಲ್ಲಿ ಶಿಕ್ಷಣ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಜೀವಮಾನ ಸಾಧನಾ ಪ್ರಶಸ್ತಿ-2023ಶಿಕ್ಷಣ ಭೀಷ್ಮ ಪ್ರಶಸ್ತಿ (ಮರಣೋತ್ತರ) : ದಿ.ಲೋಕನಾಥ್, ವೈದ್ಯಶ್ರೀ ಪ್ರಶಸ್ತಿ :ಡಾ|| ಕೆ. ಎಂ. ಜಯಕುಮಾರ್, ಸಾಹಿತ್ಯಶ್ರೀ ಪ್ರಶಸ್ತಿ : ಕೆ.ಎಂ. ಶಿವಸ್ವಾಮಿ, ಶಿಕ್ಷಣಶ್ರೀ ಪ್ರಶಸ್ತಿ : ಡಾ. ಕೆ. ಪಿ. ನಾಗಭೂಷಣ, ಸಹಕಾರಶ್ರೀ ಪ್ರಶಸ್ತಿ : ಮೈಲನಹಳ್ಳಿ ಚಂದ್ರಣ್ಣ, ವಿಶೇಷ ಗೌರವ ಸಮರ್ಪಣೆ ಹೆಚ್. ಗಂಗಣ್ಣ, ಹೆಚ್. ನಾಗರೆಡ್ಡಿಗೆ ನೀಡಲಾಯಿತು.ಇದೇ ಸಂಧರ್ಭದಲ್ಲಿ ಅಧ್ಯಕ್ಷ ಯಾದಲಗಟ್ಟೆ ಜಗನ್ನಾಥ್,ಪಿ. ದಯಾನಂದ್ ಪ್ರಹ್ಲಾದ್, ಡಿ.ನಾಗಪ್ಪ, ಚಿಕ್ಕಣ್ಣ, ಹೆಚ್.ಎಸ್. ರಾಜೇಶ್‌ಗುಪ್ತ, ಆರ್. ಶ್ರೀನಿವಾಸಚಾರ್, ಕೆ.ಪಿ. ನಾಗಭೂಷಣ, ಎಸ್. ಐ. ಬೋರಸ್ವಾಮಿ, ಷೇಕ್ ಪೀರ್,ಬಿ. ರಾಜಕುಮಾರ್, ಕೆ.ಎಂ. ಜಯಕುಮಾರ್, ಹೆಚ್.ನಾಗರೆಡ್ಡಿ, ಕೆ.ಎಂ.ಶಿವಸ್ವಾಮಿ, ಡಿ.ಎನ್.ಶಿವುಪ್ರಸಾದ್, ಮಾರುತಿ ಪ್ರಸಾದ್, ಸುಭಾಷ್ ಲೋಕನಾಥ್, ಗೌರಿಶ್, ಇತರರು ಪಾಲ್ಗೊಂಡಿದ್ದರು.