ಚಳ್ಳಕೆರೆ : ಸರಕಾರ ಕಾನೂನು ರೂಪಿಸಿರುವ ಅನುಸಾರ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಪೌರಕಾರ್ಮಿಕರನ್ನು ಖಾಯಂ ನೇಮಕ ಮಾಡಲಾಗಿದೆ ಆದೇ ರೀತಿಯಲ್ಲಿ ಚಳ್ಳಕೆರೆ ನಗರದ ಪೌರಕಾರ್ಮಿಕರನ್ನು ಖಾಯಂ ಗೊಳಿಸಲು ನಮ್ಮ ಕಾಂಗ್ರೆಸ್ ಸರಕಾರ ಕಟಿಬದ್ದವಾಗಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ಅವರು ನಗರದ ನಗರಸಭೆ ಆವರಣದಲ್ಲಿ ಆಯೋಜಿಸಿದ್ದ ಪೌರಕಾರ್ಮಿಕರ ದಿನಾಚರಣೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು
ದೇಶ ಕಾಯುವ ಸೈನಿಕರಂತೆ ಪೌರಕಾರ್ಮಿಕರು ನಗರದೊಳಗಿನ ಸಾರ್ವಜನಿಕ ರಕ್ಷಣೆಗೆ ಮುಂದಾಗುತ್ತಾರೆ ಇಂತಹ ಕಾರ್ಮಿಕರಿಗೆ ಸೂಕ್ತವಾದ ಭದ್ರತೆ ಹೊದಗಿಸುವುದು ನಮ್ಮಆಧ್ಯ ಕರ್ತವ್ಯ ಆದ್ದರಿಂದ ಪೌರಕಕಾರ್ಮಿಕರ ಖಾಯಂ ನೇಮಕಾತಿಗೆ ಎಲ್ಲಾರೂ ಒಗ್ಗೂಡಿಸುವ ಮೂಲಕ ನಿಮ್ಮ ಸಮಸ್ಯೆ ಗೆ ಪರಿಹಾರ ಕೊಂಡುಕೊಳ್ಳಿ ಎಂದರು.
ಪೌರಾಯುಕ್ತ ಸಿ.ಚಂದ್ರಪ್ಪ ಮಾತನಾಡಿ, ಅತೀ ಕನಿಷ್ಟ ಜೀವನ ನಡೆಸುವ ಹಾಗೂ ಸದಾರಣ ಜೀವಿಸುವ ಏಕೈಕ ವ್ಯಕ್ತಿ ಎಂದರೆ ಪೌರಕಾರ್ಮಿಕ ಅಂತಹ ಕಾರ್ಮಿಕರ ರಕ್ಷಣೆಗೆ ನಗರಸಭೆ ಸದಾ ಬಿದ್ದವಾಗಿದೆ,ಅದರಂತೆ ಪೌರಕಾರ್ಮಿಕ ಆರೋಗ್ಯ ತಪಾಸಣೆ ಹಾಗು ಅವರ ಸುರಕ್ಷಿತ ಬಗ್ಗೆ ಎಚ್ಚಿನಕಾಳಜಿ ವಹಿಸಲಾಗಿದೆ ಎಂದರು.
ಇನ್ನೂ ನಗರಸಭೆ ಸದಸ್ಯರಾದ ಕೆ.ವೀರಭದ್ರಯ್ಯ ಮಾತನಾಡಿ, ಪೌರಕಾರ್ಮಿಕ ಮಕ್ಕಳು ವ್ಯಾಸಂಗದಲ್ಲಿ ಮುಂದೆಬರಬೇಕು, ವಿದ್ಯೆ ಉದ್ದೋಗಕ್ಕಾಲ್ಲದೆ ಜ್ಞಾನ ಕ್ಕಾದರೂ ವಿದ್ಯೆ ಅನಿವಾರ್ಯ ಆದ್ದರಿಂದ ಪೌರಕಾರ್ಮಿಕ ಮಕ್ಕಳ ಕೇವಲ ಪೌರಕಾರ್ಮಿಕರಾಗದೆ ಉನ್ನತಹುದ್ದೆಗಳನ್ನು ಗಿಟ್ಟಿಸಿಕೊಂಡು ಆರ್ಥಿಕವಾಗಿ ಸಬಲರಾಗಿ,
ಪೌರಕಾರ್ಮಿಕ ಹುದ್ದೆ ಭದ್ರತೆ ಇಲ್ಲದೆ ಹೋಗಿದೆ ನಿಮ್ಮ ಜೀವನ ಅತಂತ್ರಸ್ಥಿತಿಯಲ್ಲಿ ಇದೆ, ಯಾವ ಸರಕಾರಗಳು ಇವರ ಬಗ್ಗೆ ಕಾಳಜಿ ವಹಿಸದೆ ಇರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದರು.
ಇನ್ನೂ ಸದಸ್ಯರಾದ ಜಯಲಕ್ಷ್ಮಿ ಕೃಷ್ಣಮೂರ್ತಿ ಮಾತನಾಡಿ, ಪೌರಕಾರ್ಮಿಕರ ಮಕ್ಕಳು ಮತ್ತೆ ಈದೇ ಹುದ್ದೆ ಮಾಡದೆ ಶಿಕ್ಷಣದಲ್ಲಿ ಮುಂದೆ ಬನ್ನಿ , ದೇಶ ಕಾಯುವ ಸೈನಿಕರಿಗೆ ಯಾವ ಗೌರವ ಇದೆ ಆದೇ ರೀತಿಯಲ್ಲಿ ನಗರ ಸ್ವಚ್ಛತೆಯಲ್ಲಿ ತೊಡಗಿದ ನೌಕರರಿಗೆ ಅದೇ ಗೌರವ ಸಲ್ಲಬೇಕು, ದಿನ ಗೂಲಿ ನೌಕರರು ಖಾಯಂ ನೌಕರರನ್ನಾಗಿ ಮಾಡುವುದು ಸರಕಾರದ ಆಶಯವಾಗಿದೆ. ಮುಂಬರುವ ದಿನಗಳಲ್ಲಿ ಈಗೀರುವ ಗುತ್ತಿಗೆ, ಹೊರ ಗುತ್ತಿಗೆ ತೆಗೆದು ನೇರಪಾವತಿ ಹಾಗೂ ಖಾಯಂ ನೌಕರರನ್ನಾಗಿ ಸರಕಾರ ಪರಿಗಣಿಸಬೇಕು,ಇನ್ನೂ ಪೌರಕಾರ್ಮಿಕ ಮಕ್ಕಳು ಶಿಕ್ಷಣಕ್ಕೆ ಹೆಚ್ಚಿನ ಆಧ್ಯತೆ ನೀಡಬೇಕು ಎಂದರು.
ಇನ್ನೂ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಬಾಬುಜಗಜೀವನ್ ರಾಮ್ ರಾವರ ಭಾವಚಿತ್ರವನ್ನು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡುವ ಮೂಲಕ ಸಭಾ ಕಾರ್ಯಕ್ರಮಕ್ಕೆ ಆಗಮಿಸಿದರು.
ಎಲ್ಲಾ
ಪೌರಕಾರ್ಮಿಕರನ್ನು ಶಾಸಕ ಟಿ.ರಘುಮೂರ್ತಿ ಸನ್ಮಾನಿಸಿದರು
ಇದೇ ಸಂಧರ್ಭದಲ್ಲಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಜೆ.ರಾಘವೇಂದ್ರ, ಎಂ.ಮಲ್ಲಿಕಾರ್ಜುನ, ಕೆ.ವೀರಭದ್ರಪ್ಪ, ಮಂಜುಳಾ ಪ್ರಸನ್ನ ಕುಮಾರ್, ಜೈತುಂಬಿ, ಸುಮಾ ಭರಮಯ್ಯ, ಪೌರಾಯುಕ್ತ ಸಿ.ಚಂದ್ರಪ್ಪ, ಹಾಗೂ ಪೌರಕಾರ್ಮಿಕರು, ಸಿಬ್ಬಂದಿ ವರ್ಗ ಪಾಲ್ಗೊಂಡಿದ್ದರು.