ಚಿತ್ರದುರ್ಗ, ಸೆ. 5 – ವಿ
ಚಿತ್ರದುರ್ಗ, ಸೆ. 5 – ವಿದ್ಯಾರ್ಥಿಯ ಸರ್ವತೋಮುಖ ಅಭಿವೃದ್ಧಿ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಪ್ರಾಚಾರ್ಯರಾದ ಡಾ. ಎಸ್.ಹೆಚ್. ಪಂಚಾಕ್ಷರಿ ಹೇಳಿದರು.
ನಗರದ ಚಂದ್ರವಳ್ಳಿಯ ಎಸ್.ಜೆ.ಎಂ. ಪದವಿ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿ.ಎ., ಬಿ.ಕಾಂ. ಮತ್ತು ಬಿ.ಎಸ್ಸಿ. ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಪುನಶ್ಚೇತನ ಕರ‍್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶಿಕ್ಷಣ ಎಂದರೆ ಕೇವಲ ಪಠ್ಯಕ್ರಮದ ಅಧ್ಯಯನ ಪರೀಕ್ಷೆ, ಫಲಿತಾಂಶ ಮಾತ್ರವಲ್ಲ ಅದು ವಿದ್ಯಾರ್ಥಿಯ ಪರಿಪೂರ್ಣ ವ್ಯಕ್ತಿತ್ವದ ವಿಕಾಸ. ಅವನಲ್ಲಿ ಸುಪ್ತವಾಗಿರುವ ಅನನ್ಯ ಪ್ರತಿಭೆಯ ಅನಾವರಣ. ಹಾಗಾದಾಗ ಮಾತ್ರ ಶಿಕ್ಷಣಕ್ಕೆ ಒಂದು ಅರ್ಥಪೂರ್ಣತೆ ಬರುತ್ತದೆ. ನಮ್ಮ ಮಹಾವಿದ್ಯಾಲಯವು ಬೋಧನೆಯ ಜೊತೆಗೆ ವಿದ್ಯಾರ್ಥಿಯ ಪ್ರತಿಭೆಯ ಅನಾವರಣಕ್ಕೆ ಪೂರಕವಾದ ಶೈಕ್ಷಣಿಕ ಸೌಲಭ್ಯಗಳನ್ನು ಹೊಂದಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಹೇಳಿದರು.
ಕಲಾ ವಿಭಾಗದಲ್ಲಿರುವ ಸೌಲಭ್ಯಗಳನ್ನು ಕುರಿತು ರಾಜ್ಯಶಾಸ್ತç ವಿಭಾಗದ ಪ್ರೊ.ಆರ್.ಕೆ. ಕೇದಾರನಾಥ್, ವಿಜ್ಞಾನ ವಿಭಾಗದ ಕುರಿತು ಪ್ರೊ. ಎಲ್. ಶ್ರೀನಿವಾಸ್, ವಾಣಿಜ್ಯ ವಿಭಾಗದ ಕುರಿತು ಪ್ರೊ. ಬಿ.ಎಂ. ಸ್ವಾಮಿ, ಗ್ರಂಥಾಲಯ ಸೌಲಭ್ಯದ ಕುರಿತು ಡಾ. ಸತೀಶ್‌ನಾಯ್ಕ ರಾ.ಸೇ.ಯೋ. ಸೌಲಭ್ಯಗಳ ಕುರಿತು ಪ್ರೊ. ಟಿ.ಎನ್.ರಜಪೂತ್, ವಿದ್ಯಾರ್ಥಿ ವೇತನ ಸೌಲಭ್ಯದ ಕುರಿತು ಪ್ರೊ. ಮಂಜುನಾಥಸ್ವಾಮಿ, ಕ್ರೀಡಾ ವಿಭಾಗದ ಕುರಿತು ಗುರುರಾಜ್ ಮಾಹಿತಿ ನೀಡಿದರು.
ಐಕ್ಯೂಎಸಿ ಸಂಯೋಜಕರಾದ ಡಾ. ಹರ್ಷವರ್ಧನ್ ಮಾತನಾಡಿ, ರಾಷ್ಟಿçÃಯ ಶಿಕ್ಷಣ ನೀತಿ 2020 ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಪರೀಕ್ಷಾ ವಿಧಾನ, ಅಂಕಗಳ ನಿಯೋಜನೆ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಇರುವ ಮಾಹಿತಿ ಹಾಗೂ ಪದವಿ ನಂತರ ವಿದ್ಯಾರ್ಥಿಗಳಿಗೆ ಇರುವ ಉದ್ಯೋಗಾವಕಾಶಗಳನ್ನು ಕುರಿತು ಮಾಹಿತಿ ನೀಡಿದರು.
ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ. ಜಿ.ಎನ್. ಬಸವರಾಜಪ್ಪ ಪ್ರಾಸ್ತಾವಿಕವಾಗಿ ಮಾತನಾಡುತ್ತ, 1969ರಲ್ಲಿ ಲಿಂ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮಿಗಳ ದೂರದೃಷ್ಟಿಯ ಫಲವಾಗಿ ಆರಂಭಗೊAಡ ಈ ಕಾಲೇಜು ಅಂದಿನಿAದ ಈವರೆಗೆ ಚಿತ್ರದುರ್ಗ ಮತ್ತು ಸುತ್ತಲ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ವಿದ್ಯಾದಾಹವನ್ನು ಪೂರೈಸುತ್ತ ಶೈಕ್ಷಣಿಕ ಕ್ಷೇತ್ರದಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ, ವಿದ್ಯಾರ್ಥಿಗಳ ಸುಪ್ತ ಪ್ರತಿಭೆಗಳ ಅನಾವರಣಕ್ಕೆ ವೇದಿಕೆಯನ್ನು ಕಲ್ಪಿಸಿ ಅವರಿಗೆ ಕೌಶಲ್ಯಾಧಾರಿತ ಶಿಕ್ಷಣವನ್ನು ನೀಡುತ್ತ ಬಂದಿದೆ. ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.
ಕರ‍್ಯಕ್ರಮದಲ್ಲಿ ಕಾಲೇಜಿನ ಪ್ರಾಧ್ಯಾಪಕರುಗಳಾದ ಪ್ರೊ. ಎನ್. ಚಂದಮ್ಮ, ಪ್ರೊ. ನಾಜಿರುನ್ನೀಸಾ, ಪ್ರೊ. ಸಿ.ಎನ್. ವೆಂಕಟೇಶ್, ಪ್ರೊ. ನಳಿನ, ಮಧು, ಮೋಹನ್, ಬಸವರಾಜ್, ಮಲ್ಲಿಕಾರ್ಜುನ್, ಹರೀಶ್, ಮಾಧುರಿ ಹೀನಾ ಹಾಗು ಪ್ರಥಮ ವರ್ಷದ ಬಿ.ಎ., ಬಿ.ಕಾಂ. ಬಿ.ಎಸ್ಸಿ. ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕು. ಕಾವ್ಯ ಪ್ರಾರ್ಥಿಸಿದರು. ಪ್ರೊ. ಜಿ.ಎನ್. ಬಸವರಾಜಪ್ಪ ಸ್ವಾಗತಿಸಿದರು. ಡಾ. ಬಿ. ರೇವಣ್ಣ ನಿರೂಪಿಸಿ ವಂದಿಸಿದರು.
ನ