ವಿಶ್ವಕರ್ಮ ಜಯಂತೋತ್ಸವ ಕಾರ್ಯಕ್ರಮ

ಚಳ್ಳಕೆರೆ : ಪಂಚ ಕಸುಬುದಾರರು ಚಿನ್ನ, ಬೆಳ್ಳಿ, ಕಬ್ಬಿಣ, ಮರ ಕೆಲಸ ಶಿಲ್ಪಿಗಳಂತಹ ಕೆಲಸಗಳನ್ನು ಋದ್ವೇಗ ಕಾಲದಿಂದಲೂ ನಿಮ್ಮ ನೆಲಗಟ್ಟಿನ ಸಂಸ್ಕೃತಿಯಲ್ಲಿ ಸ್ವಾವಲಂಬಿಗಳಾಗಿ ಜೀವನ ಮಾಡುತ್ತಿದ್ದೀರಿ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು
ಅವರು ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ರಾಷ್ಟ್ರೀಯ ವಿಶ್ವಕರ್ಮ ಸಮಾಜ ಅಭಿವೃದ್ಧಿ ಸಂಘ ವಿಶ್ವಕರ್ಮ ಚಿನ್ನ, ಬೆಳ್ಳಿ ಗಿರಿ ವರ್ತಕರ ಸಂಘ ವಿಶ್ವಕರ್ಮ ಯುವಕ ಸಂಘ ಹಾಗೂ ಮಹಿಳಾ ಸಂಘ ಸಹಯೋಗದೊಂದಿಗೆ 46ನೇ ವರ್ಷದ ವಿಶ್ವಕರ್ಮ ಜಯಂತೋತ್ಸವ ಕಾರ್ಯಕ್ರಮ ಒಂದಕ್ಕೆ ಭಾಗವಹಿಸಿ ಶ್ರೀ ಭಗವಾನ್ ವಿಶ್ವಕರ್ಮ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಇವರು
ವಿಶ್ವಕರ್ಮ ಸಮುದಾಯವು ರಾಷ್ಟ್ರ ರಾಜಕೀಯ ಹಾಗೂ ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಹಿಂದುಳಿದ ಸಮಾಜ ವಾಗಿದ್ದು ನಿಮ್ಮ ಸಮುದಾಯವು ಕಲೆಯಲ್ಲಿ ಶ್ರೀಮಂತರು ಹಿಂದೂ ಧರ್ಮದ ನೂರಾರು ದೇವಾಲಯಗಳನ್ನು ಅಮರಶಿಲ್ಪಿ ಜಕಣಾಚಾರ್ಯರು ತಮ್ಮ ಶಿಲ್ಪಕಲೆಯಿಂದ ಇಡೀ ವಿಶ್ವವೇ ಬೆರಗಾಗುವಂತಹ ಕೆಲಸ ಮಾಡಿದ್ದಾರೆ ಅದು ಅಲ್ಲದೆ ಮರ ಕೆಲಸ ಮಾಡುವವರು ಎಲ್ಲ ದೇವಾಲಯಗಳ ರಥಗಳನ್ನು ನಿರ್ಮಿಸಿ ಎಲ್ಲಾ ಸಮುದಾಯಗಳಿಗೆ ಬೆಳಕು ಚೆಲ್ಲಿದ್ದಾರೆ ಎಂದರು.
ಇನ್ನು ಈ ಸಂದರ್ಭದಲ್ಲಿ ಚಿತ್ರದುರ್ಗ ಶಾಸಕ ವೀರೇಂದ್ರ ಪಪ್ಪಿ ಮಾತನಾಡಿ ಹಿಂದೂ ಧರ್ಮದ ಮೂಲ ಸಮುದಾಯವಾಗಿದ್ದು ಈ ಹಿನ್ನಲೆಯಲ್ಲಿ ಆಚಾರ-ವಿಚಾರಗಳನ್ನು ಅರಿತು ಎಲ್ಲ ಸಮುದಾಯದೊಂದಿಗೆ ಅವಿನಾಭಾವ ಸಂಬAಧವಿಟ್ಟು ಕೊಂಡಿದ್ದೀರಿ, ಸಮುದಾಯಕ್ಕೆ ರಾಷ್ಟ್ರ ರಾಜಕೀಯ ಆರ್ಥಿಕ ಹಿನ್ನೆಲೆಯಲ್ಲಿ ಉತ್ತಮವಾದ ಭವಿಷ್ಯವಿದೆ, ನಿಮ್ಮ ಸಮುದಾಯವು ಸಂಘಟನೆಯ ಮೂಲಕ ರಾಷ್ಟ್ರ ರಾಜಕೀಯಕ್ಕೆ ಬಂದರೆ ಅಂತಹ ವ್ಯಕ್ತಿಗಳಿಗೆ ನಮ್ಮ ಪಕ್ಷ, ನಾವು ಮನ್ನಣೆ ಕೊಡುತ್ತೇವೆ ಎಂದರು.
ಜೆಡಿಎಸ್ ಮುಖಂಡ ಎಂ. ರವೀಶ್ ಕುಮಾರ್ ಮಾತನಾಡಿ, ವಿಶ್ವ ಸೃಷ್ಟಿಕರ್ತ ಭಗವಾನ್ ಶ್ರೀ ವಿಶ್ವಕರ್ಮ ಆಗಿರುತ್ತಾರೆ ವಿಶ್ವಕರ್ಮ ಸಮುದಾಯದವರು, ಇಂತಹ ಸಮುದಾಯಕ್ಕೆ ಮುಂದಿನ ದಿನಗಳಲ್ಲಿ ರಾಜಕೀಯ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ನಿಮ್ಮ ಸಮುದಾಯವನ್ನು ಮುಂಚೂಣಿಯಲ್ಲಿ ತರುತ್ತೇನೆ, ಸಮುದಾಯದ ವರ್ಗದವರು ಚಿನ್ನ ಬೆಳ್ಳಿ ಕೆಲಸ ಕಮ್ಮಾರಿಕೆ ಶಿಲ್ಪಿ ಕಬ್ಬಿಣ ಕೆಲಸ ಮಾಡಿ ಜೀವನ ನಡೆಸುತ್ತಿದ್ದೀರಿ ಎಲ್ಲ ಸಮುದಾಯಗಳಿಗೆ ವಿಶ್ವಕರ್ಮ ಸಮುದಾಯವು ಪ್ರತಿಯೊಂದು ಕೆಲಸಗಳನ್ನು ಮಾಡಿ ಕೊಟ್ಟು ಸಮಾಜಮುಖಿಯಾಗಿದ್ದೀರಿ ಎಂದು ತಿಳಿಸಿದರು
ಇನ್ನು ಈ ಸಂದರ್ಭದಲ್ಲಿ ಪಾವಗುಡ ರಸ್ತೆಯಲ್ಲಿ ಬರುವ ಐಸಿಐಸಿ ಬ್ಯಾಂಕ್ ಪಕ್ಕ ವಿಶ್ವಕರ್ಮನ ವೃತ್ತ ನಿರ್ಮಿಸಿ ವಿಶ್ವಕರ್ಮನ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು
ಇನ್ನು ಈ ವೇಳೆ 85ಕ್ಕಿಂತ ಹೆಚ್ಚು ಅಂಕ ಪಡೆದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು
ಇನ್ನು ತೆರೆದ ವಾಹನದಲ್ಲಿ ವಿಶ್ವಕರ್ಮನ ಭಾವಚಿತ್ರವಿಟ್ಟು ನಗರದ ಪ್ರಮುಖ ಬೀದಿಗಳಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು

ಇನ್ನು ಈ ವೇಳೆ ಬೆಂಗಳೂರಿನ ಕನ್ನಡ ಸೋಮು, ವಿಶ್ವಕರ್ಮ ರಾಷ್ಟ್ರೀಯ ಅಧ್ಯಕ್ಷ ಆರ್.ಪ್ರಸನ್ನ ಕುಮಾರ್ ಮಾತನಾಡಿದರು
ಇನ್ನು ಈ ಸಂದರ್ಭದಲ್ಲಿ ರಾಷ್ಟ್ರೀಯ ವಿಶ್ವಕರ್ಮ ಅಧ್ಯಕ್ಷ ಡಿ.ವೆಂಟೇಶ ಆಚಾರ್, ಡಿವೈಎಸ್ಪಿ ರಾಜಣ್ಣ, ಮಾಜಿ ನಗರಸಭೆ ಉಪಾಧ್ಯಕ್ಷ ಮಂಜುಳಾ ಪ್ರಸನ್ನ ಕುಮಾರ್, ಮಾಜಿ ನಗರಸಭೆ ಅಧ್ಯಕ್ಷ ಸುಮಕ್ಕ, ಬಿಹಾರ್ ಕೃಷ್ಣಚಾರ್, ವಕೀಲರಾದ ಸುಮಲತಾ, ಸರಸ್ವತಿ ಶ್ರೀನಿವಾಸ್, ಯುವಕ ಸಂಘದ ಅಧ್ಯಕ್ಷ ವೆಂಕಟೇಶ್ ಆಚಾರ್, ಈ ಪ್ರಸನ್ನ ಕುಮಾರ್ ಸೇರಿದಂತೆ ಅನೇಕ ವಿಶ್ವಕರ್ಮ ಬಾಂಧವರು ಭಾಗಿಯಾಗಿದ್ದರು

About The Author

Namma Challakere Local News
error: Content is protected !!