ಶಿಲ್ಪಿ ಕಲೆಯನ್ನು ನಾವು ಆರಾಧಿಸಬೇಕು ಸಮಸ್ತ ಜನಾಂಗಕ್ಕೆ ವಿಶ್ವಕರ್ಮ ಕೊಡಗೆ ಅನನ್ಯ
ಚಳ್ಳಕೆರೆ : ಶಿಲ್ಪಿ ಕಲೆಯನ್ನು ನಾವು ಆರಾಧಿಸಬೇಕು ಸಮಸ್ತ ಜನಾಂಗಕ್ಕೆ ವಿಶ್ವಕರ್ಮ ಕೊಡಗೆ ಅನನ್ಯ ರಾಮಾಯಣ, ಮಹಾಭಾರತ ಕಾಲದಲ್ಲಿ ವಿಶ್ವಕರ್ಮನ ಕೊಡಗೆಗೆಳು ಉಲ್ಲೇಖವಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ನಗರದ ತಾಲೂಕು ಕಛೇರಿಯಲ್ಲಿ ಆಯೋಜಿಸಿದ್ದ ತಾಲ್ಲೂಕು ಆಡಳಿತ ರಾಷ್ಟಿçಯ ಹಬ್ಬಗಳ ಆಚರಣಾ ಸಮಿತಿ ಹಾಗೂ ವಿಶ್ವಕರ್ಮ ಸಮುದಾಯದಿಂದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದ ಉದ್ಟಾಟನೆ ನೆರವೇರಿಸಿ ಮಾತನಾಡಿದರು. ಇತಿಹಾಸ ಹಾಗೂ ದೇವರ ರೂಪತೋರಿಸಿದ ಸಮಾಜ ವೆಂದರೆ ಅದು ವಿಶ್ವಕರ್ಮ ಸಮಾಜ, ದೇವರ ರೂಪ ಎಂಬುದನ್ನು ಶಿಲೆಗಳನ್ನು ಕೆತ್ತುವುದರ ಮೂಲಕ ತೋರಿಸಿದ ಸಮುದಾಯ ವಿಶ್ವಕರ್ಮ ಸಮುದಾಯ ಮಣ್ಣು, ಮರ, ಕಲ್ಲು, ಲೋಹಗಳನ್ನು ಬಳಸಿ ಅಸ್ತçಗಳು, ಸಾದನ, ಸಲಕರಣೆಗಳು ರಥಗಳು, ಮಹಲುಗಳು, ಶಿಲ್ಪಗಳು ಸೇರಿದಂತೆ ಕರಕೌಸಲ ಉಳ್ಳವರಾಗಿದ್ದು ಇವರ ಕೈಯಲ್ಲಿ ಮರದ ಕೊರಡು ಕಲೆಯಾಗಿರುತ್ತದೆ. ಕಲ್ಲು ಶಿಲೆಯಾಗಿತ್ತದೆ. ಈ ಜಗತ್ತು ಬೇಕಾದ ಎಲ್ಲವನ್ನೂ ಸೃಷ್ಟಿಸುವರು ವಿಶ್ವಕರ್ಮದವರು ಎಂದರು.
ತಹಶೀಲ್ದಾರ್ ರೇಹಾನ್ ಪಾಷ ಮಾತನಾಡಿ, ಶಿಲ್ಪಿಕಲೆಯನ್ನು ನಾವು ಆರಾಧಿಸಬೇಕು ಸಮಸ್ತ ಜನಾಂಗಕ್ಕೆ ವಿಶ್ವಕರ್ಮ ಕೊಡಗೆ ಅನನ್ಯ, ಆನಾದಿಕಾಲದಿಂದಲೂ ದೇವಾಲಯಗಳ ನಿರ್ಮಾಣದ ಕಾಲದಲ್ಲಿ ಶಿಲ್ಪಕಲೆಗಳನ್ನು ನಿರ್ಮಿಸಿ ಶಿಲ್ಪ ಕಲೆಕೊಡಗೆಯನ್ನು ನೀಡಿದವರು ವಿಶ್ವಕರ್ಮ ಸಮುದಾಯ ಸಮಸ್ತ ಜನಾಂಗಕ್ಕೆ ಸಾಧನೋಪಕರಣಗಳನ್ನು ಮಾಡಿಕೊಡುವವರು ಕೂಡ ಇವಾರಾಗಿದ್ದಾರೆ. ವಿಶ್ವಕರ್ಮ ಮಹಿಳೆಯರು ಸಹಶ್ರಮ ಜೀವಿಗಳಾಗಿದ್ದು ವಿಗ್ರಹ ತಯಾರಿಕೆಯಲ್ಲಿ ಇವರ ಸಹಕಾರ ವಿರುತ್ತದೆ ಎಂದರು.
ಈ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿಗಳಾದ ರೇಹಾನ್ ಪಾಷಾ, ಪೌರಾಯುಕ್ತರರಾದ ಚಂದ್ರಪ್ಪ, ಡಿ.ವೈ.ಎಸ್‌ಪಿ.ರಾಜಣ್ಣ, ವಿಶ್ವಕರ್ಮ ಸಮುದಾಯದ ತಾಲ್ಲೂಕು ಅಧ್ಯಕ್ಷರಾದ ವೆಂಕಟೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವೀರಭದ್ರಪ್ಪ, ನಗರಸಭೆ ಸದಸ್ಯರಾದ ಸುಮಾ ಭರಮಯ್ಯ, ಕವಿತಾ ಬೋರಯ್ಯ, ಸುಜಾತ ಪ್ರಹ್ಲಾದ್, ಮಲ್ಲಿಕಾರ್ಜುನ, ಸಮುದಾಯದ ಮುಖಂಡರಾದ ಸರಸ್ವತಮ್ಮ, ಮಂಜುಳಮ್ಮ, ಜಯವೀರಾಜಾರಿ, ಶ್ರೀನಿವಾಸ್, ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಮತ್ತು ಸಮುದಾಯದವರು ಉಪಸ್ಥಿತರಿದ್ದರು.