ಚಳ್ಳಕೆರೆ : ಖಾಸಗಿ ಬಸ್ – ಆಟೋ ಮಧ್ಯೆ ಅಫಘಾತ..
ಸ್ಥಳದಲ್ಲಿ ಇಬ್ಬರ ಸಾವು
ಚಳ್ಳಕೆರೆ : ಖಾಸಗಿ ಬಸ್ ಹಾಗೂ ಆಟೋ ರೀಕ್ಷಾ ಮುಖಾ ಮುಖಿ ಡಿಕ್ಕಿ ಸ್ಥಳದಲ್ಲೇ ಇಬ್ಬರ ಸಾವು
ಚಳ್ಳಕೆರೆ ತಾಲೂಕಿನ ಬಾಲೆನಹಳ್ಳಿ ಗೇಟ್ ಸಮೀಪದ ವಸತಿ ಶಾಲೆಯ ಸಮೀಪ ಈ ದುರ್ಘಟನೆ ನಡೆದಿದೆ
ಚಳ್ಳಕೆರೆ ಮಾರ್ಗವಾಗಿ ಚಲಿಸಿದ ಖಾಸಗಿ ಬಸ್ ಎದುರುಗಡೆಯಿಂದ ಬರುವ ಆಟೋ ಗೆ ಮುಖಾ ಮುಖಿ ಡಿಕ್ಕಿಯಾಗಿ ಗುದ್ದಿರುವುದರಿಂದ ಆಟೋ ಸಂಪೂರ್ಣವಾಗಿ ಬಸ್ ಕೆಳಗೆ ಸಿಲುಕಿ ನಜ್ಜು ಗುಜ್ಜಾಗಿದೆ ಇನ್ನೂ ಆಟೋದಲ್ಲಿ ಇದ್ದ ಇಬ್ಬರು ಆಟೋದಲ್ಲಿ ಸಿಲುಕಿ ಸಾವನಪ್ಪಿದ್ದಾರೆ. ಚಾಲಕರ ಅಜಾಗರೂಕತೆಯಿಂದ ಈ ದುರ್ಘಟನೆ ಸಂಭವಿಸಿದೆ ಎಂದು ಪ್ರತ್ಯಕ್ಷ ದರ್ಶಿಗಳು ಮಾಹಿತಿ ನೀಡಿದ್ದಾರೆ
ಇನ್ನೂ ಸ್ಥಳೀಕ್ಕೆ ಜಿಲ್ಲಾ ಹೆಚ್ಚುವರಿ ವರಿಷ್ಠಾಧಿಕಾರಿ ಕುಮಾರಸ್ವಾಮಿ, ಡಿವೈಎಸ್ ಪಿ ಅನಿಲ್ ಕುಮಾರ್, ಚಿತ್ರದುರ್ಗ ಗ್ರಾಮಾಂತರ ಠಾಣೆಯ ಪಿಎಸ್ ಐ ಮುದ್ದುರಾಜ್ ಹಾಗು ಸಿಬ್ಬಂದಿ ವರ್ಗ ಇದ್ದರು.