ಮನುಷ್ಯ ಅನಾರೋಗ್ಯದಿಂದ ಬಳಲದೆ ಆರೋಗ್ಯವಂತ ಜೀವನ ನಡೆಸಬೇಕು : ಶಾಸಕ ಟಿ.ರಘುಮೂರ್ತಿ
ಚಳ್ಳಕೆರೆ : ಮನುಷ್ಯನ ಆರೋಗ್ಯ ಹಿತ ದೃಷ್ಠಿಯಿಂದ ಕೇಂದ್ರ ಮತ್ತು ರಾಜ್ಯ ಸರಕಾರ ಹಲವು ಯೋಜನೆಗಳನ್ನು ಜಾರಿಗೆ ತರುವ ಮೂಲಕ ಉತ್ತಮ ಆರೋಗ್ಯಕ್ಕೆ ನಾಂದಿ ಹಾಡಿದೆ ಎಂದು ಸ್ಥಳೀಯ ಶಾಸಕ ಟಿ.ರಘುಮೂರ್ತಿ ಹೇಳಿದರು.
ಅವರು ನಗರದ ಸಾರ್ವಜನಿಕ ಆಸ್ವತ್ರೆಯ ತಾಯಿ ಮತ್ತು ಮಕ್ಕಳ ಆಸ್ವತ್ರೆಯಲ್ಲಿ ಆಮ್ಮಿಕೊಂಡು ಆಯುಷ್ಮಾನ್ ಭವ ಕಾರ್ಯಕ್ರವನ್ನು ವಚ್ಯುವಲ್ ಮೂಲಕ ಉದ್ಘಾಟಿಸಿದ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು, ಮನುಷ್ಯ ಅನಾರೋಗ್ಯದಿಂದ ಬಳಲದೆ ಆರೋಗ್ಯವಂತ ಜೀವನ ನಡೆಸಬೇಕು ಆದ್ದರಿಂದ ಸರಕಾರದ ಪ್ರತಿ ಮನೆ ಮನೆಗೂ ಆಯುಷ್ಮಾನ್ ಕಾರ್ಡ್ ವಿತರಿಸುವುದು, ಹಾಗೂ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಲ್ಲಿ ಪ್ರತಿ ಮಂಗಳವಾರ ಆರೋಗ್ಯ ಮೇಳ ಆಯೋಜಿಸಿ, ಸಂಕ್ರಾಮಿಕ ರೋಗಗಳು, ಅಸಂಕ್ರಾಮಿಕ ರೋಗಗಳು, ತಾಯಿ ಮತ್ತು ಮಕ್ಕಳ ಸೇವೆ ಹಾಗೂ ಚುಚ್ಚುಮದ್ದು ಸೇವೆಗಳನ್ನು ನೀಡಲಾಗುವುದು ಎಂದರು.
ಇನ್ನೂ ತಾಲೂಕು ಆರೋಗ್ಯ ಅಧಿಕಾರಿ ಡಾ.ಕಾಶಿ ಮಾತನಾಡಿ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಪ್ರತಿ ಮಂಗಳವಾರ ಆರೋಗ್ಯ ಮೇಳ ಆಯೋಜಿಸಿ ವೈದ್ಯಕೀಯ ಕಾಲೇಜು ಇವರ ಸಂಯುಕ್ತಶ್ರಯದಲ್ಲಿ ತಜ್ಞನ ವೈದ್ಯರನ್ನು ಕರೆತರೆಸಿ ತಪಾಸಣೆ ನಡೆಸುವುದು, ಎಲ್ಲಾ ಗ್ರಾಮ ಪಂಚಾಯಿತಿಯ ವ್ಯಾಪ್ತಿಗೆ ಬರುವ ಹಳ್ಳಿಗಳಲ್ಲಿ ಮತ್ತು ಗ್ರಾಮ ವಾರ್ಡ್ ಗಳಲ್ಲಿ ಅಕ್ಟೋಬರ್ 02 ತಾರೀಖು ಆಯುಷ್ಮಾನ್ ಸಭಾ ನಡೆಸಿ ಆರೋಗ್ಯ ಇಲಾಖೆಯ ಎಲ್ಲಾ ಸೇವೆಗಳು ಮತ್ತು ಸಾಂಕ್ರಾಮಿಕ ಹಾಗೂ ಅಸಾಂಕ್ರಾಮಿಕ ರೋಗಗಳ ಬಗ್ಗೆ ಸಂಕ್ಷಿಪ್ತವಾಗಿ ಮಾಹಿತಿ ನೀಡುವುದು, ಆಯುಷ್ಮಾನ್ ಕ್ಯಾಂಪನ್ನಲ್ಲಿ ರಕ್ತದಾನದ ಕ್ಯಾಂಪ್ ಅಯೋಜಿಸುವುದು ಮತ್ತು ಅಂಗಾAಗ ದಾನದ ಪ್ರತಿಜ್ಞಾನ ವಿಧಿ ಬೋಧಿಸುವುದು, ಸ್ವಚ್ಛ ಭಾರತ ಅಭಿಯಾನದ ಅಡಿಯಲ್ಲಿ ಎಲ್ಲಾ ಆಸ್ಪತ್ರೆಯ ಆವರಣಗಳು ಸ್ವಚ್ಛವಾಗಿಡುವುದು ಇ ಕಾರ್ಯಕ್ರಮದ ಪ್ರಮುಖ ಉದ್ದೆಶವಾಗಿದೆ ಎಂದರು.
ಇದೇ ಸಂಧರ್ಭದಲ್ಲಿ ತಾಲೂಕು ಸಾರ್ವಜನಿಕರ ಆಸ್ವತ್ರೆಯ ವೈದ್ಯಾಧಿಕಾರಿ ಡಾ.ವೆಂಕಟೇಶ್, ನಗರಸಭೆ ಪೌರಾಯುಕ್ತ ಸಿ.ಚಂದ್ರಪ್ಪ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಜೆ.ರಾಘವೇAದ್ರ, ಕಾಂಗ್ರೇಸ್ ಮುಖಂಡ ಸಿರಿಯಪ್ಪ, ಆರ್.ಪ್ರಸನ್ನ ಕುಮಾರ್, ಕೃಷ್ಣಮೂರ್ತಿ, ಆರೋಗ್ಯ ಇಲಾಖೆಯ ಸಹಾಯಕ ಅಧಿಕಾರಿ ಕುದಾಪುರ ತಿಪ್ಪೆಸ್ವಾಮಿ, ಡಾ.ಪಂಕಜ, ಡಾ.ನಾಗರಾಜ್,ಡಾ. ಜಯಲಕ್ಷಿö್ಮ, ಶ್ರೂಶುಕಿಯರು, ಸಿಬ್ಬಂದಿ ವರ್ಗ ಇತರರು ಇದ್ದರು.