ಸಚಿವ ಡಿ.ಸುಧಾಕರ್ ರಾಜಿನಾಮೆಗೆ ದಲಿತ ಸಂಘರ್ಷ ಸಮಿತಿವತಿಯಿಂದ ತಹಶೀಲ್ದಾರ್ ಗೆ ಮನವಿ
ಚಳ್ಳಕೆರೆ : ಬೆಂಗಳೂರು ಜಿಲ್ಲೆ ಯಲಹಂಕ ತಾಲ್ಲೂಕಿನಲ್ಲಿ ದಲಿತರ ಭೂಮಿಯನ್ನು ಕಬಳಿಸಿ ಅಕ್ರಮ ದಾಖಲೆಗಳನ್ನು ಸೃಷ್ಠಿಸಿಕೊಂಡು ದಲಿತರ ಮೇಲೆ ದೌರ್ಜನ್ಯ ಮತ್ತು ಜಾತಿ ನಿಂದನೆ ಮಾಡಿ ಕೊಲೆ ಬೆದರಿಕೆ ಹಾಕಿರುವ ಚಿತ್ರದುರ್ಗ ಜಿಲ್ಲಾ ಉಸ್ತೂವಾರಿ ಸಚಿವ ಡಿ.ಸುಧಾಕರ್ ಅವರನ್ನು ಈ ಕೂಡಲೆ ಸಚಿವ ಸ್ಥಾನದಿಂದ ಅಮಾನತ್ತು ಮಾಡುವಂತೆ ಒತ್ತಾಯಿಸಿ ಮನವಿ ಸಲ್ಲಿಸಿದ್ದಾರೆ.
ಚಳ್ಳಕೆರೆ ತಾಲೂಕಿನ ಕರ್ನಾಟಕ ದಲಿತ ಸಂಘರ್ಷ ಸಮಿತಿವತಿಯಿಂದ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಗೆ ರೇಹಾನ್ ಪಾಷಗೆ ಮನವಿ ನೀಡಿದ್ದಾರೆ.
ನಗರದ ತಾಲೂಕು ಕಛೇರಿಯಲ್ಲಿ ಹಲವು ಮುಖಂಡರು ತಹಶೀಲ್ದರ‍್ಗೆ ಮನವಿ ಸಲ್ಲಿಸಿ ಮಾತನಾಡಿದರು, ಜಾತಿನಿಂದನೆ ಮತ್ತು ದಲಿತರ ಮೇಲೆ ದೌರ್ಜನ್ಯ ಮಾಡಿರುವಂತಹ ಸಚಿವ ಡಿ ಸುಧಾಕರ್ ಈ ಕೂಡಲೆ ರಾಜಿನಾಮೆ ಹಾಗೂ ಶಾಸಕ ಹಾಗು ಸಚಿವ ಸ್ಥಾನದಿಂದ ಅಮಾನತ್ತು ಮಾಡಬೇಕೆಂದು ಒತ್ತಾಯಿಸಿದರು.
ಈದೇ ಸಂಧರ್ಭದಲ್ಲಿ ಕೆ.ಟಿ.ಮುತ್ತುರಾಜ್, ಎಸ್.ಸುರೇಶ್, ಯೋಗೇಶ್, ಕೆ.ಮಂಜುನಾಥ್, ಗೊವಿಂದಪ್ಪ,ವೆAಕಟೇಶ್, ಕರಿಯಪ್ಪ, ಮಲ್ಲಿಕಾರ್ಜುನಾ, ಮಂಜುನಾಥ್ ಇದ್ದರು ಇದ್ದರು.