ಅಬ್ಬೇನಹಳ್ಳಿ ಗ್ರಾ ಪಂ ಯಲ್ಲಿ ರಾಷ್ಟ್ರೀಯ ಪೋಷಣೆ ಮಾಸ ಆಚರಣೆಗೆ ಚಾಲನೆ ನೀಡಿದ ಅಧ್ಯಕ್ಷೆ ಪಾಪಮ್ಮ ಆನಂದಪ್ಪ.
ನಾಯಕನಹಟ್ಟಿ:: ಮಕ್ಕಳ ದೈಹಿಕ ಕ್ಷಮಿತೆ ಹಾಗೂ ಕ್ರಿಯಾಶೀಲತೆಗಳಿಗೆ ಪೌಷ್ಟಿಕ ಆಹಾರಗಳು ಅಗತ್ಯವಿದ್ದು ಮಕ್ಕಳು ಅಪೌಷ್ಟಿಕತೆಯಿಂದ ಬಳಲದಂತೆ ಪ್ರತಿಯೊಬ್ಬ ಗರ್ಭಿಣಿ ಬಾಣಂತಿಯರು ನೋಡಿಕೊಳ್ಳಬೇಕು ಎಂದು ಪಾಪಮ್ಮ ಆನಂದಪ್ಪ ಹೇಳಿದರು.
ಅವರು ಸೋಮವಾರ ಸಮೀಪದ ಅಬ್ಬೇನಹಳ್ಳಿ ಗ್ರಾಮ ಪಂಚಾಯತಿಯ ಕಾರ್ಯಾಲಯದಲ್ಲಿ ಗ್ರಾಮ ಪಂಚಾಯಿತಿ ಹಾಗೂ ಶಿಶು ಅಭಿವೃದ್ಧಿ ಇಲಾಖೆ ಮತ್ತು ಆರೋಗ್ಯ ಇಲಾಖೆ ವತಿಯಿಂದ ರಾಷ್ಟ್ರೀಯ ಪೋಷಣೆ ಅಭಿಯಾನ ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗುವುದರ ಮುಖಾಂತರ ಉದ್ಘಾಟಿಸಿ ಮಾತನಾಡಿದರು. ಪ್ರತಿಯೊಬ್ಬ ಗರ್ಭಿಣಿ ಬಾಣಂತಿಯರು ಪೌಷ್ಟಿಕಾಂಶವುಳ್ಳ ಸೊಪ್ಪು ತರಕಾರಿ ಜೊತೆ ಮೊಳಕೆ ಕಾಳು ಉಪಯೋಗಿಸಿದರೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಪಾಪಮ್ಮ ಆನಂದಪ್ಪ ತಿಳಿಸಿದರು.
ಇನ್ನೂ ಇದೇ ವೇಳೆ ಗ್ರಾಮದ ಯುವ ಮುಖಂಡ ಎ ಪಿ ರೇವಣ್ಣ ಮಾತನಾಡಿ ರಾಷ್ಟ್ರೀಯ ಪೋಷಣೆ ಮಾಸಾ ಚರಣೆ ನಮ್ಮ ಶಿಶು ಅಭಿವೃದ್ಧಿ ಇಲಾಖೆ ಮತ್ತು ಆರೋಗ್ಯ ಇಲಾಖೆ ಸಹಯೋಗದಲ್ಲಿ ಈ ಪೋಷಣ ಮಾಸಾಚರಣೆ ಆಚರಿಸಲಾಗಿದೆ ಈ ಕಾರ್ಯಕ್ರಮ ಇವತ್ತಿನ ದಿನಕ್ಕೆ ಮಾತ್ರ ಸೀಮಿತವಾಗದೆ ಗ್ರಾಮದ ಪ್ರತಿ ಗರ್ಭಿಣಿ ಬಾಣತಿಯರಿಗೆ ಅಂಗನವಾಡಿ ಮಕ್ಕಳಿಗೆ ಪೋಷಣೆ ಮಾಸಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ತಿಳಿಸಬೇಕು ಮತ್ತು ಪೌಷ್ಟಿಕಾಂಶವುಳ್ಳ ಆಹಾರ ಸೇವನೆ ಹಾಗೂ ಆರೋಗ್ಯ ಕುರಿತು ಅಂಗನವಾಡಿ ಶಿಕ್ಷಕಿರು ಮಾಹಿತಿಯನ್ನು ತಿಳಿಸಬೇಕು ನಮ್ಮ ಗ್ರಾಮ ಪಂಚಾಯತಿ ವ್ಯಾಪ್ತಿಯ ಬರುವ ಎಲ್ಲಾ ಹಳ್ಳಿಗಳಲ್ಲಿ ಬಾಲ್ಯ ವಿವಾಹ ಸೇರಿದಂತೆ ಸಂಪೂರ್ಣವಾಗಿ ಮಾಹಿತಿಯನ್ನು ನೀಡಿ ಸಾರ್ವಜನಿಕರಲ್ಲಿ ಜಾಗೃತಿಯನ್ನು ಮೂಡಿಸಬೇಕು ಬರೀ ಕಾಟಾಚಾರಕ್ಕೆ ಮಾತ್ರ ಪೋಷಣೆ ಮಾಸಚರಣೆ ಮಾಡುವುದು ಸಮಾಜಸವಲ್ಲ ಎಂದು ಸಭೆಯಲ್ಲಿ ತಿಳಿಸಿದರು
ಇದೆ ವೇಳೆ ಗುಂತಕೋಲಮ್ಮನಹಳ್ಳಿ ಅಂಗನವಾಡಿ ಶಿಕ್ಷಕಿ ಶ್ರೀದೇವಿ ಮಾತನಾಡಿ ದೇಶದಲ್ಲಿ ಮಕ್ಕಳಲ್ಲಿ ಮತ್ತು ಮಹಿಳೆಯರಲ್ಲಿ ಆಪೌಷಿಕತೆ ಕಡಿಮೆ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ 2018ರ ಸೆಪ್ಟೆಂಬರ್ ನಲ್ಲಿ ಪೋಷಣ ಅಭಿಯಾನವನ್ನು ಆರಂಭಿಸಲಾಯಿತು ಎಂದರು.
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಪಾಪಮ್ಮ ಆನಂದಪ್ಪ ಸದಸ್ಯರಾದ ಶೇಖರ ಗೌಡ, ಪಡ್ಲ ಬೋರೆಯ್ಯ, ಬಿ ಸಣ್ಣ ಪಾಲಯ್ಯ, ಆರೋಗ್ಯ ಅಧಿಕಾರಿ ಚೇತನ, ಸಮುದಾಯ ಆರೋಗ್ಯ ಅಧಿಕಾರಿ ನಯನ, ಅಬ್ಬೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಅಂಗನವಾಡಿಯ ಶಿಕ್ಷಕಿಯರು ಹಾಗೂ ಆಶಾ ಕಾರ್ಯಕರ್ತರು ಎಲ್ ಸಿ ಆರ್ ಪಿ ಸಿಬ್ಬಂದಿ ವಿ ಶೈಲಮ್ಮ,ಕಾವೇರಿ, ಮಲೇಬೋರನಹಟ್ಟಿ ಚೈತ್ರ, ಭಾಗ್ಯಶ್ರೀ, ಇದ್ದರು.