ಚಳ್ಳಕೆರೆ : ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರನ್ನು ವಿಶ್ವವಿದ್ಯಾನಿಲಯದ ಶೈಕ್ಷಣಿಕ ಅವದಿ ಮುಕ್ತಾಯದವರೆಗೂ ಮುಂದುವರಿಸುವAತೆ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಶಾಸಕ ಟಿ.ರಘುಮೂರ್ತಿಯವರಿಗೆ ಮನವಿಪತ್ರ ಸಲ್ಲಿಸಿದರು.
ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಜಿ.ಎನ್.ಯಶೋಧರ ಮಾತನಾಡಿ, “ರಾಜ್ಯ ಉನ್ನತಶಿಕ್ಷಣ ಇಲಾಖೆಯು ಮುಂದಿನ ತಿಂಗಳ 11ರಿಂದ 15ರವೆರಗೆ ರಾಜ್ಯವ್ಯಾಪಿ ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳಿಗೆ ಅತಿಥಿ ಉಪನ್ಯಾಸಕರನ್ನು ಕೌನ್ಸಿಲಿಂಗ್ ಮೂಲಕ ಆಯ್ಕೆ ಮಾಡಿಕೊಳ್ಳಲು ಆದೇಶ ಹೊರಡಿಸಿದೆ. ಇದರಿಂದ ದಾವಣಗೆರೆ ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೂರಾರು ಅತಿಥಿ ಉಪನ್ಯಾಸಕರು ರಾಜ್ಯಪ್ಯಾಪ್ತಿ ನಡೆಯುವ ಕೌನ್ಸಿಲಿಂಗ್‌ನಲ್ಲಿ ಬಾರಿ ಹಿನ್ನಡೆಯನ್ನು ಅನುಭವಿಸಲಿದ್ದಾರೆ. ಕಾರಣ ದಾವಣಗೆರೆ ವಿಶ್ವವಿದ್ಯಾನಿಲಯದ ಶೈಕ್ಷಣಕ ಅವಧಿ ಆಗಸ್ಟ್ 14ಕ್ಕೆ ಕೊನೆಗೊಂಡರೆ ರಾಜ್ಯದ ಇತರೆ ವಿಶ್ವವಿದ್ಯಾನಿಲಯಗಳ ಶೈಕ್ಷಣಿಕ ಅವಧಿ ಆಗಸ್ಟ್ 30, ಸೆಪ್ಟಂಬರ್ 15 ಎಂದು ಮುಂದುವರೆಯುತ್ತಿವೆ. ಇದರಿಂದ ಇತರೆ ವಿಶ್ವವಿದ್ಯಾನಿಲಯದ ಅತಿಥಿ ಉಪನ್ಯಾಸಕರಿಗೆ ಹೆಚ್ಚುವರಿಯಾಗಿ ಸೇವಾ ದಿನಗಳು ಲಭಿಸಿ ಮೆರಿಟ್‌ಪಟ್ಟಿಯಲ್ಲಿ ಉನ್ನತಸ್ಥಾನವನ್ನು ಪಡೆಯಲಿದ್ದಾರೆ. ಆದರೆ ಈಗಾಗಲೇ ದಾವಣಗೆರೆ ವಿಶ್ವವಿದ್ಯಾನಿಲಯ ವ್ಯಾಪ್ತಿಯ ಅತಿಥಿ ಉಪನ್ಯಾಸಕರು ಕರ್ತವ್ಯದಿಂದ ಬಿಡುಗಡೆ ಹೊಂದಿದ್ದು, ಕಡಿಮೆ ಅವದಿಯ ಸೇವಾ ದಿನಗಳು ದೊರೆತು ಮೆರಿಟ್‌ಪಟ್ಟಿಯಲ್ಲಿ ಕೆಳಗಿನ ಸ್ಥಾನ ಲಭಿಸಿ ಆಯ್ಕೆ ಪ್ರಕ್ರಿಯೆಯಲ್ಲಿ ಹಿಂದುಳಿದು ತಾತ್ಕಲಿಕ ಉದ್ಯೋಗವನ್ನೂ ಸಹ ಕಳೆದುಕೊಳ್ಳಲಿದ್ದಾರೆ. ಇದರಿಂದ ದಾವಣಗೆರೆ ವಿಶ್ವವಿದ್ಯಾನಿಲಯ ವ್ಯಾಪ್ತಿಯ ನೂರಾರು ಅತಿಥಿಉಪನ್ಯಾಸಕರ ಬದುಕು ಬೀದಿಗೆ ಬೀಳಲಿದೆ. ಇದೆಲ್ಲಕ್ಕೂ ಕಾರಣ ರಾಜ್ಯ ಉನ್ನತ ಶಿಕ್ಷಣ ಇಲಾಖೆಯು ಅತಿಥಿ ಉಪನ್ಯಾಸಕರ ಆಯ್ಕೆ ಪ್ರಕ್ರಿಯೆಗೆ ಹೊರಡಿಸಿರುವ ಅವೈಜ್ಞಾನಿಕ ನಿಯಮಗಳು. ರಾಜ್ಯದ ಎಲ್ಲ ವಿಶ್ವವಿದ್ಯಾನಿಲಯಗಳ ಶೈಕ್ಷಣಿಕ ವೇಳಾಪಟ್ಟಿ ಏಕರೂಪವಾಗಿಲ್ಲದ ಪ್ರಯುಕ್ತ ಇಂತಹ ಸಮಸ್ಯಗಳು ತಲೆದೋರಿವೆ. ಹಾಗಾಗಿ ದಾವಣಗೆರೆ ವಿಶ್ವ ವಿಶ್ವವಿದ್ಯಾನಿಲಯ ವ್ಯಾಪ್ತಿಯ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರನ್ನು ಆಯ್ಕೆ ಪ್ರಕ್ರಿಯೆಯವರೆಗೂ ಯಥಾವತ್ತಾಗಿ ಮುಂದುವರೆಸುವAತೆ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಶಾಸಕ ಟಿ.ರಘುಮೂರ್ತಿಯವರನ್ನು ಒತ್ತಾಯಿಸಿದರು.
ಮನವಿಪತ್ರ ಸ್ವೀಕರಿಸಿ ಮಾತನಾಡಿದ ಶಾಸಕ ಟಿ.ರಘುಮೂರ್ತಿ, “ಬುಧವಾರ ರಾಜ್ಯ ಉನ್ನತಶಿಕ್ಷಣ ಮತ್ತು ತಾಂತ್ರಿಕ ಇಲಾಖೆಯ ಸಚಿವರಾದ ಡಾ.ಎಂ.ಸಿ.ಸುಧಾಕರ್ ಅವರನ್ನು ಭೇಟಿಯಾಗಿ ದಾವಣಗೆರೆ ಚಿತ್ರದುರ್ಗವನ್ನು ಒಳಗೊಂಡAತೆ ದಾವಣಗೆರೆ ವಿಶ್ವಿದ್ಯಾನಿಲಯ ವ್ಯಾಪ್ತಿಯ ಅತಿಥಿ ಉನ್ಯಾಸಕರ ಸಮಸ್ಯೆಗಳ ಕುರಿತು ಚರ್ಚಿಸುತ್ತೇನೆ” ಎಂದು ಭರವಸೆ ನೀಡಿದರು.
ಇದೇವೇಳೆ ಅತಿಥಿಉಪನ್ಯಾಸಕರ ಸಂಘದ ಗೌರವಾದ್ಯಕ್ಷ ಪರಮೇಶ್, ಪದಾಧಿಕಾರಿಗಳಾದ ತಿಪ್ಪೇಸ್ವಾಮಿ, ಸುವರ್ಣಮ್ಮ, ಬಿ.ಪಾಪಯ್ಯ, ರ‍್ರಿಸ್ವಾಮಿ, ಮಲ್ಲಿಕಾರ್ಜುನ, ರಾಜಣ್ಣ, ಚಿತ್ತಯ್ಯ, ಬೊಮ್ಮಯ್ಯ ಇದ್ದರು.