ನಾಯಕನಹಟ್ಟಿ:: ರಾಜ್ಯದಲ್ಲಿ ಅತಿ ಮಳೆ ಕಡಿಮೆ ಬೀಳುವ ಪ್ರದೇಶವೆಂದರೆ ಅದು ನಾಯಕನಹಟ್ಟಿ ಹೋಬಳಿ ಎಂದು ಅಣೆಪಟ್ಟಿ ಕಟ್ಟಿಕೊಂಡಿರುವ ಇಲ್ಲಿನ ರೈತರ ಗೋಳು ಹೇಳುತಿರದು ಮಳೆರಾಯನ ಮನಸ್ಸು ಇನ್ನಾದರೂ ಕರಗಬಹುದೇ ಎಂಬ ನಿರೀಕ್ಷೆಯಲ್ಲಿ ರೈತರ ಹಂಬಲದಲ್ಲಿದ್ದಾರೆ.
ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ಬೆಳೆಗಳಿಗೆ ಮಳೆರಾಯನ ವಕ್ರ ದೃಷ್ಟಿಯಿಂದ ಬಾರದ ಮಳೆ ಶೇಂಗ ವಿವಿಧ ಬೆಳೆಗಳು ಕಮರಿ ಹೋಗುತ್ತಿದು.
ಈ ಬಾರಿಯೂ ಮಳೆ ಇಲ್ಲದೆ ಮುಂದಿನ ದಿನಗಳು ತೀವ್ರ ಬರಗಾಲಕ್ಕೆ ಸಿಲುಕುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮುಂಗಾರು ಆರಂಭದಲ್ಲಿ ಅಲ್ಪಸ್ವಲ್ಪ ಮಳೆ ಬಂದು ರೈತಾಪಿ ವರ್ಗ ಸಾಲ ಸೂಲ ಮಾಡಿ ದುಬಾರಿ ಬಿತ್ತನೆ ಬೀಜ ಗೊಬ್ಬರ ಕೂಲಿ ಕೃಷಿ ಸೇರಿದಂತೆ . ಬೆಳೆ ಬಿತ್ತನೆ ಮಾಡಿ ಉತ್ತಮ ಇಳುವರಿ ಕನಸು ಕಂಡಿದ್ದ ರೈತರಿಗೆ ಮಳೆರಾಯನ ವಕ್ರ ದೃಷ್ಟಿಯಿಂದ ಶೇಂಗಾ ಈರುಳ್ಳಿ ಸಜ್ಜೆ ನವಣೆ ರಾಗಿ ಮೆಕ್ಕೆಜೋಳ ಈರುಳ್ಳಿ ಸೇರಿದಂತೆ ಪ್ರಮುಖ ವಿವಿಧ ಬೆಳೆಗಳು ಹೂವು ಕಾಯಿ ಕಟ್ಟುವ ಮುನ್ನವೇ ಬಿಸಿಲಿನ ತಾಪಕೆ ಬೆಳೆಗಳು ಕಮರಿ ಹೋಗುತ್ತಿದ್ದು ಸರ್ಕಾರ ಕೂಡಲೇ ನಮ್ಮ ನಾಯಕನಹಟ್ಟಿ ಹೋಬಳಿಯನ್ನು ಬರೆ ಪೀಡಿತ ಪ್ರದೇಶವೆಂದು ಘೋಷಣೆ ಮಾಡಬೇಕೆಂದು ರಾಷ್ಟೀಯ ಕಿಸಾನ್ ಸಂಘದ ತಾಲೂಕು ಕಾರ್ಯದರ್ಶಿ ಸುರೇಂದ್ರಪ್ಪ ಆಗ್ರಹಿಸಿದ್ದಾರೆ
ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಕಿಸಾನ್ ಸಂಘದ ತಾಲೂಕು ಕಾರ್ಯದರ್ಶಿ, ಸುರೇಂದ್ರಪ್ಪ ಕೊರಡಿಹಳ್ಳಿ, ಅಬ್ಬೇನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಪಡ್ಲ ಬೋರಯ್ಯ, ಗುಂತಕೋಲಮ್ಮನಹಳ್ಳಿ ಬೂಟ್ ತಿಪ್ಪೇಸ್ವಾಮಿ, ಸೇರಿದಂತೆ ಇತರ ರೈತರು ಇದ್ದರು