ಚಳ್ಳಕೆರೆ: ಕಳೆದ ಮೂರು ತಿಂಗಳಿAದ ನಗರದವನ್ನು ಸ್ವಚ್ಚ ಮಾಡುವ ಪೌರಾಕಾರ್ಮಿಕ ಸಿಬ್ಬಂದಿಗಳಿಗೆ ವೇತನ ಇಲ್ಲವಾದರೆ ಹೇಗೆ ಎಂದು ಅಧಿಕಾರಿಗಳಿಗೆ ಸ್ಥಳೀಯ ಶಾಸಕ ಟಿ.ರಘುಮೂರ್ತಿ ತರಾಟೆಗೆ ತೆಗೆದುಕೊಂಡರು.
ನಗರದ ನಗರಸಭೆ ಆವರಣದಲ್ಲಿ ಇಂದು ಸ್ಥಳೀಯ ಶಾಸಕ ಟಿ.ರಘುಮೂರ್ತಿ ಹಮ್ಮಿಕೊಂಡಿದ್ದ ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರು ದೂರುಗಳ ಸುರಿಮಳೆಗೈದರು.
ಇನ್ನೂ ದಿನ ನಿತ್ಯ ನಗರವನ್ನು ಸ್ವಚ್ಚ ಮಾಡುವ ಪೌರಾಕಾರ್ಮಿಕರ ವೇತನ ಬಾಕಿ ಉಳಿಸಿಕೊಳ್ಳುವುದು ಸರಿಯಲ್ಲ ಈ ಕೂಡಲೇ ವೇತನ ಪಾವತಿಸಿ ಎಂದು ಗುಡುಗಿದರು.
ನಗರದಲ್ಲಿ ಅನೇಕ ಜ್ವಲಂತ ಸಮಸ್ಯೆಗಳಿದ್ದು ಇವುಗಳನ್ನು ಬಗೆಹರಿಸುವುದು ನಗರಸಭೆಯ ಆದ್ಯ ಕರ್ತವ್ಯವಾಗಿದೆ ಆದರೆ ಅಧಿಕಾರಿಗಳು ಸಾರ್ವಜನಿಕರಿಗೆ ಯಾವ ರೀತಿ ಸೇವೆಯನ್ನು ಮಾಡುತ್ತಿದ್ದೀರಿ ಎಂಬ ಅರಿವು ಸಭೆಯಲ್ಲಿ ಜನರು ಮಾಡುತ್ತಿರುವ ಆರೋಪಗಳಿಂದಲೇ ಸಾಬೀತಾಗಿದೆ ಮುಂದಿನ ದಿನಗಳಲ್ಲಿ ಸಭೆ ನಡೆಸಿದಾಗ ಈ ರೀತಿಯ ಪ್ರಕರಣಗಳು ಕಂಡು ಬಂದರೆ ನಿರ್ದಾಕ್ಷೀಣ್ಯವಾಗಿ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಶಾಸಕ ಟಿ.ರಘುಮೂರ್ತಿ ಕಿಡಿಕಾರಿದರು.
ನಗರದ ಸಾರ್ವಜನಿಕರು ತಮ್ಮ ಕೆಲಸಗಳಿಗಾಗಿ ನಗರಸಭೆಗೆ ಬಂದರೆ ಅಧಿಕಾರಿಗಳು ಇಷ್ಟು ದಿನಗಳ ಒಳಗಾಗಿ ಕೆಲಸವಾಗುತ್ತದೆ ಎಂದು ಹಿಂಬರಹ ಬರೆದುಕೊಟ್ಟು ಸಾರ್ವಜನಿಕರ ಅಲೆದಾಟ ತಪ್ಪಿಸಬೇಕು ತಾವು ಆ ಕೆಲಸ ಮಾಡದೆ ಇರುವುದರಿಂದಲೇ ನಗರಸಭೆಗೆ ಕೆಟ್ಟ ಹೆಸರು ಬರಲು ಕಾರಣವಾಗಿದೆ ಎಂದು ನಗರಸಭೆ ಅಧಿಕಾರಿಗಳ ವಿರುದ್ಧ ಕಿಡಿ ಕಾರಿದ ಘಟನೆ ನಡೆಯಿತು.
ನಗರಸಭೆ ಅಧಿಕಾರಿಗಳ ಹೊಂದಾಣಿಕೆ ಕೊರತೆ : ನಗರದಲ್ಲಿ ಸ್ವಚ್ಚತೆ ಮರೀಚಿಕೆ : ನಗರಸಭೆಯಲ್ಲಿ ಜನಸಂಪರ್ಕ ಸಭೆ ಎಂದ ಕೂಡಲೇ ನಗರದ ವಿವಿಧ ವಾರ್ಡ್ ಗಳಿಂದ ಸಾರ್ವಜನಿಕರು ಆಗಮಿಸಿ ತಮ್ಮ ಕೆಲಸಗಳು ಆಗದಿರುವ ಬಗ್ಗೆ ಶಾಸಕರ ಗಮನ ಸೆಳೆದರು. ಈ ವೇಳೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸಾರ್ವಜನಿಕರು ನಗರಸಭೆಯಲ್ಲಿ ತಮ್ಮ ಕೆಲಸಗಳಾಗಬೇಕಾದರೆ ತಮ್ಮ ಚಪ್ಪಲಿಗಳು ಸವೆಯುವವರೆಗೂ ಓಡಾಡಬೇಕಾಗಿದೆ ಯಾವುದಕ್ಕೂ ಅಧಿಕಾರಿಗಳು ಸ್ಪಂದಿಸುವುದಿಲ್ಲ ಕಂದಾಯ ಇ-ಸ್ವತ್ತು, ಜನನ ಮರಣ ಪ್ರಮಾಣ ಪತ್ರ ಸೇರಿದಂತೆ ಯಾವುದೇ ಕೆಲಸಗಳಾಗಬೇಕಾದರೂ ತಿಂಗಳಾನುಗಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ನಮ್ಮ ವೈಯಕ್ತಿಕ ಕೆಲಸ ಕಾರ್ಯಗಳನ್ನು ಬಿಟ್ಟು ಕಚೇರಿಗೆ ಅಲಿಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.
ಖಾತೆ ಬದಲಾವಣೆ ಇ ಸ್ವತ್ತಿಗೆ ಸಂಬAಧಿಸಿದAತೆ ನಗರಸಭೆಯ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರಿಂದ ಹೆಚ್ಚಿನ ದೂರುಗಳು ಬಂದ ಹಿನ್ನೆಲೆಯಲ್ಲಿ ಶಾಸಕ ಟಿ ರಘುಮೂರ್ತಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಇ ಸ್ವತ್ತು ಮಾಡಿಕೊಡಲು ಸಿಬ್ಬಂದಿಗಳ ಕೊರತೆ ಇದೆಯೇ ಅಥವಾ ಸೋಮಾರಿತನವೇ ಎಂದು ಪೌರಾಯುಕ್ತ ಚಂದ್ರಪ್ಪರನ್ನು ಪ್ರಶ್ನಿಸಿದರು ವೇದಿಕೆ ಮೇಲೆ ನಗರಸಭೆಯ ಕಂದಾಯ ಇಲಾಖೆ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡು ಇನ್ನು 15 ದಿನಗಳಲ್ಲಿ ಬಾಕಿ ಇರುವ ಇ ಸ್ವತ್ತು ಅರ್ಜಿಗಳು ತ್ವರಿತವಾಗಿ ವಿಲೇವಾರಿ ಆಗಬೇಕು ಸಾರ್ವಜನಿಕರಿಗೆ ತೊಂದರೆಯಾಗುವAತೆ ವಿಳಂಬ ನೀತಿ ಅನುಸರಿಸಿದರೆ ನಾನು ಸಹಿಸುವುದಿಲ್ಲ ಕೆಲಸ ಮಾಡಲು ಸಾಧ್ಯವಾಗದಿದ್ದರೆ ಬೇರೆ ಕಡೆ ವರ್ಗಾವಣೆಗೊಂಡು ತೆರಳಬಹುದು ಎಂದು ತೀಕ್ಷ್ಣವಾಗಿ ನುಡಿದರು.
ರೈತರಿಂದ ಹೆಚ್ಚುವರಿ ಕಂದಾಯ ವಸೂಲಿ :
ಇನ್ನೂ ಸಭೆಯಲ್ಲಿ ರೈತ ಮುಖಂಡ ಕೆಪಿ ಬೂತಯ್ಯ ಮಾತನಾಡಿ ರೈತರು ತಾವು ಬೆಳೆದ ಬೆಳೆಗಳನ್ನು ಮಾರುಕಟ್ಟೆಗೆ ತಂದಾಗ ರೈತರಿಂದ ನಗರಸಭೆ ಟೆಂಡರ್ ದಾರರು ಐದು ರೂ ಇರುವ ಕಂದಾಯ ದರವನ್ನು 50ರುಗಳ ಹೆಚ್ಚಿನ ದರ ವಸೂಲಿ ಮಾಡುತ್ತಿದ್ದಾರೆ ಹೀಗಾಗಿ ರೈತರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ ಇದನ್ನು ನಗರಸಭೆ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ತಡೆಗಟ್ಟಬೇಕು ರೈತರಿಂದ ಯಾವುದೇ ಕರ ವಸೂಲಿ ಮಾಡಬಾರದು ಎಂದು ಕೋರಿದರು. ಇದಕ್ಕೆ ಉತ್ತರಿಸಿದ ಶಾಸಕರು ಮಾರುಕಟ್ಟೆಗಳಲ್ಲಿ ನಿಗದಿತ ದರಕ್ಕಿಂತ ಹೆಚ್ಚಿನದಾಗಿ ವಸೂಲಿ ಮಾಡುವ ಟೆಂಡರ್ ದಾರರಿಗೆ ನಗರಸಭೆ ಅಧಿಕಾರಿಗಳು ಕೂಡಲೇ ನೋಟಿಸ್ ನೀಡಿ ದರಪಟ್ಟಿಯನ್ನು ಮಾರುಕಟ್ಟೆ ಆವರಣದಲ್ಲಿ ಬಿತ್ತರಿಸುವಂತೆ ಸೂಚಿಸಿದರು.
ಇನ್ನುಳಿದಂತೆ ನಗರದ ವಿವಿಧ ವಾರ್ಡ್ ಗಳಲ್ಲಿನ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿನ ಸಮಸ್ಯೆಗಳನ್ನು ಸಾರ್ವಜನಿಕರು ಶಾಸಕರ ಮುಂದೆ ತೋಡಿಕೊಂಡರು ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಆಯಾ ಸಮಸ್ಯೆಗಳಿಗೆ ಸಂಬAಧಪಟ್ಟAತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಇದೆ ವೇಳೆ ಸೂಚಿಸಿದರು.

ಶಾಸಕರ ಜನ ಸಂಪರ್ಕ ಸಭೆಗೆ ಹರ್ಷ ವ್ಯಕ್ತಪಡಿಸಿದ ಸಾರ್ವಜನಿಕರು:
ಶಾಸಕ ಟಿ.ರಘುಮೂರ್ತಿಯವರ ನಗರಸಭೆ ಆವರಣದಲ್ಲಿನ ಜನಸಂಪರ್ಕ ಸಭೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು ಇಂತಹ ಕಾರ್ಯಕ್ರಮಗಳು ಮುಂದಿನ ದಿನಗಳಲ್ಲಿ ನಿರಂತರವಾಗಬೇಕು, ಅಧಿಕಾರಿಗಳಿಗೆ ತಮ್ಮ ಕರ್ತವ್ಯದ ಬಗ್ಗೆ ಅರಿವು ಮೂಡಲು ಸಾಧ್ಯವಾಗುತ್ತದೆ ಇಂತಹ ಸಭೆಗಳನ್ನು ಶಾಸಕರು ಹೆಚ್ಚಿನ ರೀತಿಯಲ್ಲಿ ಕೈಗೊಳ್ಳಬೇಕು ಎಂದರು.

ಈ ವೇಳೆ ಜಿಲ್ಲಾ ಯೋಜನಾಧಿಕಾರಿ ಮಹೇಂದ್ರ ಕುಮಾರ್ ನಗರ ಸಭೆ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಮತ್ತು ಸಾರ್ವಜನಿಕರಿಗೆ ಆಡಳಿತಾತ್ಮಕ ಸಲಹೆ ಸೂಚನೆಗಳನ್ನು ನೀಡಿದರು.

ನಗರಸಭೆ ಅಧಿಕಾರಿಗಳು ಇನ್ನು ಮುಂದಾದರು ಎಚ್ಚೆತ್ತುಕೊಂಡು ಸರಿಯಾದ ರೀತಿಯಲ್ಲಿ ಸಾರ್ವಜನಿಕರ ಕೆಲಸಗಳಿಗೆ ಸ್ಪಂದಿಸುತ್ತಾರೆಯೇ ಅಥವಾ ತಮ್ಮ ಹಿಂದಿನ ವರ್ತನೆಗಳನ್ನು ಮುಂದುವರಿಸುತ್ತಾರೆಯೇ ಕಾದುನೋಡಬೇಕಿದೆ.

ಕಾರ್ಯಕ್ರಮದಲ್ಲಿ ತಹಸಿಲ್ದಾರ್ ರೆಹಾನ್ ಪಾಷಾ ಜಿಲ್ಲಾ ಯೋಜನಾಧಿಕಾರಿ ಮಹೇಂದ್ರ ಕುಮಾರ್ ಪೌರಾಯುಕ್ತ ಸಿ.ಚಂದ್ರಪ್ಪ, ಡಿವೈಎಸ್‌ಪಿ ಟಿಬಿ,ರಾಜಣ್ಣ, ವೃತ ನಿರೀಕ್ಷಕ ಆರ್‌ಎಫ್.ದೇಸಾಯಿ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಂಜೆ.ರಾಘವೇAದ್ರ, ನಗರಸಭೆ ಸದಸ್ಯರಾದ ವಿರೂಪಾಕ್ಷಪ್ಪ, ಎಸ್.ಜಯಣ್ಣ, ಮಂಜುಳಾಪ್ರಸನ್ನಕುಮಾರ್, ಮಲ್ಲಿಕಾರ್ಜುನ, ವೆಂಕಟೇಶ್, ಹೊಯ್ಸಳ ಗೋವಿಂದ, ರಮೇಶ್ ಗೌಡ, ಆರ್.ರುದ್ರನಾಯಕ, ವೀರಭದ್ರಪ್ಪ, ಸುಜಾತ ಪ್ರಹಲ್ಲಾದ್, ಜೈ ತುಂಬಿ, ಕವಿತಾಬೋರಯ್ಯ, ಸುಮಾಭರಮಯ್ಯ, ಪಿಎಸ್ಐ ಶಿವರಾಜ್, ಸೇರಿದಂತೆ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಬಾಕ್ಸ್ ಮಾಡಿ :
1.ನಗರಸಭೆಯಲ್ಲಿ ಜನನ ಮರಣ ಪ್ರಮಾಣ ಪತ್ರ ಸೇರಿದಂತೆ ಯಾವುದೇ ಕೆಲಸಗಳಾಗಬೇಕಾದರೂ ತಿಂಗಳಾನುಗಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬ ದೂರುಗಳು ಬಂದಿವೆ ಹೀಗಾಗಿ ಅಧಿಕಾರಿಗಳು ಕಛೇರಿಯಲ್ಲಿ ಹೊಂದಾಣಿಕೆ ಮೇಲೆ ತಮ್ಮ ತಮ್ಮ ಕರ್ತವ್ಯ ನಿರ್ವಹಿಸಿ, ಇಂತಹ ನಿರ್ಲಕ್ಷö್ಯ ದೋರಣೆ ಮುಂದಿನ ದಿನಗಳಲ್ಲಿ ಸಹಿಸಲು ಹಾಗುವುದಿಲ್ಲ ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡಬೇಕು.
—ಶಾಸಕ ಟಿ.ರಘುಮೂರ್ತಿ

2.ವಿಶ್ವವಾಣಿ ಪತ್ರಿಕೆಯಲ್ಲಿ ಘನತ್ಯಾಜ್ಯ ವಿಲೆವಾರಿ ಬಗ್ಗೆ ಸುದ್ದಿ ಬಿತ್ತರಿಸಿದರೂ ಅಧಿಕಾರಿಗಳು ನಾಮಕಾವಸ್ಥೆಗೆ ಕೆಲಸ ಮೂಗಿಸಿ ಕೈ ತೊಳೆದುಕೊಳ್ಳುತ್ತಾರೆ, ಇತ್ತ ಸಾರ್ವಜನಿಕರು ಮೂಗಿ ಮುಚ್ಚಿಕೊಂಡು ರಸ್ತೆಯಲ್ಲಿ ಓಡಾಡಬೇಕಿದೆ ಇನ್ನೂ ಸಾಂಕ್ರಮಿಕ ರೋಗಗಳಿಗೆ ಆಹ್ವಾನ ನೀಡದಂತೆ ಅಧಿಕಾರಿಗಳು ಎಚ್ಚೆತ್ತುಕೊಂಡು ಕಾರ್ಯ ನಿರ್ವಹಿಸಬೇಕು, ನಗರಸಭೆ ಅಧಿಕಾರಿಗಳು ಇ ಸ್ವತ್ತು ಖಾತೆಗಳನ್ನು ಮಾಡಿಕೊಡಲು ಒಬ್ಬೊಬ್ಬರಿಗೆ ಒಂದೊAದು ಮಾನದಂಡವನ್ನು ಅನುಸರಿಸಿ ಕೆಲಸ ನಿರ್ವಹಿಸಿ ಕೊಡುತ್ತಿದ್ದಾರೆ, ನಾನು ಒಬ್ಬ ನಗರಸಭೆಯ ಜನಪ್ರತಿನಿಧಿಯಾಗಿದ್ದರು ನನ್ನ ಕೆಲಸಗಳನ್ನು ಮಾಡಿಸಿಕೊಳ್ಳಲು ಅಧಿಕಾರಿಗಳ ಬಳಿ ಅಲೆದಾಡಬೇಕಾಗಿದೆ.
–ಎಸ್.ಜಯಣ್ಣ ನಗರಸಭೆ ಸದಸ್ಯ

3.ಕಳೆದ ಹಲವು ವರ್ಷಗಳಿಂದ ನಗರಸಭೆ ಆಡಳಿತಕ್ಕೆ ಶಾಪ ಹಾಕುತ್ತಿದ್ದ÷ ಸಾರ್ವಜನಿಕರಿಗೆ ಕೊಂಚ ವಿರಳವಾಗಿದೆ ಸ್ಥಳೀಯ ಶಾಸಕ ಟಿ.ರಘುಮೂರ್ತಿ ಇಚ್ಚಶಕ್ತಿಯಂತೆ ಇಂದು ಜನಸಂಪರ್ಕ ಸಭೆ ಆಯೋಜಿಸಿರುವುದು ಸಂತಸ ತಂದಿದೆ ಆದರೆ ಇದು ಮುಂದಿನ ದಿನಗಳಲ್ಲಿ ನಿರಂತರವಾಗಿ ನಡೆಯಬೇಕು.
—ನೇತಾಜಿ ಆರ್ ಪ್ರಸನ್ನ
ಸಾಮಾಜ ಸೇವಕ

Namma Challakere Local News
error: Content is protected !!