ಕಳೆದ ಹದಿನೈದು ವರ್ಷಗಳಿಂದ ನಿರಂತರವಾಗಿ ಮಾದಿಗ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ,ಹಾಗೂ ನಿವೃತ್ತ ನೌಕರರ ಸನ್ಮಾನ
ಹಾಗೂ ಚುನಾಯಿತ ಸಚಿವರು ಹಾಗೂ ಶಾಸಕರಿಗೆ ಅಭಿನಂದನಾ ಕಾರ್ಯಕ್ರಮ
ಹಮ್ಮಿಕೊಳ್ಳುವ ಮೂಲಕ ಈ ಸಮುದಾಯದ ಪ್ರಗತಿಗೆ ಪ್ರಾಮಾಣಿಕ ಯತ್ನ ನಡೆಸುತ್ತಿದೆ ಎಂದು ತಾಲೂಕು ಮಾದಿಗ
ನೌಕರರ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಡಿ.ದಯಾನಂದ ಹೇಳಿದರು.
ಚಳ್ಳಕೆರೆ ನಗರದ ಸರ್ಕಾರಿ ನೌಕರರ ಭವನದಲ್ಲಿ
ಮಾಧ್ಯಮದೊಂದಿಗೆ ಮಾತನಾಡಿದರು.
ಕಾರ್ಯಕ್ರಮವು ಸೆ..3ರ ಭಾನುವಾರ ನಗರದ ಜೈನ
ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದು ಕ್ಷೇತ್ರದ ಶಾಸಕ ಟಿ.ರಘುಮೂರ್ತಿ
ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಸಂಘದ ಕಾರ್ಯದರ್ಶಿ ಡಿ.ಶ್ರೀನಿವಾಸ್ ಮಾತನಾಡಿ, ತಾಲೂಕಿನ ಎಲ್ಲಾ ಮಾದಿಗ ಸಮುದಾಯದ ಅರ್ಹ ಮಕ್ಕಳಿಗೆ ಈ ಗೌರವ ಸನ್ಮಾನ ಸಿಗಲಿದೆ, ನಮ್ಮ ಸಂಘದ ಕಾರ್ಯ
ಕ್ರಮಗಳಿಗೆ ಸದಾ ಪ್ರೋತ್ಸಾಹ ನೀಡುತ್ತಾ ಬಂದಿರುವ ಜಿಲ್ಲಾ ಉಸ್ತುವಾರಿ ಸಚಿವ
ಡಿ.ಸುಧಾಕರ್, ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ, ಆಹಾರ ಸಚಿವ ಕೆ.ಎಚ್.
ಮುನಿಯಪ್ಪ, ಕ್ಷೇತ್ರದ ಶಾಸಕ ಟಿ.ರಘುಮೂರ್ತಿ, ಚಿತ್ರದುರ್ಗ ಶಾಸಕ ಕೆ.ಸಿ.
ವೀರೇಂದ್ರ(ಪಪ್ಪಿ), ಮೊಳಕಾಲ್ಮೂರು ಕ್ಷೇತ್ರದ ಶಾಸಕಎನ್.ವೈ.ಗೋಪಾಲಕೃಷ್ಣ, ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುವುದು.
ಇನ್ನೂ ಎಸೆಸೆಲ್ಸಿಯಲ್ಲಿ
ಶೇ.85, ಪಿಯುಸಿಯಲ್ಲಿ ಶೇ.75 ಅಂಕ ಪಡೆದ ವಿದ್ಯಾರ್ಥಿಗಳು ಅಭಿನಂದನೆಗೆ ಅರ್ಹರಾ
ಗಿದ್ದಾರೆ.
ಸಮುದಾಯದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ತುಂಬುವ ಇತ ದೃಷ್ಟಿಯಿಂದ ಈ
ಕಾರ್ಯಕ್ರಮ ಆಯೋಜಿಸಿದೆ ಎಂದರು.
ಇದೇ ಸಂಧರ್ಭದಲ್ಲಿ ಸಂಘದ ಖಜಾಂಚಿ
ಡಿ.ಟಿ. ಹನುಮಂತರಾಯ, ಪದಾಧಿಕಾರಿ ಎಚ್.ಹನುಮಂತಪ್ಪ ಶ್ರೀನಿವಾಸ್ , ಇತರರು ಉಪಸ್ಥಿತರಿದ್ದರು.