ಚಳ್ಳಕೆರೆ: ದೇಶಕ್ಕೆ ಅನ್ನ ನೀಡುವ ರೈತನಿಗೆ ದಿನದ ಇಪ್ಪತ್ತುನಾಲ್ಕು ಗಂಟೆ ವಿದ್ಯುತ್ ನೀಡುವ ಗ್ಯಾರಂಟಿ ಯೋಜನೆ ರಾಜ್ಯ ಸರಕಾರ ಘೋಷಣೆ ಮಾಡಬೇಕು ಎಂದು ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ರಾಜ್ಯ ಸರಕಾರಕ್ಕೆ ಟಾಂಗ್ ನೀಡಿದ್ದಾರೆ.
ಅವರು ಚಳ್ಳಕೆರೆ ತಾಲೂಕು ರೈತ ಸಂಘದ ಕಛೇರಿಯಲ್ಲಿ ಮಾಧ್ಯಮ ಗೊಷ್ಠಿ ನಡೆಸಿದ ಅವರು ಗ್ರಾಮೀಣ ಭಾಗದಲ್ಲಿ ರೈತರ ಜಮೀನುಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿ
ರುವುದು ಖಂಡನೀಯವಾದದ್ದು,
ಸರ್ಕಾರ ರೈತರ ಬದುಕಿನೊಂದಿಗೆ
ಚೆಲ್ಲಾಟವಾಡುವ ಪ್ರಯತ್ನ ನಡೆಸುತ್ತಿದೆ ಸಂಜೆ ಆರರಿಂದ ರಾತ್ರಿ
ಹತ್ತರವರೆಗೆ ಸಂಪೂರ್ಣ ವಿದ್ಯುತ್ ಕಡಿತಗೊಳಿಸುತ್ತಿರುವುದರಿಂದ
ಜಮೀನುಗಳಲ್ಲಿ ವಾಸಿಸುವ ರೈತ ಕುಟುಂಬಗಳಿಗೆ ಹೆಚ್ಚಿನ
ತೊಂದರೆಯಾಗುತ್ತಿದೆ.
ಸರ್ಕಾರ ಕೂಡಲೇ ಈ ನಿಯಮವನ್ನು
ಹಿಂಪಡೆಯಬೇಕು ಎಂದು ಸರಕಾರದ ವಿರುದ್ಧ ಕಿಡಿಕಾರಿದರು.
ಸರ್ಕಾರ ಹೊಸ ಹೊಸ ನಿಯಮಗಳನ್ನು ಜಾರಿಗೊಳಿಸಿ
ಸಂಜೆ ಆರರಿಂದ ಹತ್ತರವರೆಗೆ ವಿದ್ಯುತ್ ಕಡಿತಗೊಳಿಸುತ್ತಿದೆ
ಇದರಿಂದಾಗಿ ರೈತರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು
ಬೆಳೆಗಳಿಗೆ ನೀರು ಹಾಯಿಸಲಾಗದೆ ಇರುವುದರಿಂದ ಕೈಗೆ ಬಂದ
ಬೆಳೆಗಳು ಒಣಗಿ ನಷ್ಟ ಅನುಭವಿಸುತ್ತಿದ್ದಾರೆ ನಮ್ಮ ರೈತರು
ಜಮೀನುಗಳಲ್ಲಿ ವಾಸ ಮಾಡುತ್ತಿರುವುದರಿಂದ ಅವರ ಜೀವನ
ಕಷ್ಟಕರವಾಗುತ್ತಿದೆ ಸಂಜೆವೇಳೆ ಮಕ್ಕಳ ವಿದ್ಯಾಭ್ಯಾಸ ಪಂಪ್
ಸೆಟ್ಟುಗಳ ಮೂಲಕ ಬೆಳಗಳಿಗೆ ನೀರು ಹಾಯಿಸಲು ತೊಂದರೆ
ಪಡುತ್ತಿದ್ದಾರೆ.
ಸರ್ಕಾರದ ಇಂತಹ ಅನೀತಿಗಳಿಂದಾಗಿ ದೇಶಕ್ಕೆ ಅನ್ನ
ಹಾಕುವ ರೈತರು ಸಂಕಷ್ಟ ಪರಿಸ್ಥಿತಿಯನ್ನು ಎದುರಿಸುವಂತಾಗಿದೆ
ಕೂಡಲೇ ಸರ್ಕಾರ ರೈತರಿಗೆ ದಿನದ 24 ಗಂಟೆ ತ್ರಿ ಫೇಸ್ ವಿದ್ಯುತ್ತನ್ನು
ನೀಡಬೇಕು ಸರ್ಕಾರ ರೈತರ ಮನವಿಗೆ ಸ್ಪಂದಿಸದಿದ್ದರೆ ಮುಂದಿನ
ದಿನಗಳಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು.
ರೈತ ಮುಖಂಡ. ಶಿವಣ್ಣ, ಓಟಿ ತಿಪ್ಪೇಸ್ವಾಮಿ, ರಾಜಣ್ಣ, ತಿಪ್ಪೇಸ್ವಾಮಿ, ಹೌಲಪ್ಪ,
ಶಿವಣ್ಣ ತಿಪ್ಪೇಸ್ವಾಮಿ ಸೇರಿದಂತೆ ಇತರರು ಉಪಸ್ಥಿತರಿದ್ದರು.