ಚಳ್ಳಕೆರೆ: ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲಿಪರಶುರಾಂಪುರ ಹೋಬಳಿಯನ್ನು ತಾಲೂಕು ಕೇಂದ್ರವಾಗಿ ಘೋಷಿಸಬೇಕೆಂದು ಆಗ್ರಹಿಸಿ ನಗರದ ನೆಹರು ವೃತ್ತದಲ್ಲಿ ನೂರಾರು ರೈತರು, ಸಾರ್ವಜನಿಕರು ಗುರುವಾರ ನಗರದಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಿದರು.
ನಗರದ ನೆಹರು ವೃತ್ತದಲ್ಲಿ ಜಮಾಯಿಸಿದ ಜನರು ಪ್ರತಿಭಟನೆ ಬಳಿಕ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಪರಶುರಾಂಪುರ ತಾಲೂಕು ಮಾಡುವಂತೆ ಮೂರು ದಶಕಗಳಿಂದ ಹೋರಾಟ ಮಾಡಲಾಗುತ್ತಿದೆ.
ಸರ್ಕಾರ ನೇಮಕ ಮಾಡಿದ್ದ ಎಂ.ಬಿ.ಪ್ರಕಾಶ್ ಸೇರಿ ಬಹುತೇಕ ಸಮಿತಿಗಳು ಪರಶುರಾಂಪುರ ತಾಲೂಕು ಘೋಷಣೆಗೆ ಭೌಗೋಳಿಕವಾಗಿ ಮತ್ತು ಜನಸಂಖ್ಯೆ ಆಧಾರಿತವಾಗಿ ಅರ್ಹತೆ ಇದೆ ಎಂದು ಸರ್ಕಾರಕ್ಕೆ ವರದಿ ಸಲ್ಲಿಸಿದೆ ಎಂದರು.
ಪರಶುರಾAಪುರ ವ್ಯಾಪ್ತಿಯಲ್ಲಿ ಕಾಲೇಜು, ವೃತ್ತಿಪರ ತರಬೇತಿ ಸಂಸ್ಥೆ, ಸಮುದಾಯ ಆರೋಗ್ಯ ಕೇಂದ್ರ, ಪೊಲೀಸ್ ಠಾಣೆ ಸೇರಿ ನೂರಾರು ಬಸ್‌ಗಳ ಸಂಚಾರಿಸುವ ಕೇಂದ್ರವಾಗಿದೆ.
70 ಕಂದಾಯ ಗ್ರಾಮಗಳ ಜನರ ಸರ್ಕಾರಿ ಕೆಲಸಗಳ ಅನುಕೂಲಕ್ಕಾಗಿ ಪರಶುರಾಂಪುರ ತಾಲೂಕು ಘೋಷಣೆ ಆಗಬೇಕಿದೆ. ಅಲ್ಲಿಯವರೆಗೆ ನಿರಂತರವಾಗಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ಟಿ.ರಘುಮೂರ್ತಿ, 2013ರ ಅವಧಿಯಿಂದ ಪರಶುರಾಂಪುರವನ್ನು ತಾಲೂಕಾಗಿ ಘೋಷಿಸಬೇಕು ಎಂದು ಸರ್ಕಾರದ ಹಂತದಲ್ಲಿ ಪ್ರಯತ್ನ ನಡೆಸಲಾಗಿತ್ತು. ಕೆಲ ರಾಜಕೀಯ ಒತ್ತಡಗಳಿಂದ ಹಿನ್ನಡೆಯಾಗಿದೆ. ಪ್ರಸ್ತುತ ಸರ್ಕಾರದಿಂದ ಪರಶುರಾಂಪುರವನ್ನು ತಾಲೂಕಾಗಿ ಘೋಷಿಸುವುಸು ನನ್ನ ಗುರಿ ಆಗಿದೆ ಎಂದು ತಿಳಿಸಿದರು.

ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಸೋಮಗುದ್ದು ರಂಗಸ್ವಾಮಿ, ಅಧ್ಯಕ್ಷ ಸಿದ್ದನಗೌಡ ಪಾಟೀಲ, ತಾಲೂಕಾಧ್ಯಕ್ಷ ಕೆ.ಚಿಕ್ಕಣ್ಣ, ಪ್ರಧಾನ ಕಾರ್ಯದರ್ಶಿ ಎಚ್.ಪ್ರಕಾಶ್, ಕಾರ್ಯಾಧ್ಯಕ್ಷ ಹನುಮಂತರಾಯಪ್ಪ, ತಾಪಂ ಮಾಜಿ ಸದಸ್ಯ ಹನುಮಂತಪ್ಪ, ಹೊರಕೆರೆ ರಂಗಸ್ವಾಮಿ, ಪಿ.ಚನ್ನಕೇಶವ, ತಿಮ್ಮಣ್ಣ, ಜಯವೀರಚಾರಿ, ಶಾಂತಣ್ಣ, ಮಂಜುನಾಥ, ರಾಮಚಂದ್ರಪ್ಪ, ಗಂಗಾಧರ ಇತರರಿದ್ದರು.
ಗೌರವ ಅಧ್ಯಕ್ಷರಾದ ಕೃಷ್ಣಮೂರ್ತಿ, ಉಪಾಧ್ಯಕ್ಷರಾದ ಜಂಪಣ್ಣ, ಶಿವಶಂಕರಮೂರ್ತಿ, ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಮತ್ತು ರೈತ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಬಾಕ್ಸ್ ಮಾಡಿ :
ಕಳೆದ ಚುನಾವಣೆಯಲ್ಲಿ ನಾನು ಮತದಾರರಿಗೆ ನೀಡಿದ ಭರವಸೆಯಂತೆ ಪರಶುರಾಂಪುರವನ್ನು ತಾಲೂಕಾಗಿ ಘೋಷಿಸಬೇಕು ಎಂದು ಸರ್ಕಾರದ ಹಂತದಲ್ಲಿ ಪ್ರಯತ್ನ ನಡೆಸಲಾಗುತ್ತಿದೆ ಅದರಂತೆ ಈ ಬಾರಿ ಸರಕಾರಕ್ಕೆ ಒತ್ತಡ ತರಲಾಗುತ್ತದೆ, ಕೆಲ ರಾಜಕೀಯ ಒತ್ತಡಗಳಿಂದ ಹಿನ್ನಡೆಯಾಗಿದೆ. ಪ್ರಸ್ತುತ ಸರ್ಕಾರದಿಂದ ಪರಶುರಾಂಪುರವನ್ನು ತಾಲೂಕಾಗಿ ಘೋಷಿಸುವುಸು ನನ್ನ ಗುರಿ ಆಗಿದೆ.
-ಶಾಸಕ ಟಿ.ರಘುಮೂರ್ತಿ
ಚಳ್ಳಕೆರೆ ಕ್ಷೇತ್ರ

Namma Challakere Local News
error: Content is protected !!