ಚಳ್ಳಕೆರೆ: ತಾಲೂಕಿನ ಹೊಸ ಮುಚುಕುಂಟೆ ಗ್ರಾಮದಲ್ಲಿ ದಲಿತರ
ಉಳಿಮೆ ಜಮೀನು ಪಕ್ಕದಲ್ಲಿ ಸ್ಮಶಾನ ಮಂಜೂರು ಮಾಡ ಬಾರದು ಎಂದು ಮನವಿ ನೀಡಿದ ಮಾಳಿಕರಿಗೆ ಇಂದು ಅಧಿಕಾರಿಗಳ ತಂಡದೊಂದಿಗೆ ತಹಶೀಲ್ದಾರ್ ರೆಹಾನ್
ಪಾಷಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಂತರ ಮಾಧ್ಯಮದೊಂದಿಗೆ ಮಾತನಾಡಿದ ತಹಶೀಲ್ದಾರ್ ರೆಹಾನ್
ಪಾಷಾ, ಈ ಗ್ರಾಮದ ಸಣ್ಣ ದ್ಯಾಮಪ್ಪ ಎಂಬುವರಿಗೆ ಸರ್ಕಾರದಿಂದ
ಸರ್ವೆ ನಂ 137ರ ಗೋಮಾಳದ 6 ಎಕರೆ ಜಮೀನು ಈಗಾಗಲೇ
ಮಂಜೂರು ಮಾಡಲಾಗಿದ್ದು ಈ ಜಮೀನು ಪ್ರದೇಶದಲ್ಲಿ ಸ್ಮಶಾನಕ್ಕಾಗಿ
ಜಾಗವನ್ನು ವಶಪಡಿಸಿಕೊಂಡಿಲ್ಲ ಉಳಿದ ಗೋಮಾಳ ಪ್ರದೇಶವು
ಸರ್ಕಾರದ ವಶದಲ್ಲಿದ್ದು ಅಲ್ಲಿ ಗ್ರಾಮಸ್ಥರ ಮನವಿಯ ಮೇರೆಗೆ
ದಲಿತರಿಗಾಗಿ ಸ್ಮಶಾನ ನಿರ್ಮಿಸಲು
ಉದ್ದೇಶಿಸಿದ್ದು, ಸಣ್ಣ
ದ್ಯಾಮಪ್ಪನವರ ಜಮೀನಿಗೂ ಸ್ಮಶಾನ ಭೂಮಿಗೂ ಯಾವುದೇ
ಸಂಬಂಧವಿರುವುದಿಲ್ಲ.
ಗ್ರಾಮೀಣ ಪ್ರದೇಶಗಳಲ್ಲಿ ಇಂತಹ
ಪ್ರಕರಣಗಳು ಸರ್ವೆಸಾಮಾನ್ಯ ಕೂಡಲೆ ಸ್ಮಶಾನಕ್ಕಾಗಿ ಮೀಸಲಿಟ್ಟಿರುವ
ಗೋಮಾಳ ಪ್ರದೇಶವನ್ನು ಬೇಲಿ ಹಾಕಿ ಸಂರಕ್ಷಿಸಲಾಗುವುದು
ಯಾವುದೇ ಸರ್ಕಾರಿ ಗೋಮಾಳಗಳನ್ನು ಯಾರು, ಒತ್ತುವರಿ
ಮಾಡಿಕೊಳ್ಳಬಾರದು ಅಂತಹ ಪ್ರಕರಣಗಳು ಕಂಡು ಬಂದಲ್ಲಿ
ತಾಲೂಕು ಆಡಳಿತ ವಶಪಡಿಸಿಕೊಂಡು ಕ್ರಮ ಕೈಗೊಳ್ಳಲಾಗುವುದು
ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಕಂದಾಯ ನಿರೀಕ್ಷಕ ಲಿಂಗೇಗೌಡ, ಗ್ರಾಮ ಲೆಕ್ಕಿಗರಾದ ಲಕ್ಷ್ಮೀ ಸೇರಿದಂತೆ
ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.