ನಾಯಕನಹಟ್ಟಿ:: ಸಮೀಪದ ಎನ್ ದೇವರಹಳ್ಳಿ ಗ್ರಾಮ ಪಂಚಾಯಿತಿ ಚುನಾವಣೆಯ ಸೋಮವಾರ ಎರಡನೇ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಗಳಿಗೆ ಚುನಾವಣೆ ನಡೆಯಿತು.
ಸಾಮಾನ್ಯ ಮಹಿಳೆಗೆ ಅಧ್ಯಕ್ಷ ಸ್ಥಾನ ಮತ್ತು ಪರಿಶಿಷ್ಟ ಜಾತಿ ಮಹಿಳೆಗೆ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾಗಿದ್ದು
ಅಧ್ಯಕ್ಷ ಸ್ಥಾನಕ್ಕೆ ಶ್ರೀಮತಿ ರತ್ನಮ್ಮ ರಾಜಣ್ಣ,ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಶ್ರೀಮತಿ ಸರಿತಾಭಾಯಿ ರಾಜ ನಾಯ್ಕ
ನಾಮಪತ್ರ ಸಲ್ಲಿಸಿದರು..
ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳ ವಿರುದ್ಧ ಯಾರೊಬ್ಬರೂ ನಾಮಪತ್ರ ಸಲ್ಲಿಸಿದ ಕಾರಣದಿಂದಾಗಿ ಅಧ್ಯಕ್ಷ ಸ್ಥಾನಕ್ಕೆ ಉಮೇದುವಾರಿಕೆ ಸಲ್ಲಿಸಿದ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಉಪ ಕೃಷಿ ನಿರ್ದೇಶಕ ಕೆ ಎಸ್ ಶಿವಕುಮಾರ್ ಚುನಾವಣಾ ಅಧಿಕಾರಿ ತಿಳಿಸಿದ್ದಾರೆ.
ಇದೇ ವೇಳೆ ನೂತನ ಅಧ್ಯಕ್ಷೆ ರತ್ನಮ್ಮ ರಾಜಣ್ಣ ಮಾತನಾಡಿ ನಮ್ಮ ಗ್ರಾಮ ಪಂಚಾಯತಿಯ ಸರ್ವತೋಮುಖ ಅಭಿವೃದ್ಧಿ ಮಾಡುವ ಗುರಿ ಬಂದಿದ್ದೇನೆ ಕುಡಿಯುವ ನೀರು ಸ್ವಚ್ಛತೆ ಚರಂಡಿ ಕ್ಲೀನಿಂಗ್ ಹೀಗೆ ಸರ್ವ ಜನಾಂಗದ ವಿಶ್ವಾಸದಲ್ಲಿ ಗ್ರಾಮ ಪಂಚಾಯತಿಯನ್ನು ಅಭಿವೃದ್ಧಿಪಥದತ್ತ ಕೊಂಡಿದ್ದೇನೆ ಎಂದು ಪತ್ರಿಕೆಯೊಂದಿಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ನೂತನ ಗ್ರಾಮ ಪಂಚಾಯತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಗ್ರಾಮದ ಆರಾಧ್ಯದೇವತೆ ದಡ್ಲ ಮಾರಿಕಾಂಬ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಸಲ್ಲಿಸಿದರು
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷೆ ರತ್ನಮ್ಮ ರಾಜಣ್ಣ, ಉಪಾಧ್ಯಕ್ಷೆ ಸರಿತಾಬಾಯಿ ರಾಜನಾಯ್ಕ,
ಸದಸ್ಯರಾದ ಡಾ ಪಿ ಕಾಟಂಲಿಂಗಯ್ಯ, ಸುಮಾ ಸುಭಾಷ್ ಚಂದ್ರ ಬೋಸ್, ಆರ್ ಬಸವರಾಜ್, ರಾಯಮ್ಮ ಬೈಯಣ್ಣ, ಎಸ್ ಸಿದ್ದಪ್ಪ, ಎನ್ ಕೃಷ್ಣವೇಣಿ ರಾಜು, ಶಿವರುದ್ರಮ್ಮ ರಾಮಣ್ಣ, ರಾಜಣ್ಣ ಮರ್ರಯ್ಯನಹಟ್ಟಿ, ಸೇರಿದಂತೆ
ಪಿಡಿಓ ಕೆ ಒ ಶಶಿಕಲಾ ,ಎನ್ ದೇವರಹಳ್ಳಿ ಗ್ರಾಮಸ್ಥರು ಗ್ರಾಮ ಪಂಚಾಯತಿ ವ್ಯಾಪ್ತಿಯ ಸಮಸ್ತ ವಿವಿಧ ಹಳ್ಳಿಗಳ ಗ್ರಾಮಸ್ಥರು ಇದ್ದರು