ಎಸ್.ಜೆ.ಎಂ. ತಾಂತ್ರಿಕ ಮಹಾವಿದ್ಯಾಲಯದ ಭೌತಶಾಸ್ತç ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಪ್ರೊ. ದೇವಿಕಾ ಬಿ ಜಿ ಇವರು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ ವಿಟಿಯುನ 23ನೇ ಘಟಿಕೋತ್ಸವದಲ್ಲಿ ಪಿಹೆಚ್‌ಡಿ ಪದವಿಯನ್ನು ಪಡೆದಿರುತ್ತಾರೆ. ಬೆಂಗಳೂರಿನ ಎಸ್‌ಜೆಬಿ ತಾಂತ್ರಿಕ ಮಹಾವಿದ್ಯಾಲಯದ(ಎಸ್‌ಜೆಬಿಐಟಿ) ಭೌತಶಾಸ್ತç ವಿಭಾಗದ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾದ ಡಾ. ಬಿ ಹೆಚ್ ದೊರೆಸ್ವಾಮಿ ಇವರ ಮಾರ್ಗದರ್ಶನದಲ್ಲಿ ಮಂಡಿಸಿದ “ಮಾಲಿಕ್ಯುಲರ್ ಸ್ಟçಕ್ಚರ್ & ಫಿಸಿಯೋ-ಕೆಮಿಕಲ್ ಸ್ಟಡಿ ಆಫ್ ಹಿಟಿರೋಸೈಕ್ಲಿಕ್ ಲಿಗಾಂಡ್ & ದೆರ್ ಮೆಟಲ್ ಕಾಂಪ್ಲೆಕ್ಸಸ್” ಎಂಬ ಸಂಶೋಧನ ವಿಷಯಕ್ಕೆ ಡಾಕ್ಟರೇಟ್ ದೊರೆತಿದೆ. ಇವರನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಚಾರ್ಯ ಡಾ.ಭರತ್ ಪಿ ಬಿ ಮತ್ತು ಸಿಬ್ಬಂದಿವರ್ಗದವರು ಅಭಿನಂದಿಸಿದ್ದಾರೆ.