ನಾಯಕನಹಟ್ಟಿ:: ಹೋಬಳಿ ಗೌಡಗೆರೆ ಗ್ರಾಮ ಪಂಚಾಯಿತಿ ಚುನಾವಣೆಯ ಬುಧವಾರ ಎರಡನೇ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಗಳಿಗೆ ಚುನಾವಣೆ ನಡೆಯಿತು.

ಸಾಮಾನ್ಯ ಮಹಿಳೆ ಅಧ್ಯಕ್ಷ ಸ್ಥಾನಕ್ಕೆ ಮತ್ತು ಪರಿಶಿಷ್ಟ ಜಾತಿ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾಗಿದ್ದು ಅಧ್ಯಕ್ಷ ಸ್ಥಾನಕ್ಕೆ ಶ್ರೀಮತಿ ರಾಧಮ್ಮ ಆರ್. ಬೋರಯ್ಯ,ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಸಣ್ಣಪ್ಪ
ಬಹುಮತಪಡೆದು ಆಯ್ಕೆ ಗೊಂಡರು

16 ಜನ ಸದಸ್ಯರ ಬಲ ಹೊಂದಿರುವ ಗ್ರಾಮ ಪಂಚಾಯತಿಯಲ್ಲಿ ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸಿದ್ದ ಅದ್ಯಕ್ಷ ರಾಗಿ ಆಯ್ಕೆಯಾದ ರಾಧಮ್ಮಗೆ 9 ಮತಗಳು ಉಪಾಧ್ಯಕ್ಷ ರಾಗಿ ಆಯ್ಕೆಯಾದ ಸಣ್ಣಪ್ಪಗೆ 9 ಮ ತಗಳು ಪಡೆದರು ಎದುರಾಳಿ ಯಾಗಿ ಸ್ಪರ್ಧೆ ಮಾಡಿದ್ದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಮಂಜಮ್ಮ ಡಿಜಿ ಗೋವಿಂದ 7 ಮತಗಳು ಉಪಾಧ್ಯಕ್ಷಸ್ಥಾನಕ್ಕೆ ಸ್ಪಧಿಸಿದ್ದ ಅನ್ನಪೂಣೇಶ್ವರಿ 7 ಮತಗಳಿಸಿ ಪರಾಭವ ಹೊಂದಿದರು

ಕ್ರಮವಾಗಿ ಉಮೇದುವಾರಿಕೆ ಸಲ್ಲಿಸಿದ. ರಾಧಮ್ಮ ಹಾಗೂ ಸಣ್ಷಪ್ಪ . ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ
ಚುನಾವಣೆ ಮೂಲಕ‌ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾ ಅಧಿಕಾರಿ ಕೆ ಎಚ್ ದಯಾನಂದ್ ತಿಳಿಸಿದ್ದಾರೆ..

ಇನ್ನೂ ಗ್ರಾಮ ಪಂಚಾಯತಿಯ ವ್ಯಾಪ್ತಿಯ ಹಳ್ಳಿಗಳ ಸಾರ್ವಜನಿಕರು ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು

ಇದೆ ವೇಳೆ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಟಿ ರಂಗಪ್ಪ ಮಾತನಾಡಿ ನೂತನ ಅಧ್ಯಕ್ಷ ರಾದಮ್ಮ ಬೋರಣ್ಣ ಹಾಗೂ ಉಪಾಧ್ಯಕ್ಷ ಸಣ್ಣಪ್ಪ ರವರು ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ವತೋಮುಖ ಅಭಿವೃದ್ಧಿಗಾಗಿ ಸರ್ವ ಸದಸ್ಯರ ಜೊತೆಗೂಡಿ ಉತ್ತಮ ಆಡಳಿತ ನಡೆಸುವಂತೆ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಅಭಿನಂದನೆ ತಿಳಿಸಿದರು.

ಇದೇ ಸಂದರ್ಭದಲ್ಲಿ ಪಟೇಲ್ ಜಿ ಎಂ ತಿಪ್ಪೇಸ್ವಾಮಿ ಎತ್ತಿನಹಟ್ಟಿ ಗೌಡ್ರು ಮಲ್ಲೂರಹಟ್ಟಿ ಗೌಡ್ರು ತಿಪ್ಪೇಸ್ವಾಮಿ. , ಗೌಡ್ರು ಧನಂಜಯ್, ಗೌಡ್ರು ಸಣ್ಣ ರುದ್ರಪ್ಪ, ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಹನುಮಣ್ಣ ಭೀಮಗೊಂಡನಹಳ್ಳಿ, ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಎಸ್ ಓ ತಿಪ್ಪೇಸ್ವಾಮಿ, ಎಚ್ ಸಿ ತಿಪ್ಪೇಸ್ವಾಮಿ ರೈತ ಸೇವಾ ಸಹಕಾರ ಸಂಘ ನಾಯಕನಹಟ್ಟಿ, ಜಿ. ಬಿ. ಮುದಿಯಪ್ಪ, ಟಿ. ಬಸಪ್ಪ ನಾಯಕ, ಎಚ್‌ ಬಿ ತಿಪ್ಪೇಸ್ವಾಮಿ ಮಾಜಿ ಗ್ರಾಮ ಪಂಚಾಯತಿ ಸದಸ್ಯರು ಜೋಗಿಹಟ್ಟಿ ನಟಿ ಮಲ್ಲೂರಹಟ್ಟಿ ಜಿ ಆರ್ ನಾಗರಾಜ್, ಗೌಡಗೆರೆ ರಂಗನಾಥ್, ಕಾಂಗ್ರೆಸ್ ಪಕ್ಷದ ಓಬಿಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ ಟಿ ತಿಪ್ಪೇಸ್ವಾಮಿ ಗೌಡಗೆರೆ, ಶಂಕ್ರಪ್ಪ ಭೀಮಗೊಂಡನಹಳ್ಳಿ, ಜಿ ಡಿ ಆರ್ ತಿಪ್ಪೇಸ್ವಾಮಿ, ರಂಗಸ್ವಾಮಿ ಭೀಮಗೊಂಡನಹಳ್ಳಿ, ಗ್ರಾಮ ಪಂಚಾಯತಿಯ ಸದಸ್ಯರಾದ ಜಿ ಒ ಓಬಳೇಶ್, ಟಿ ರಂಗಪ್ಪ, ಶಾಂತಮ್ಮ, , ಮಂಜಕ್ಕ, ನಾಗಣ್ಣ ರೇವಕ್ಕ, ಬಿ ಸರೋಜಮ್ಮ, ಕೆ ಎಚ್ ಮಂಜುಳಾ, ಸೇರಿದಂತೆ ಪಿಡಿಒ ಕೆ ಗಂಗಾಧರ್ ನಾಯ್ಕ, ಸೇರಿದಂತೆ ಸಮಸ್ತ ಗೌಡಗೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ವಿವಿಧ ಹಳ್ಳಿಗಳ ಗ್ರಾಮಸ್ಥರು ಇದ್ದರು

Namma Challakere Local News
error: Content is protected !!