ನಾಯಕನಹಟ್ಟಿ:: ಸಮೀಪದ ನಲಗೇತನಹಟ್ಟಿ ಗ್ರಾಮ ಪಂಚಾಯಿತಿ ಚುನಾವಣೆಯ ಗುರುವಾರ ಎರಡನೇ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಗಳಿಗೆ ಚುನಾವಣೆ ನಡೆಯಿತು.
ಪರಿಶಿಷ್ಟ ಪಂಗಡಕ್ಕೆ ಮಹಿಳೆ ಅಧ್ಯಕ್ಷ ಸ್ಥಾನ ಮತ್ತು ಸಾಮಾನ್ಯ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾಗಿದ್ದು ಅಧ್ಯಕ್ಷ ಸ್ಥಾನಕ್ಕೆ ಪಾಲಮ್ಮ ಪೂರ್ಣ ಓಬಯ್ಯ,
ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಈಗಲು ಬೋರಯ್ಯ
ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳ ವಿರುದ್ಧ ಯಾರೊಬ್ಬರೂ ನಾಮಪತ್ರ ಸಲ್ಲಿಸದ ಕಾರಣದಿಂದಾಗಿ ಅಧ್ಯಕ್ಷ ಸ್ಥಾನಕ್ಕೆ ಉಮೇದುವಾರಿಕೆ ಸಲ್ಲಿಸಿದ. ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾ ಅಧಿಕಾರಿ ದಯಾನಂದ್ ತಿಳಿಸಿದ್ದಾರೆ..
ಇದೆ ವೇಳೆ ನೂತನ ಅಧ್ಯಕ್ಷೆ ಪಾಲಮ್ಮ ಪೂರ್ಣ ಓಬಯ್ಯ ಮಾತನಾಡಿ ಅಧಿಕಾರ ಶಾಶ್ವತವಲ್ಲ ನಮ್ಮ ಗ್ರಾಮ ಪಂಚಾಯತಿಯ ಸರ್ವ ಸದಸ್ಯರು ಸಹಕಾರ ನೀಡಿದಲ್ಲಿ ಉತ್ತಮವಾಗಿ ಆಡಳಿತ ನೀಡಲು ಅನುಕೂಲವಾಗುತ್ತದೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಹಳ್ಳಿಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವುದಾಗಿ ಭರವಸೆ ನೀಡಿದರು.
ಇನ್ನೂ ಗ್ರಾಮ ಪಂಚಾಯತಿಯ ವ್ಯಾಪ್ತಿಯ ಹಳ್ಳಿಗಳ ಸಾರ್ವಜನಿಕರು ಅಭಿಮಾನಿಗಳು ಗ್ರಾಮಸ್ಥರು ಪಟಾಕಿ ಸಿಡಿಸಿ ಸಂಭ್ರಮಿಸಿ ನೂತನ ಅಧ್ಯಕ್ಷೆ ಪಾಲಮ್ಮ ಪೂರ್ಣ ಓಬಯ್ಯ ಮತ್ತು ಉಪಾಧ್ಯಕ್ಷರಾದ ಈಗಲೂ ಬೋರಯ್ಯ ಗ್ರಾಮದ ಆರಾಧ್ಯ ದೈವ ಶ್ರೀ ಚನ್ನಕೇಶವಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜಿಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಮುಖಂಡ ಪಿ ಎಂ ಪೂರ್ಣ ಓಬಯ್ಯ, ಪಿ ಬಿ ಬೋರ್ ಮುತ್ತೆ, ಸದಸ್ಯರಾದ ಪಿ ಎನ್ ಮುತ್ತಯ್ಯ, ಬೊಮ್ಮಲಿಂಗೇಶ್, ಬೋರಮ್ಮ ಮೇಕೆಬೋರೆಯ್ಯ, ಸಣ್ಣ ಬೋರಮ್ಮ, ದೊಡ್ಡ ಬೋರಮ್ಮ, ಗೌಡ್ರ ಬೋರಯ್ಯ, ಪಿ ಬಿ ಪೂರ್ಣ ಮುತ್ತಯ್ಯ, ಬಿ ಪಿ ಪುಷ್ಪಲತಾ, ಬೋರಮ್ಮ ನಿಂಗರಾಜ್, ಜೆ ಮಲ್ಲಿಕಾರ್ಜುನ್, ಲಕ್ಷ್ಮಿ ದೇವಿ, ಕೆ ಬಿ ಬೋಸಯ್ಯ, ದ್ರಾಕ್ಷಾಯಣಮ್ಮ, ಬಂಗಾರಯ್ಯ, ಸೇರಿದಂತೆ ಪಿಡಿಓ ಎನ್ ಬಿ ವೀರನಾಯಕ, ನಲಗೇತನಹಟ್ಟಿ ಗ್ರಾಮಸ್ಥರು ಗ್ರಾಮ ಪಂಚಾಯತಿ ವ್ಯಾಪ್ತಿಯ ಸಮಸ್ತ ವಿವಿಧ ಹಳ್ಳಿಗಳ ಗ್ರಾಮಸ್ಥರು ಇದ್ದರು