ಚಳ್ಳಕೆರೆ : ತಾಲೂಕಿನ ಗೌರಸಮುದ್ರ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಎಂ.ಓಬಣ್ಣ ಚುನಾವಣೆ ಪ್ರಕ್ರಿಯೆಯಲ್ಲಿ ಆಯ್ಕೆಯಾಗಿದ್ದಾರೆ.
ಇನ್ನೂ ಗ್ರಾಮ ಪಂಚಾಯಿತಿ ಸದಸ್ಯರ ಸ್ಥಾನದ 23 ಸದಸ್ಯರಲ್ಲಿ ಎಲ್.ರಾಜಣ್ಣನಿಗೆ 11 ಮತಗಳು ಸಲ್ಲಿಕೆಯಾದರೆ ಎಂ.ಓಬಣ್ಣರವರಿಗೆ 13 ಮತಗಳು ಅಲ್ಲಿಕೆಯಾಗಿರುವುದರಿಂದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಇನ್ನೂ ನೂತನ ಅಧ್ಯಕ್ಷ ಎಂ.ಓಬಣ್ಣ ಮಾಧ್ಯಮದೊಂದಿಗೆ ಮಾತನಾಡಿ, ಗ್ರಾಮದಲ್ಲಿ ಸರ್ವತೋಮುಖ ಅಭಿವೃದ್ದಿ ಮಾಡುವ ಗುರಿಹೊಂದಿದ್ದೆನೆ ಕುಡಿಯುವ ನೀರು, ಸ್ವಚ್ಚತೆ, ಚರಂಡಿ ಕ್ಲಿನಿಂಗ್ , ಈಗೇ ಸರ್ವ ಜನಾಂಗದ ವಿಶ್ವಾಸದಲ್ಲಿ ಗ್ರಾಮ ಪಂಚಾಯಿತಿಯನ್ನು ಅಭಿವೃದ್ದಿ ಪಥದತ್ತ ಕೊಂಡುಯ್ಯುತ್ತೆನೆ ಎಂದು ಮಾಧ್ಯಮದೊಂದಿಗೆ ಅಭಿಪ್ರಾಯ ಹಂಚಿಕೊAಡಿದ್ದಾರೆ.
ಇನ್ನೂ ಸದಸ್ಯರಾದ ಶಶಿಕುಮಾರ್ ಮಾತನಾಡಿ, ಅಧಿಕಾರ ಶಾಶ್ವತವಲ್ಲ ನಮ್ಮ ಗ್ರಾಮ ಪಂಚಾಯತಿಯ ಸರ್ವ ಸದಸ್ಯರು ಸಹಕಾರ ನೀಡಿದಲ್ಲಿ ಉತ್ತಮವಾಗಿ ಆಡಳಿತ ನೀಡಲು ಅನುಕೂಲವಾಗುತ್ತದೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಹಳ್ಳಿಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವುದು ಪ್ರಮುಖ ಎಂದರು.
ಈದೇ ಸಂಧರ್ಭದಲ್ಲಿ ನೂತನ ಗ್ರಾಮ ಪಂಚಾಯಿತಿ ಅಧ್ಯಕ್ಷರನ್ನು ಹೊತ್ತು ಗ್ರಾಮದ ಆದಿ ದೇವತೆ ಗೌರಸಮುದ್ರ ದೇವಿಗೆ ಪೂಜೆ ಸಲ್ಲಿಸಿ ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡುವ ಮೂಲಕ ಸಂತಸವನ್ನು ವ್ಯಕ್ತಪಡಿಸಿದ್ದಾರೆ.
ಈದೇ ಸಂಧರ್ಭದಲ್ಲಿ ಗ್ರಾಪಂ.ಸದಸ್ಯರಾದ ತಿಮ್ಮಾರೆಡ್ಡಿ, ಮಲ್ಲಯ್ಯ, ಸಂಜಯ್ ಗೌಡ, ಶಶಿಕುಮಾರ್, ತಿಪ್ಪೆಸ್ವಾಮಿ, ನಾಗರಾಜ್, ಗುರುಸ್ವಾಮಿ, ಇತರರು ಪಾಲ್ಗೊಂಡಿದ್ದರು.