ರಾಮಾಂಜನೇಯ ಕೆ.ಚನ್ನಗಾನಗಳ್ಳಿ
ಚಳ್ಳಕೆರೆ : ಸ್ಥಳೀಯ ಶಾಸಕರ ಇತಸಕ್ತಿಯಿಂದ ನಗರತ್ಥೋನದಲ್ಲಿ ಸುಮಾರು ಕೋಟಿಗಳ ಲೆಕ್ಕಾದಲ್ಲಿ ಚಳ್ಳಕೆರೆ ನಗರದಲ್ಲಿ ಸುಸಜ್ಜಿತವಾದ ರಸ್ತೆ ಅಗಲೀಕರಣ ಮಾಡಲಾಯಿತು, ಆದರೆ ಅದನ್ನು ಅಷ್ಟೆ ವ್ಯವಸ್ಥತಿ ರೀತಿಯಲ್ಲಿ ಬಳಕೆ ಕೂಡ ಆಗಬೇಕಿದೆ.
ಹೌದು ನಗರದ ಹೃದಯ ಭಾಗದಿಂದ ಸುಮಾರು ಮೂರು ಕಿಲೋ ಮೀಟರ್ ವರೆಗೆ ವಿಸ್ತಿರ್ಣ ವ್ಯಾಜ್ಯ ಹೊಂದಿದ ನಗರ ಪ್ರದೇಶ ವಿಶಾಲವಾದ ರಸ್ತೆ, ಪುಟ್ ಬಾತ್, ಒಳ ಚಂರಡಿ, ಬೀದಿ ದೀಪ, ಡಿವೈಂಡರ್ ಮಧ್ಯೆ ಶೋ ಗಿಡಗಳ ನಿರ್ಮಾಣ ಈಗೇ ಒಂದಲ್ಲ ಅಲ್ಲ ಎರಡಲ್ಲ ಹತ್ತು ಹಲವು ಯೋಜನೆಗಳ ಮೂಲಕ ನಗರ ಸುಂದರವಾಗಿಸಲು ಪಣತೊಟ್ಟ ಸ್ಥಳೀಯ ಶಾಸಕರು ಅಭಿವೃದ್ದಿಗೆ ಮನಸೋತ ಜನರು ಮೂರು ಬಾರಿ ಆಯ್ಕೆ ಮಾಡುವ ಮೂಲಕ ಹ್ಯಾಟ್ರಿಕ್ ಶಾಸಕನನ್ನಾಗಿ ಆಯ್ಕೆ ಮಾಡಿದ್ದಾರೆ.
ಇನ್ನೂ ನಗರದಲ್ಲಿ ಪಟ್ಟಣ ಪಂಚಾಯಿತಿAದ ನಗರಸಭೆಯಾಗಿ ಪರಿವರ್ತನೆಯಾದ ಬಳಿಕ ಅನುದಾನ ಕೂಡ ಹೆಚ್ಚಳವಾಯಿತು, ನಗರದ ಘನತೆ ಕೂಡ ಹೆಚ್ಚಾಯಿತು, ಆದರೆ ಅಧಿಕಾರಿಗಳ ನಿಲ್ಯರ್ಕ್ಷದಿಂದ ಸ್ವಚ್ಚ ನಗರಕ್ಕೆ ಕಳಂಕ ತರುವ ನಿಟ್ಟಿನಲ್ಲಿ ಅಧಿಕಾರಿಗಳ ಕಾರ್ಯ ವೈಖರಿಗೆ ಕಳೆದ ಜನ ಸಪಂರ್ಕ ಸಭೆಯಲ್ಲಿ ಅಧಿಕಾರಿಗಳ ವಿರುದ್ದ ಚಾಟಿ ಬಿಸಿದ ಸ್ಥಳೀಯ ಶಾಸಕ ಟಿ.ರಘುಮೂರ್ತಿ ಸ್ವತಃ ತಾವೇ ಅಕ್ರಮವಾಗಿ ಪುಟ್‌ಬಾತ್ ಮೇಲೆ ಪಾದಚಾರಿಗಳ ಓಡಾಡಟಕ್ಕೆ ವಿನಾಃ ಕಾರಣ ತೊಂದರೆ ನೀಡುವವರ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಿ ಎಂದು ಗರಂ ಆದ ಪ್ರಸಂಗ ನಡೆಯಿತು. ಆದರೆ ಸಭೆ ಮುಗಿದು ಮೂರು ದಿನವಾದರು ಪ್ರಗತಿ ಕಂಡಿಲ್ಲ, ಇನ್ನೂ ಅಧಿಕಾರಿಗಳ ಜಾಣ ಕುರುಡುತನಕ್ಕೆ ಶಾಸಕರ ಇನ್ನೋಂದು ಜನಸಂಪರ್ಕ ಸಭೆ ಮಾಡಬೇಕಾಗುತ್ತದೆ.
ನಗರದಲ್ಲಿ ದಿನವೊಂದಕ್ಕೆ ಸಾವಿರಾರು ವಿದ್ಯಾರ್ಥಿಗಳು, ರೈತರು, ಕಾರ್ಮಿಕರು, ನೌಕರು, ಪಟ್ಟಣದಿಂದ ನಗರದತ್ತ ಬರುವವರ ಸಂಖ್ಯೆ ಹೆಚ್ಚಳವಾಗಿದೆ ಪುಟ್ ಬಾತ್ ಆಕ್ರಮಣದ ಗೂಡ ಅಂಗಡಿಗಳಿAದ ಶಾಲಾ ಮಕ್ಕಳಿಗೆ ಕಿರಿಕಿರಿ ಉಂಟಾಗುತ್ತಿದ್ದು, ಓಡಾಡಲು ಕೂಡ ಆಗದ ಪರಸ್ಥಿತಿ ನಿರ್ಮಾಣವಾಗಿದೆ, ಇನ್ನೂ ಅನಿವಾರ್ಯವಾಗಿ ಚಿತ್ರದುರ್ಗ ರಸ್ತೆಯಲ್ಲಿ ಓಡಾಡುವಾಗ ಜೀವ ಅಂಗೈಯಲ್ಲಿಡಿದು ಓಡಾಡುವ ಅನಿವಾರ್ಯತೆ ಎದುರಾಗಿದೆ, ರಸ್ತೆ ಮೇಲೆ ವೇಗವಾಗಿ ಚಲಾಯಿಸುವ ವಾಹನಗಳ ಮಧ್ಯೆ ಶಾಲಾ ಮಕ್ಕಳು, ಕಾರ್ಮಿಕರು, ವಯೋವೃದ್ದರು ಅಪಘಾತಗಳು ಸಂಭವಿಸಿ ಜೀವ ತೆತ್ತಿರುವ ಉದಾಹರಣೆಗಳು ಕೂಡ ಇವೆ.
ಇನ್ನೂ ಪುಟ್‌ಬಾತ್ ಕೂಡ ವ್ಯಾಪರೀಕರಣವಾಗಿ ಮಾರ್ಪಡುತ್ತಿದೆ. ಸಾರ್ವಜನಿಕರ ಓಡಾಟಕ್ಕೆ ಅನುವು ಮಾಡಬೇಕಾದ ತಹಶೀಲ್ದಾರ್, ನಗರಸಭೆ ಪೌರಾಯುಕ್ತರು, ಪೊಲೀಸ್ ಇಲಾಖೆ ಮೌನ ವಹಿಸಿರುವುದು ಶೋಚನೀಯ.
ಪುಟ್‌ಬಾತ್ ವ್ಯಾಪರ ಮಾಡಿಕೊಳ್ಳಲು ಅನುವು ಮಾಡುಕೊಟ್ಟರೆ ವರ್ಷದ ಉದ್ದಕ್ಕೂ ಅದನ್ನು ವ್ಯಾಪರೀಕರಣ ಮಾಡಿಕೊಂಡು ಇರುವ ಗೂಡ ಅಂಗಡಿಗಳು, ನಗರಸಭೆ ಕಛೇರಿ ಮುಂದಿನ ಪುಟ್‌ಬಾತ್‌ನಲ್ಲಿ ಇಟ್ಟಿರುವ ಸಸಿ, ನರ್ಸರಿ ಗಿಡಗಳು, ಎಳನೀರು, ಗೋಬಿ ಮಂಚರಿ, ಬೀಡಾ ಸ್ಟಾಲ್ ಗಳು ಈಗೇ ಅಕ್ರಮವಾಗಿ ಪಾದಚಾರಿಗಳ ಜಾಗವನ್ನು ಬಿಡದೆ ಅಕ್ರಮಿಸಿದ್ದಾರೆ.
ಇನ್ನೂ ಸಾರ್ವಜನಿಕರ ಓಡಾಟಕ್ಕೆ ಅಧಿಕಾರಿಗಳು ಪುಟ್‌ಬಾತ್ ತೆರವು ಮಾಡಿ ಪಾದಚಾರಿಗಳಿಗೆ ಬಿಡಬೇಕು ಎಂಬ ಕಟ್ಟು ನಿಟ್ಟಿನ ಸೂಚನೆಗೆ ಅಧಿಕಾರಿಗಳು ಮುಂದಾಗುವರೋ ಕಾದು ನೋಡಬೇಕಿದೆ.
ರಸ್ತೆ ಸೂಚನ ಫಲಕ ಮಾಯ :
ನಗರದಲ್ಲಿ ವಿಶಾಲವಾದ ರಸ್ತೆ ಅಗಲೀಕರಣ ವಾಗಿದೆ ಆದರೆ ಅದನ್ನು ಬಳಕೆ ಮಾಡುವ ಸಾರ್ವಜನಿಕರಿಗೆ ಸರಿಯಾದ ರೀತಿಯಲ್ಲಿ ಮಾರ್ಗಗಳು ಇಲ್ಲದೆ ರಸ್ತೆ ಹಂಪ್ಸ್ಗಳು ಸೂಚನೆ ಇಲ್ಲದೆ, ಅತೀ ವೇಗದ ಸೂಚನೆ ಇಲ್ಲ, ತಿರುವಿನ ಮಾರ್ಗಗಳು ಇಲ್ಲದೆ ಈಗೇ ನಗರದಲ್ಲಿ ರಸ್ತೆ ಮಾರ್ಗಗಳು, ಸೂಚನೆ ಫಲಕಗಳು ಇಲ್ಲದೆ ರಸ್ತೆ ಅಪಘಾತಗಳು ಕೂಡ ನಡೆಯುತ್ತಲೆ ಇವೆ ಆದರೆ ಸಂಬAದ ಪಟ್ಟ ಇಲಾಖೆ ಮಾತ್ರ ನೆಪ ಮಾತ್ರಕ್ಕೆ ಕೆಲಸ ಮಾಡಿ ನುಣಚಿಕೊಳ್ಳುತ್ತಿವೆ.
ಬಾಕ್ಸ್ ಮಾಡಿ :
ನಿತ್ಯವೂ ಗ್ರಾಮೀಣ ಪ್ರದೇಶದಿಂದ ನಗರದ ಹೆಚ್‌ಪಿಪಿಸಿ ಕಾಲೇಜ್ ಗೆ ನಡೆದುಕೊಂಡು ಈದೇ ಮಾರ್ಗದಲ್ಲಿ ಓಗಬೇಕು ಆದರೆ ವ್ಯಾಪರೀಕಣರಕ್ಕೆ ಪುಟ್‌ಬಾತ್ ಅಕ್ರಮಿಸಿರುವುದರಿಂದ ನಡು ರಸ್ತೆಯಲ್ಲಿ ನಡೆದುಕೊಂಡು ಹೋಗುವ ಅನಿವಾರ್ಯವಿದೆ, ಒಂದು ಬಾರಿ ಅಫಘಾತ ಕೂಡ ಆಗುವ ಸಂಭವಿತ್ತು ಆದ್ದರಿಂದ ಅಧಿಕಾರಿಗಳು ಶಾಲಾ ಮಕ್ಕಳಿಗೆ ಪುಟ್‌ಬಾತ್ ವ್ಯವಸ್ಥೆ ಕಲ್ಪಿಸಬೇಕು.
—-ಮಂಜುಶ್ರೀ ವಿದ್ಯಾರ್ಥಿನಿ
ಸ್ಥಳೀಯ ಶಾಸಕರು ಕೋಟಿಗಟ್ಟಲೆ ಅನುದಾನ ತರುವ ಮೂಲಕ ಬಯಲು ಸೀಮೆ ನಗರವನ್ನು ಹಸಿರುಕರಣದತ್ತ ಸ್ವಚ್ಚ ನಗರವನ್ನು ಮಾಡಲು ಪಣತೊಟ್ಟಿದ್ದಾರೆ. ಅದರಂತೆ ಅಧಿಕಾರಿಗಳು ಸಾರ್ವಜನಿಕರಿಗೆ ನೆರವು ಹಾಗುವುದರ ಮೂಲಕ ನಿತ್ಯ ಓಡಾಡುವ ಪಾದಚಾರಿಗಳಿಗೆ ಪುಟ್‌ಬಾತ್ ವ್ಯವಸ್ಥೆ ಕಲ್ಪಿಸಬೇಕು.— ಕೆ.ಪಿ.ಭೂತಯ್ಯ ರಾಜ್ಯ ರೈತ ಸಂಘ ರಾಜ್ಯ ಉಪಾಧ್ಯಕ್ಷ

ಪುಟ್ ಬಾತ್ ವ್ಯಾಪರಸ್ಥರ ಮನವೊಲೀಸಿ ನಂತರ ಅವರ ವ್ಯಾಪರಕ್ಕೆ ದಕ್ಕೆ ಬಾರದ ರೀತಿಯಲ್ಲಿ ಪುಟ್‌ಬಾತ್ ಮೇಲೆ ಪಾದಚಾರಿಗಳ ಓಡಾಟಕ್ಕೆ ಅನುಕೂಲ ಮಾಡುಕೊಡಲಾಗುವುದು ಈ ಸಂಭAದ ಪುಟ್‌ಬಾತ್ ವ್ಯಾಪರಿಗಳ ಸಭೆ ಕರೆದು ನಂತರ ಸೂಕ್ತ ಕ್ರಮ ಜರುಗಿಸಲಾಗುವುದು.—ಟಿ.ಬಿ.ರಾಜಣ್ಣ ಡಿವೈಎಸ್‌ಪಿ ಚಳ್ಳಕೆರೆ ಠಾಣೆ

ನಗರದಲ್ಲಿ ವಾಹನಗಳ ನಿಲುಗಡಗೆ ಒಂದು ಸ್ಥಳವೂ ನಗರಸಭೆ ವತಿಯಿಂದ ನಿಗಧಿ ಮಾಡಿಲ್ಲ, ಇನ್ನೂ ಬೈಕ್ ಸಾವರರು ಅನಿವಾರ್ಯವಾಗಿ ರಸ್ತೆ ಮೇಲೆ ಬಿಟ್ಟು ಹೋಗುವಂತ ಪರಸ್ಥಿತಿ ನಿರ್ಮಾಣವಾಗಿದೆ, ಇನ್ನೂ ಸಾರ್ವಜನಿಕ ಆಸ್ವತ್ರೆಗೆ ಅಂಬೂಲೇನ್ಸ್ ಓಡಾಡಲು ಬಿಡದೆ ವಾಹನ ದಟ್ಟಣಿ ಇರುತ್ತದೆ, ಇದರಿಂದ ಟ್ರಾಪಿಕ್ ಕಿರಿಕಿಡಿ ವಾಹನಗಳ ದಟ್ಟಣೆ ಈಗೇ ನಗರದಲ್ಲಿ ಅಧಿಕಾರಿಗಳು ಇದ್ದು ಇಲ್ಲದಂತಾಗಿದೆ.—ರಾಜಣ್ಣ ಕೆ.ಆರ್.ಎಸ್ ಪಕ್ಷ ತಾಲೂಕು ಅಧ್ಯಕ್ಷ

Namma Challakere Local News

You missed

error: Content is protected !!