ನೆನೆಗುದಿಗೆ ಬಿದ್ದ ಸರಕಾರಿ ಪ್ರಾಥಮಿಕ ಶಾಲಾ ಕಟ್ಟಡ…
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕು ಬೆಳಗೆರೆ ಪಂಚಾಯಿತಿ ವ್ಯಾಪ್ತಿಯ ಗಡಿಭಾಗದ ಕಲಮರಹಳ್ಳಿ ಗ್ರಾಮದ ಪ್ರಾಥಮಿಕ ಶಾಲಾ ಕೊಠಡಿಯ ಕಟ್ಟಡದ ಕಾಮಗಾರಿ ಪ್ರಾರಂಭಗೊAಡು ವರ್ಷವಾಗುತ್ತಾ ಬಂದರು ಕಾಮಗಾರಿ ನೆನೆಗುದಿಗೆ ಬಿದ್ದಿರುವುದು ಕಾಣಬಹುದು.
ಇನ್ನೂ ವಿದ್ಯಾರ್ಥಿಗಳು ಮತ್ತು ಅಲ್ಲಿನ ಶಿಕ್ಷಕರು ಉಳಿದ ಹಳೆಯ ಶಿಥಿಲಗೊಂಡ ಶಾಲಾ ಕೊಠಡಿಗಳಲ್ಲಿ ಅನಿವಾರ್ಯವಾಗಿ ಪಾಠ ಪ್ರವಚನಗಳು ನಡೆಯುವಂತಾಗಿದೆ.
ಉಳಿದ ಕೊಠಡಿಗಳಲ್ಲಿ ಮೇಲ್ಚಾವಣೆ ಸೀಟುಗಳು ಹಲವು ಕಡೆ ಒಡೆದು ಮಳೆಗೆ ಸೋರುತ್ತಿದ್ದು, ನೆಲಕ್ಕೆ ಹಾಸಿದ ಒಡೆದ ಗುಂಡಿ ಬಿದ್ದ ಕಡಪ ಕಲ್ಲುಗಳು ಓಡೆದಿರುವುದು ಇನ್ನೋಂದೆಡೆ, ಈಗೇ ಶಾಲೆ ತಗ್ಗು ಪ್ರದೇಶದಲ್ಲಿ ಇರುವುದರಿಂದ ಶಾಲೆ ಎದುರಿಗೆ ಎತ್ತರದ ರಸ್ತೆ ಇರುವ ಕಾರಣ ಮಳೆಯ ನೀರು ಹಾಗೂ ಮಲಿನಗೊಂಡ ನೀರು ಶಾಲೆಯ ಆವರಣದೊಳಕ್ಕೆ ನುಗ್ಗುತ್ತದೆ.
1ನೇ ತರಗತಿಯಿಂದ 7ನೇ ತರಗತಿವರೆಗೂ ಇಲ್ಲಿನ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಸ್ಥಳೀಯ ಖಾಸಗಿ ಸಂಸ್ಥೆಗಳಿಗೆ ಮೊರೆ ಹೋಗದ ಪೋಷಕರು ಮತ್ತು ಗ್ರಾಮಸ್ಥರ ಆಕಾಂಕ್ಷೆಯ ಮೇರೆಗೆ ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿದ್ದಾರೆ.
ಇಲ್ಲಿನ ಪ್ರಾಥಮಿಕ ಶಾಲೆ ಮಕ್ಕಳ ವಿದ್ಯಾಭ್ಯಾಸ ಮತ್ತು ಭವಿಷ್ಯದ ದೃಷ್ಟಿಯಿಂದ ಸರ್ಕಾರಿ ಶಾಲೆಗಳಿಗೆ ಬರಿ ಪ್ರಚಾರದಲ್ಲಿ ಸರ್ಕಾರ ಉತ್ತೇಜನ ನೀಡುವ ಬದಲು ಪ್ರಾಥಮಿಕವಾಗಿ ಇಲ್ಲಿನ ಮೂಲಸೌಕರ್ಯಗಳ ಕೊರತೆಯನ್ನು ಗಮನ ಹರಿಸಬೇಕಾಗಿದೆ ಎಂದು ಇಲ್ಲಿನ ಸಾರ್ವಜನಿಕರು ಆಗ್ರಹವಾಗಿದೆ.