ನೋವು ನಲಿವಲ್ಲಿ ಹೆಜ್ಜೆ ಹಾಕುವ ಹೊತ್ತು’
ಸೇವಾ ವಯೋ ನಿವೃತ್ತಿ ಹೊಂದಿದ ಪ್ರಾಚಾರ್ಯ ಲಕ್ಷ್ಮಿ ವೆಂಕಟೇಶಲು ಅಭಿಮತ

ಚಳ್ಳಕೆರೆ: ತಾಲ್ಲೂಕಿನ ಮೈಲನಹಳ್ಳಿ ಸಮೀಪದ ರೇಣುಕಾಪುರ ಗ್ರಾಮದ ಶ್ರೀ ರೇಣುಕಾದೇವಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಇತಿಹಾಸ ಉಪನ್ಯಾಸಕರಾಗಿ 32 ವರ್ಷಗಳ ಕಾಲ ಸೇವೆ ಸಲ್ಲಿಸಿದ ಪ್ರಾಂಶುಪಾಲರಾದ ಟಿ. ಎಲ್. ಲಕ್ಷ್ಮಿ ವೆಂಕಟೇಶಲು ಮತ್ತು ದೈ.ಶಿ. ಬಿ. ಈ. ಬಸವರಾಜಪ್ಪ ಅವರ ವಯೋ ಸೇವಾ ನಿವೃತ್ತಿ ಹೊಂದಿದ ನಿಮಿತ್ತ ಬಿಳ್ಕೋಡುಗೆ ಸಮಾರಂಭ ನಡೆಯಿತು.

ಶ್ರೀ ಅಂಜನೇಯ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಎಸ್. ಸಾಗರ್ ಅಧ್ಯಕ್ಷತೆ ವಹಿಸಿ ನಿವೃತ್ತಿ ಉಪನ್ಯಾಸಕರ ಸರಳತೆಯನ್ನು ಜ್ಞಾಪಿಸಿ ನಿವೃತ್ತಿ ಜೀವನಕ್ಕೆ ಶುಭ ಹಾರೈಸಿದರು.

ಜಗಳೂರು ಸರ್ಕಾರಿ ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ರಾಜಣ್ಣ ಮಾತನಾಡಿ, ವಿದ್ಯಾರ್ಥಿಗಳ ಜೀವನ ಉನ್ನತ ಮಟ್ಟಕ್ಕೆ ಕೊಂಡೊಯ್ಯುಲು ಈ ಶಿಕ್ಷಣ ಸಂಸ್ಥೆ ಮಹತ್ವದ ಕೊಡುಗೆ ನೀಡಿದೆ ಎಂದರು.

ಸರ್ಕಾರಿ ನೌಕರರ ಸಂಘದ ನಿರ್ದೇಶಕ ಚಂದ್ರಶೇಖರ್ ಮಾತನಾಡಿ, ಕಾಲೇಜಿನ ಸಿಬ್ಬಂದಿಯವರು ಒಂದೇ ಕುಟುಂಬದ ರೀತಿ ಅನ್ಯೋನ್ಯತೆ ಯಿಂದ ಪಾಠ ಪ್ರವಚನಗಳನ್ನ ನಡೆಯುತ್ತಿರುವುದರಿಂದ ಕಾಲೇಜಿಗೆ ಮತ್ತಷ್ಟು ಗೌರವ ಹೆಚ್ಚಿಸಿದೆ ಎಂದರು.

ನಿವೃತ್ತಿ ಹೊಂದಿ ಸನ್ಮಾನ ಸ್ವೀಕರಿಸಿದ ಇತಿಹಾಸ ಉಪನ್ಯಾಸಕ ಲಕ್ಷ್ಮೀ ವೆಂಕಟೇಶಲು ಮಾತನಾಡಿ, 1992 ರಲ್ಲಿ ಪ್ರಾರಂಭವಾದ ವೃತ್ತಿ ಜೀವನದಲ್ಲಿ ನಡೆದ ಹಲವಾರು ವಿಷಯಗಳನ್ನ ಹಂಚಿಕೊಂಡರು. ಸೇವೆ ಸಲ್ಲಿಸಲು ಅವಕಾಶ ಮಾಡಿಕೊಟ್ಟ ಸಂಸ್ಥೆಗೆ, ಸಹಕರಿಸಿದ ಸಿಬ್ಬಂದಿ ವರ್ಗಕ್ಕೆ ವಂದಿಸಿದರು.

ಪ್ರಾಚಾರ್ಯರಾಗಿ ಪ್ರಭಾರ ಸ್ವೀಕರಿಸಿದ ಕನ್ನಡ ಪ್ರಾಧ್ಯಾಪಕ ಎರ್ರಿಸ್ವಾಮಿ ಮಾತನಾಡಿ, ಲಕ್ಷ್ಮೀ ವೆಂಕಟೇಶಲು ಅವರೊಂದಿಗಿನ ಸೇವಾ ಜೀವನದ ಮಧುರ ಕ್ಷಣ, ಶಿಸ್ತುಪರತೆ, ಆಡಳಿತ ನೈಪುಣ್ಯತೆಯ ಬಗ್ಗೆ ಭಾವಪೂರ್ಣವಾಗಿ ತಮ್ಮ ಅನುಭವಗಳನ್ನು ಹಂಚಿಕೊಂಡರು.

ನಾಯಕನಹಟ್ಟಿ ಪದವಿಪೂರ್ವ ಕಾಲೇಜಿನ ಪೀತಾಂಬರ್, ಗಿರಿಯಮ್ಮ ಪದವಿಪೂರ್ವ ಕಾಲೇಜಿನ ಮಂಜು ನಾಯ್ಕ್, ಗೋಪನಹಳ್ಳಿ ನಾಗರಾಜ್ ಸಮಾರಂಭದಲ್ಲಿ ಭಾಗವಹಿಸಿದ್ದರು. ರೇಣುಕಾದೇವಿ ಪ್ರೌಢಶಾಲೆಯ ಸಿಬ್ಬಂದಿ ವರ್ಗ, ಕಾಲೇಜಿನ ಹಳೆಯ ವಿದ್ಯಾರ್ಥಿ ಮಿತ್ರರು, ರೇಣುಕಾಪುರ ಗ್ರಾಮಸ್ಥರು ಉಪಸ್ಥಿತರಿದ್ದರು.
ವಾಣಿಜ್ಯ ವಿಭಾಗದ ಉಪನ್ಯಾಸಕ ಮಹಲಿಂಗಪ್ಪ ಸ್ವಾಗತಿಸಿದರು. ಇಂಗ್ಲಿಷ್ ಉಪನ್ಯಾಸಕ ವೆಂಕಟೇಶ್ ಬಾಬು ವಂದಿಸಿದರು. ಸಮಾಜಶಾಸ್ತ್ರ ಉಪನ್ಯಾಸಕ ಮಾರುತಿ ಕಾರ್ಯಕ್ರಮ ನಿರೂಪಿಸಿದರು.

ಪ್ರಾಚಾರ್ಯ ಲಕ್ಷ್ಮೀ ವೆಂಕಟೇಶಲು ಅವರ ಸೇವಾ ನಿವೃತ್ತಿಯ ನೆನಪಿಗಾಗಿ ಸಸಿಯೊಂದನ್ನ ನೆಟ್ಟರು.
ಕಾಲೇಜಿನ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ದುಃಖಿತರಾಗಿ ಉಪನ್ಯಾಸಕರನ್ನ ಅವರನ್ನ ಬೀಳ್ಕೊಟ್ಟರು.

About The Author

Namma Challakere Local News
error: Content is protected !!