ನಾಯಕನಹಟ್ಟಿ:: ಹೋಬಳಿ ದಕ್ಷಿಣ ವಲಯದ ಹಿರಿಯ ಪ್ರಾಥಮಿಕ ಶಾಲೆಗಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವರವು ವತಿಯಿಂದ ಶ್ರೀ ವೆಂಕಟೇಶ್ವರ ಗ್ರಾಮಾಂತರ ಪ್ರೌಢಶಾಲೆ ನೇರಲಗುಂಟೆ ಗ್ರಾಮದಲ್ಲಿ ಕ್ರೀಡಾಕೂಟ 2023- 24 ರ
ಕ್ರೀಡಾಕೂಟದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕೆ ಸುರೇಶ್ ಸುರೇಶ್ ರವರು ಮಕ್ಕಳಿಗೆ ಕ್ರೀಡ ಪ್ರೋತ್ಸಾಹ ಮತ್ತು ಶಿಕ್ಷಕರಿಗೆ ಅಭಿನಂದಿಸಿದರು.
ಮಕ್ಕಳಿಗೆ ಕ್ರೀಡೆ ಯಿಂದ ದೇಹ ಮತ್ತು ಮನಸ್ಸು ಸದೃಢಗೊಳ್ಳುತ್ತದೆ. ಕ್ರೀಡೆ ಎನ್ನುವುದು ಹವ್ಯಾಸ ಮತ್ತು ವೃತ್ತಿ ಆಗಬೇಕು . ಯಾವುದೇ ಸಂದರ್ಭದಲ್ಲಿ ಕ್ರೀಡೆಯನ್ನು ಮರೆಯಬಾರದು. ಕ್ರೀಡೆಯನ್ನು ಒಳ್ಳೆಯ ಮನೋಭಾವ ಮತ್ತು ಶಾಂತಿಯಿಂದ ಆಡಬೇಕು ಯಾವುದೇ ಅಸೂಯೆ ದ್ವೇಷ ಬೆಳೆಸಿಕೊಂಡು ಕ್ರೀಡೆಯನ್ನು ಆಡಬಾರದು ಎಂದು ತಿಳಿಸುತ್ತಾ. ಈ ಬಾರಿಯ ಕ್ರೀಡಾ ಯೋಜನಾದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವರುವು ಇವರಿಗೆ ಧನ್ಯವಾದಗಳು ತಿಳಿಸಿದರು.
ಸಹ ಶಿಕ್ಷಕರು ಶಿಕ್ಷಕಿಯರು ಮುಖ್ಯ ಮುಖ್ಯೋಪಾಧ್ಯಾಯರು ಮಕ್ಕಳಿಗೆ ಧನ್ಯವಾದಗಳು ತಿಳಿಸಿ ಮಕ್ಕಳನ್ನು ಸುರಕ್ಷಿತವಾಗಿ ನೋಡಿಕೊಳ್ಳಬೇಕು ಎಂಬ ಕಿವಿ ಮಾತನ್ನು ಹೇಳಿದರು.

ಇದೇ ವೇಳೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎನ್ ದೇವರಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಡಾ. ಕಾಟಲಿಂಗಯ್ಯ ಮಾತನಾಡಿ ಕ್ರೀಡೆ ಕೂಟದಲ್ಲಿ ಮಕ್ಕಳಿಗೆ ಛಲವಿರಬೇಕು ಉತ್ಸಾಹವಿರಬೇಕು ಪ್ರದರ್ಶನ ಮುಖ್ಯ ಪ್ರಶಸ್ತಿ ಮುಖ್ಯವಲ್ಲ ಎಂದು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು.

ಈ ಸಂದರ್ಭದಲ್ಲಿ ಎನ್ ದೇವರಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಡಾ. ಕಾಟಂಲಿಂಗಯ್ಯ, ನೇರಲಗುಂಟೆ ಗ್ರಾಮ ಪಂಚಾಯತಿ ಅಧ್ಯಕ್ಷ ಈರಣ್ಣ, ಎಸ್ ಡಿ ಎಂ ಸಿ ಅಧ್ಯಕ್ಷ ಸಣ್ಣ ತಿಪ್ಪಯ್ಯ, ಗ್ರಾಮ ಪಂಚಾಯತಿ ಸದಸ್ಯ ತಿಪ್ಪೇಸ್ವಾಮಿ ಭತ್ತೈನಹಟ್ಟಿ, ಶ್ರೀ ವೆಂಕಟೇಶ್ವರ ಗ್ರಾಮಾಂತರ ಪ್ರೌಢಶಾಲೆ ಮುಖ್ಯ ಶಿಕ್ಷಕ ಸತ್ಯನಾರಾಯಣ ಶಿಕ್ಷಕರಾದ ಮಂಜುನಾಥ್, ಪಿಡಿಒ ಶಶಿಕಲಾ, ಕಾರ್ತಿಕೆನಹಟ್ಟಿ ಶಾಲೆಯ ಮುಖ್ಯ ಶಿಕ್ಷಕ ಎ ಎಂ ಬೋರಯ್ಯ ನಲಗೇತನಹಟ್ಟಿ, ವರವು ದೈಹಿಕ ಶಿಕ್ಷಕಿ ಸರಸ್ವತಿ, ಬಿ ಟಿ ತಿಪ್ಪೇರುದ್ರಪ್ಪ, ನಾಯಕನಹಟ್ಟಿ ಹೋಬಳಿಯ ಚಳ್ಳಕೆರೆ ತಾಲೂಕಿನ ಎಲ್ಲಾ ದೈಹಿಕ ಶಿಕ್ಷಕರು ಸಹ ಶಿಕ್ಷಕರು ದಕ್ಷಿಣ ವಲಯ ವಿದ್ಯಾರ್ಥಿಗಳು ಹಾಜರಿದ್ದರು.

Namma Challakere Local News
error: Content is protected !!