ನಾಯಕನಹಟ್ಟಿ:: ಕ್ರೀಡೆಯಲ್ಲಿ ಸೋಲು ಗೆಲುವು ಸಮಾನ ಇದರಿಂದ ಕ್ರೀಡಾಪಟುಗಳು ಸೋಲನ್ನು ಸಮಾನವಾಗಿ ಸ್ವೀಕರಿಸಬೇಕು ಎಂದು ಪಟ್ಟಣ ಪಂಚಾಯತಿ ಸದಸ್ಯ ಕೆ ಪಿ ತಿಪ್ಪೇಸ್ವಾಮಿ ಹೇಳಿದ್ದಾರೆ.
ಅವರು ಶನಿವಾರ ಪಟ್ಟಣ ಪಂಚಾಯತಿ ವ್ಯಾಪ್ತಿಯ ಜಾಗರೂರಹಟ್ಟಿ ಗ್ರಾಮದಲ್ಲಿ ಶ್ರೀ ಗಾದೀಶ್ವರ ಕ್ರಿಕೆಟ್ ಇವರ ವತಿಯಿಂದ ದಿವಂಗತ ಜಿ ಟಿ ಪ್ರಹ್ಲಾದ್ ಗೊಂಚಿಗಾರ್ ಇವರ ಸವಿನೆನಪಿಗಾಗಿ 8ನೇ ಬಾರಿಗೆ ಹೋಬಳಿ ಮಟ್ಟದ ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ಪಾಲ್ಗೊಂಡು ಟೇಪ್ ಕತ್ತರಿಸುವ ಮೂಲಕ ಚಾಲನೆ ನೀಡಿ ಮಾತನಾಡಿ ಕ್ರೀಡೆ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ತುಂಬಾ ಸಹಕಾರಿಯಾಗಲಿದೆ ಇಂದಿನ ದಿನಮಾನಗಳಲ್ಲಿ ಯುವಕರಿಗೆ ಜೀವನದ ಅವಿಭಾಜ್ಯ ಅಂಗವಾಗಿದೆ ಸೋಲು ಗೆಲುವು ಸಮಾನವಾಗಿ ಸ್ವೀಕರಿಸಿ ಕ್ರೀಡೆ ಎಂಬುವುದು ಮಾನಸಿಕ ನೆಮ್ಮದಿಗೆ ಹಾಗೂ ದೈಹಿಕ ಆರೋಗ್ಯಕ್ಕೆ ಉತ್ತಮ ಔಷಧಿ ಗುಣ ನೀಡುವುದು ಕ್ರೀಡೆಯಲ್ಲಿ ಸೋಲು ಗೆಲುವು ಸಮಾನವಾಗಿ ಇದರಿಂದ ಕ್ರೀಡಾಪಟುಗಳು ಸೋಲನ್ನು ಸಮಾನವಾಗಿ ಸ್ವೀಕರಿಸಬೇಕು ಎಂದು ಯುವಕರಿಗೆ ಮನವರಿಕೆ ಮಾಡಿದರು.
ಇದೇ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಸದಸ್ಯ ದುರುಗಪ್ಪ, ಶ್ರೀ ಭದ್ರಿ ಜೆಸಿಬಿ ಮಾಲೀಕರು ಜಾಗನೂರಹಟ್ಟಿ, ಮಾಜಿ ತಾಲೂಕು ಪಂಚಾಯತಿ ಸದಸ್ಯ ಎಸ್ ಓಬಯ್ಯ, ಶ್ರೀಮತಿ ಸಿದ್ದಲಿಂಗಮ್ಮ ನಾಗರಾಜ್ ಮಾಜಿ ಪಟ್ಟಣ ಪಂಚಾಯತಿ ಸದಸ್ಯರು, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಟಿ ತಿಪ್ಪೇಸ್ವಾಮಿ, ಶ್ರೀಮತಿ ಓಬಮ್ಮ ಸೂರಯ್ಯ ಮಾಜಿ ಗ್ರಾಮ ಪಂಚಾಯತಿ ಸದಸ್ಯ, ಪಿ ತಿಪ್ಪೇಸ್ವಾಮಿ ಮಾಜಿ ಗ್ರಾಮ ಪಂಚಾಯತಿ ಸದಸ್ಯರು, ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಗೊಂಚಗಾರ್ ಪಾಲಯ್ಯ, ಮಾಜಿ ಗ್ರಾಮ ಪಂಚಾಯತಿ ಸದಸ್ಯ ತಿಪ್ಪೇಸ್ವಾಮಿ ಶ್ರೀಮತಿ ತಿಪ್ಪಮ್ಮ ಬಡ ಸೂರಯ್ಯ ಮಾಜಿ ಗ್ರಾಮ ಪಂಚಾಯತಿ ಸದಸ್ಯರು,
ಗ್ರಾಮದ ಯುವ ಮುಖಂಡರಾದ ಎಸ್ ಪಿ ಪಾಲಯ್ಯ, ಜಿಎಸ್ ಮಂಜುನಾಥ್ ಗೌಡ, ಕೆ ಟಿ ಪ್ರಹ್ಲಾದ್, ಬಿ ಟಿ ಪ್ರಕಾಶ್, ಕುಮಾರ್ ಗೊಂಚಿಗಾರ್, ಕರವೇ ಹೋಬಳಿ ಘಟಕ ಅಧ್ಯಕ್ಷ ಪಿ ಮುತ್ತಯ್ಯ ಜಾಗನೂರಹಟ್ಟಿ,
ಗುಂತಕೋಲಮ್ಮನಳ್ಳಿ ಎಸ್ ಶಿವತಿಪ್ಪೇಸ್ವಾಮಿ, ಬೂಟ್ ತಿಪ್ಪೇಸ್ವಾಮಿ, ಕಾಟಯ್ಯ ಮೇಸ್ತ್ರಿ, ದೇವರಾಜ್ ,
ಸೇರಿದಂತೆ ಸಮಸ್ತ ಜಾಗನೂರಹಟ್ಟಿ ಗ್ರಾಮಸ್ಥರು ಉಪಸ್ಥಿತರಿದ್ದರು