ಚಳ್ಳಕೆರೆ : ತಾಲೂಕಿನ ಜಡೆಕುಂಟೆ ಗ್ರಾಮದಲ್ಲಿ ಸುಮಾರು ಒಂದು ಕಿಲೋಮೀಟರ್ ಡಾಂಬರು ರಸ್ತೆಯು ಮೂರು ರ‍್ಷಗಳಿಂದ ತಗ್ಗು ಗುಂಡಿಗಳು ಬಿದ್ದಿದ್ದು 5 ದಿನದಿಂದ ಸುರಿಯುತ್ತಿರುವ ಜಿಟಿ ಜಿಟಿ ಮಳೆಗೆ ರಸ್ತೆಯು ಕೆಸರು ಗದ್ದೆಯಂತೆ ಆಗಿ ಗ್ರಾಮಸ್ಥರಿಗೆ ಬಹಳ ತೊಂದರೆ ಆಗುತ್ತಿದ್ದು. ಸರ‍್ವಜನಿಕರು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರೈತ ಮುಖಂಡ ರಾಮಲಿಂಗಪ್ಪ ರಸ್ತೆಯು ತಗ್ಗು ಗುಂಡಿಗಳು ಬಿದ್ದಿದ್ದು ಅದಕ್ಕೆ ಮಣ್ಣು ಓಡಿಸಿದ್ದಾರೆ ಇದರಿಂದ ಗ್ರಾಮಸ್ಥರಿಗೆ, ಶಾಲಾ ಮಕ್ಕಳಿಗೆ, ವಾಹನ ಸವಾರರಿಗೆ, ರೈತರಿಗೆ, ಬಹಳ ತೊಂದರೆ ಆಗುತ್ತಿದ್ದು. ಗ್ರಾಮದವರು ಸಂಬಂಧಪಟ್ಟ ಅಧಿಕಾರಿಗಳಿಗೆ ಅನೇಕ ಬಾರಿ ದೂರು ನೀಡಿದರು ಯಾವ ಕ್ರಮವನ್ನು ಕೈಗೊಂಡಿಲ್ಲ ಇದಕ್ಕೆಲ್ಲ ಅಧಿಕಾರಿಗಳ ಬೇಜವಾಬ್ದಾರಿತನ ಕಾರಣವಾಗಿದ್ದು. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು PWಆ ಇಂಜಿನಿಯರುಗಳು ತರ‍್ತಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ರಸ್ತೆ ದುರಸ್ತಿ ಮಾಡಿಸಿಕೊಡಬೇಕೆಂದು ರೈತ ರಾಮಲಿಂಗಪ್ಪ ಮನವಿ ಮಾಡಿಕೊಂಡರು.
ನಂತರ ಗ್ರಾಮದ ಮಹಿಳೆ ಕಮಲಮ್ಮ ಮಾತನಾಡಿ ಸರಿಯಾದ ರೀತಿ ರಸ್ತೆ ಇಲ್ಲದೆ ಬಹಳ ತೊಂದರೆ ಆಗುತ್ತಿದೆ. ಕಳೆದ ಎರಡು ರ‍್ಷದಿಂದ ಬಹಳ ರೀತಿ ಗುಂಡಿಗಳು ಬಿದ್ದಿದ್ದು ಸಿಸಿ ರಸ್ತೆ ನರ‍್ಮಾಣ ಮಾಡಿಕೊಡಿ ಎಂದರೆ ಕಳಪೆ ರೀತಿಯ ಡಾಂಬರಿನ ರಸ್ತೆ ನರ‍್ಮಾಣ ಮಾಡುತ್ತಿದ್ದಾರೆ ಇದನ್ನು ಎಲ್ಲಾ ಅಧಿಕಾರಿಗಳ ಗಮನಕ್ಕೆ ತಂದರು ಏನು ಪ್ರಯೋಜನವಾಗಿಲ್ಲ. ಚುನಾವಣೆಯ ಸಮಯದಲ್ಲಿ ಮತ ಕೇಳಲು ಎಲ್ಲರೂ ಬರುತ್ತಾರೆ. ಗೆದ್ದ ನಂತರ ಯಾವ ಅಧಿಕಾರಿಯೂ ಬರುವುದಿಲ್ಲ ಎಂದು ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ರಸ್ತೆ ದುರಸ್ತಿ ಮಾಡಿಕೊಡುವಂತೆ ಪಬ್ಲಿಕ್ ನೆಕ್ಸ್ಟ್ ವರದಿಗೆ ಮಾಹಿತಿ ನೀಡಿದರು.