ಮಳೆ ವರದಿ: ಮೊಳಕಾಲ್ಮೂರಿನಲ್ಲಿ 25 ಮಿ.ಮೀ ಮಳೆ


ಚಿತ್ರದರ‍್ಗ(ರ‍್ನಾಟಕ ವರ‍್ತೆ)ಜುಲೈ24:
ಜಿಲ್ಲೆಯಲ್ಲಿ ಬುಧವಾರ ಸುರಿದ ಮಳೆಯ ವಿವರದನ್ವಯ ಚಿತ್ರದರ‍್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನಲ್ಲಿ 25 ಮಿ.ಮೀ ಮಳೆಯಾಗಿದ್ದು, ಇದು ಜಿಲ್ಲೆಯ ಅತ್ಯಧಿಕ ಮಳೆಯಾಗಿದೆ.
ಮೊಳಕಾಲ್ಮೂರು ತಾಲ್ಲೂಕಿನ ರಾಯಾಪುರ 18 ಮಿ.ಮೀ, ಬಿಜಿಕೆರೆ 2 ಮಿ.ಮೀ, ರಾಂಪುರ 5.2 ಮಿ.ಮೀ, ದೇವಸಮುದ್ರ 23.2 ಮಿ.ಮೀ ಮಳೆಯಾಗಿದೆ. ಹೊಸದರ‍್ಗ ತಾಲ್ಲೂಕಿನ ಹೊಸದರ‍್ಗದಲ್ಲಿ 3.4 ಮಿ.ಮೀ, ಬಾಗೂರು 23 ಮಿ.ಮೀ, ಮತ್ತೋಡು 4.2 ಮಿ.ಮೀ, ಶ್ರೀರಾಂಪುರ 4 ಮಿ.ಮೀ, ಮಾಡದಕೆರೆ 10 ಮಿ.ಮೀ ಮಳೆಯಾಗಿದೆ. ಚಿತ್ರದರ‍್ಗ ತಾಲ್ಲೂಕಿನ ಚಿತ್ರದರ‍್ಗ-1ರಲ್ಲಿ 7 ಮಿ.ಮೀ, ಚಿತ್ರದರ‍್ಗ-2ರಲ್ಲಿ 4.3 ಮಿ.ಮೀ, ಐನಹಳ್ಳಿ 6.2 ಮಿ.ಮೀ, ಭರಮಸಾಗರ 7.6 ಮಿ.ಮೀ, ತುರುವನೂರು 5.8 ಮಿ.ಮೀ, ಸಿರಿಗೆರೆ 9.4 ಮಿ.ಮೀ, ಹಿರೇಗುಂಟನೂರು 1 ಮಿ.ಮೀ ಮಳೆಯಾಗಿದೆ. ಹಿರಿಯೂರು ತಾಲ್ಲೂಕಿನ ಹಿರಿಯೂರಿನಲ್ಲಿ 7.8 ಮಿ.ಮೀ, ಇಕ್ಕನೂರು 2.2 ಮಿ.ಮೀ, ಈಶ್ವರಗೆರೆ 4.8 ಮಿ.ಮೀ, ಬಬ್ಬೂರು 9.8 ಮಿ.ಮೀ, ಸುಗೂರು 11.6 ಮಿ.ಮೀ ಮಳೆಯಾಗಿದೆ. ಹೊಳಲ್ಕೆರೆ ತಾಲ್ಲೂಕಿನ ಹೊಳಲ್ಕೆರೆಯಲ್ಲಿ 4.8 ಮಿ.ಮೀ, ಚಿಕ್ಕಜಾಜೂರು 3.9 ಮಿ.ಮೀ, ಬಿ. ದರ‍್ಗ 8.2 ಮಿ.ಮೀ, ಹೆಚ್‍ಡಿ ಪುರ 11.4 ಮಿ.ಮೀ, ತಾಳ್ಯ 6.2 ಮಿ.ಮೀ, ರಾಮಗಿರಿ 3.4 ಮಿ.ಮೀ ಮಳೆಯಾಗಿದೆ. ಚಳ್ಳಕೆರೆ ತಾಲ್ಲೂಕಿನ ಚಳ್ಳಕೆರೆಯಲ್ಲಿ 3 ಮಿ.ಮೀ, ಪರುಶುರಾಂಪುರ 10.6 ಮಿ.ಮೀ, ನಾಯಕನಹಟ್ಟಿ 8.4 ಮಿ.ಮೀ, ತಳಕು 3.2 ಮಿ.ಮೀ, ಡಿ. ಮರಿಕುಂಟೆ 8.2 ಮಿ.ಮೀ ಮಳೆಯಾಗಿದೆ.
16 ಮನೆಗಳು ಭಾಗಶಃ ಹಾನಿ: ಬುಧವಾರ ಸುರಿದ ಮಳೆಗೆ ಜಿಲ್ಲಾಯಾದ್ಯಂತ ಒಟ್ಟು 16 ಮನೆಗಳು ಭಾಗಶಃ ಹಾನಿ ಹಾನಿಯಾಗಿದೆ.

ಚಿತ್ರದರ‍್ಗ ತಾಲ್ಲೂಕಿನಲ್ಲಿ 2 ಮನೆಗಳು ಭಾಗಶಃ ಹಾನಿಯಾಗಿವೆ. ಹಿರಿಯೂರು ತಾಲ್ಲೂಕಿನಲ್ಲಿ 4 ಮನೆಗಳು ಭಾಗಶಃ ಹಾನಿಯಾಗಿವೆ. ಹೊಸದರ‍್ಗ ತಾಲ್ಲೂಕಿನಲ್ಲಿ 4 ಮನೆ ಭಾಗಶಃ ಹಾನಿಯಾಗಿದೆ. ಹೊಳಲ್ಕೆರೆ ತಾಲ್ಲೂಕಿನಲ್ಲಿ 4 ಮನೆ ಭಾಗಶಃ ಹಾನಿಯಾಗಿದೆ. ಮೊಳಕಾಲ್ಮೂರು ತಾಲ್ಲೂಕಿನಲ್ಲಿ 2 ಮನೆಗಳು ಭಾಗಶಃ ಹಾನಿಯಾಗಿವೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

About The Author

Namma Challakere Local News
error: Content is protected !!