ಚಿತ್ರದುರ್ಗ ರುಡ್ ಸೆಟ್ ಸಂಸ್ಥೆ, ಕೆಳಗೋಟೆ, ಹೌಸಿಂಗ್ ಬೋರ್ಡ್ ಕಾಲೋನಿ, ಚಿತ್ರದುರ್ಗ ಇವರು ಇದೇ ಇದೇ ಜುಲೈ ಇದೇ ಜುಲೈ ತಿಂಗಳ ಅಂದರೆ ದಿನಾಂಕ 20.07.2023 ರಿಂದ ಒಂದು ತಿಂಗಳ ಉಚಿತ ಸೆಲ್ ಪೋನ್ ಗಳ ರಿಪೇರಿ ತರಬೇತಿಯನ್ನು 18 ರಿಂದ 45 ರ ವಯೋಮಿತಿಯಲ್ಲಿನ ವಿದ್ಯಾವಂತ ನಿರುದ್ಯೋಗಿ ಯುವಕ / ಯುವತಿಯರಿಗಾಗಿ ಸಂಸ್ಥೆಯಲ್ಲಿ ಆಯೋಜಿಸಿದ್ದಾರೆ. ಆಸಕ್ತಿಯುಳ್ಳ ಅಭ್ಯರ್ಥಿಗಳು ತಮ್ಮ ಆಧಾರ್ ಕಾರ್ಡ್, ಬಿಪಿಎಲ್ ರೇಶನ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕದ ದಾಖಲಾತಿಗಳೊಂದಿಗೆ ತರಬೇತಿಯಲ್ಲಿ ಪಾಲ್ಗೊಳ್ಳಬಹುದು. ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು. ಇನ್ನು ಕೆಲವೇ ಸೀಟುಗಳು ಬಾಕಿಯಿದ್ದು, ದಿನಾಂಕ 20.07.2023 ರ ಬೆಳಿಗ್ಗೆ 09.30 ಗಂಟೆಗೆ ಎಲ್ಲಾ ಮೇಲ್ಕಂಡ ದಾಖಲಾತಿಗಳೊಂದಿಗೆ ತರಬೇತಿಯಲ್ಲಿ ಪಾಲ್ಗೊಳ್ಳಬಹುದು. ಮೊದಲು ಬಂದ 35 ಅಭ್ಯರ್ಥಿಗಳಿಗೆ ಮಾತ್ರ ತರಬೇತಿಯ ಅವಕಾಶವಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆಗಳಾದ : 9481778047, 9019299901, 8660627785, 8618282445 ಅನ್ನು ಸಂಪರ್ಕಿಸಬಹುದಾಗಿದೆ.

Namma Challakere Local News
error: Content is protected !!