ಚಳ್ಳಕೆರೆ : ಸಾರ್ವಜನಿಕರ ಓಡಾಟಕ್ಕೆ ರಸ್ತೆ ಬಿಟ್ಟು ಕೊಟ್ಟ ಜಾಗಕ್ಕೆ ಬದಲಿ ಜಾಗ ನೀಡುವಂತೆ ಖಾಸಗಿ ವ್ಯಕ್ತಿಗಳು ಕೋರಿರುವ ಮನವಿಯಂತೆ ಜಿಲ್ಲಾಧಿಕಾರಿಗಳು ನಗರಸಭೆ ಪೌರಾಯುಕ್ತರಿಗೆ ಸೂಚನೆ ನೀಡಿದ್ದಾರೆ.
ಅದರಂತೆ ನಗರದ ರೈಲ್ವೆ ಸ್ಟೇಷನ್‌ಗೆ ಹೋಗುವ ರಸ್ತೆಗೆ ಖಾಸಗಿ ವ್ಯಕ್ತಿಗಳಿಂದ ಜಾಗವನ್ನು ಬಿಟ್ಟುಕೊಡಲಾಗಿತ್ತು ಎನ್ನಲಾದ ಮಾಹಿತಿ ಮೇರೆಗೆ ಸುಮಾರು 1993ರಲ್ಲಿ ಈ ಪ್ರಕರಣದ ವ್ಯಕ್ತಿಗಳು 6 ಜನರು ಅರ್ಜಿ ಹಾಕಿದ್ದರು ಎನ್ನಲಾಗಿದೆ.
ಇದರ ಸರ್ವೆನಂ.19ರಲ್ಲಿ ಖಾಸಗಿ ಜಾಗ ರಸ್ತೆ ಉಪಯೋಗಕ್ಕೆ ಬಳಕೆಯಾಗಿದೆ ಎಂದು ಮನವಿ ಸಲ್ಲಿಸಿದ ತರುವಾಯ ಜಿಲ್ಲಾಧಿಕಾರಿಗಳು ಸೂಚನೆ ಮೇರೆಗೆ ಚಳ್ಳಕೆರೆ ನಗರಸಭೆ ಪೌರಾಯುಕ್ತರು ಇಂದು ರೈಲ್ವೆ ಸ್ಟೆಷನ್‌ಗೆ ಹೋಗುವ ದಾರಿಯನ್ನು ಹಾಗೂ ಸರ್ವೆ ನಂ.19ರಲ್ಲಿ ಅಳತೆ ಮಾಡಲು ಮುಂದಾಗಿದ್ದಾರೆ.
ಇನ್ನೂ ನಗರಸಭೆ ಪೌರಾಯುಕ್ತೆ ಟಿ.ಲೀಲಾವತಿ ಮಾಧ್ಯಮದೊಂದಿಗೆ ಮಾತನಾಡಿ, ಜಿಲ್ಲಾಧಿಕಾರಿಗಳ ಸೂಚನೆ ಮೆರೆಗೆ ಇಂದು ಸರ್ವೆ ಕಾರ್ಯ ಮಾಡಿಸಿ ನಂತರ ಬದಲಿ ಜಾಗಕ್ಕೆ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸುವೆ ಎನ್ನುತ್ತಾರೆ.