ಚಳ್ಳಕೆರೆ : “ಬೆಳೆವಿಮೆ ಪರಿಹಾರ” ಅವ್ಯವಹಾರಕ್ಕೆ ಜಿಲ್ಲಾಮಟ್ಟದ ಅಧಿಕಾರಿಗಳ ತಂಡದಿAದ ಸಮಗ್ರ ತನಿಖೆ
ಚಳ್ಳಕೆರೆ : ಬಯಲು ಸೀಮೆ ರೈತರ ಖಾತೆಗೆ ಹೋಗಬೇಕಾದ ಬೆಳೆ ವಿಮೆ ಪರಿಹಾರ, ಅಧಿಕಾರಿಗಳು ಹಾಗೂ ಅಕ್ರಮ ಮಧ್ಯವರ್ತಿಗಳ ಕಿಸೆ ಸೇರಿದೆ ಎನ್ನುವ ರೈತರ ಆರೋಪಕ್ಕೆ ಸಮಗ್ರ ತನಿಖೆ ಕೈಗೊಳ್ಳಲು ಜುಲೈ 19 ರಂದು ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಲಿದ್ದಾರೆ.
ತಾಲೂಕಿನ ಪರುಶುರಾಂಪುರ ಹೋಬಳಿಯ ಪಿ.ಮಹದೇವಪುರ ಗ್ರಾಮದ ರೈತರು ಕಛೇರಿಗೆ ದೂರನ್ನು ನೀಡಿರುವಂತೆ, ಬೆಳೆ ವಿಮೆ ಪರಿಹಾರದಲ್ಲಿ ಅವ್ಯವಹಾರ ನಡೆದಿದೆ ಎಂಬುವುದರ ಕುರಿತು ಸಮಗ್ರ ತನಿಖೆಯನ್ನು ಕೈಗೊಳ್ಳಲು ಜಿಲ್ಲಾ ಉಪವಿಭಾಗ ಅಧಿಕಾರಿ ಎಂ.ಕಾರ್ತಿಕ್ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ತಂಡ ಸಮಗ್ರ ತನಿಖೆ ನಡೆಸಲಿದೆ.