ಚಿತ್ರದುರ್ಗ
ಮಳೆ ಗಾಳಿಗೆ ಫಸಲಿಗೆ ಬಂದ ಹೀರೇಕಾಯಿ ಬೆಳೆ ಹಾನಿ ಅಪಾರ ನಷ್ಟ ರೈತ ಕಂಗಾಲು
ಚಳ್ಳಕೆರೆ ಸುದ್ದಿ: ಪರಶಾಂಪುರ ಹೋಬಳಿಯ ಹಾಲಿಗೊಂಡನಹಳ್ಳಿ ಗ್ರಾಮದಲ್ಲಿ ಶನಿವಾರ ಸುರಿದ ಗಾಳಿ ಮಳೆಗೆ ಫಸಲಿಗೆ ಬಂದು ರೈತನ ಕೈ ಸೇರಬೇಕಿದ್ದ ಹೀರೇಕಾಯಿ ಪಸಲು ನೆಲಕಚ್ಚಿದೆ. ಉತ್ತಮ ಬೆಳವಣಿಗೆಗೆ ಹಾಕಿದ್ದ ಅಟ್ಟ ಮುರಿದು ಲಕ್ಷಾಂತರ ರೂ ಮೌಲ್ಯದ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ. ಇನ್ನೇನು ಪಸಲು ಕೈ ಸೇರಬೇಕು ಎನ್ನುವ ಸಮಯದಲ್ಲಿ ಗಾಳಿ ಮಳೆಗೆ ಹೀರಕಾಯಿ ಬೆಳೆ ನೆಲಕಚ್ಚಿದ್ದು ರೈತ ಕಂಗಾಲಾಗಿದ್ದಾನೆ.
ಹಾಲಿಗೊಂಡನಹಳ್ಳಿ ಗ್ರಾಮದ ರೈತ ತಿಪ್ಪೇಸ್ವಾಮಿ ಸುಮಾರು 3.5 ಲಕ್ಷ ಸಾವಿರ ಬಂಡವಾಳದಲ್ಲಿ ಹಿರೇಕಾಯಿ ಬೆಳೆ ಹಾಕಿದ್ದರು. ಬೆಳೆಯೂ ಚೆನ್ನಾಗಿ ಬಂದಿತ್ತು. ಸುಮಾರು 15ರಿಂದ 17ಲಕ್ಷ ಕ್ಕೂ ಅಧಿಕ ಬೆಲೆಯ ಇಳುವರಿಯ ನಿರೀಕ್ಷೆಯನ್ನು ಹೊಂದಿದ್ದರು. ಕೇವಲ ಒಂದು ಕೊಯ್ಲು ಬೆಳೆ ಕಟಾವು ಮಾಡಿಕೊಂಡಿದ್ದ, ತಿಪ್ಪೇಸ್ವಾಮಿಗೆ ಶನಿವಾರ ಮಳೆ ಗಾಳಿ ಎದ್ದು ಬೆಳೆಯನ್ನು ಹಾಳು ಮಾಡಿದೆ. 2ನೇ ಕೊಯಿಲು ಕೊಯ್ಯುವ ಸಮಯದಲ್ಲಿ ಬೆಳೆ ನೆಲಕಚ್ಚಿ. 17 ಲಕ್ಷ ಕ್ಕೂ ಅಧಿಕ ಬೆಳೆ ನಷ್ಟವಾಗಿದೆ ಎಂದು ತಿಪ್ಪೇಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.
ರೈತ ತಿಪ್ಪೇಸ್ವಾಮಿ ಸುಮಾರು ಮೂರು ಎಕರೆಯಲ್ಲಿ ನಾಗ- ಎಫ್ ಎಫ್ ತಳಿಯ 700 ರೂ ನಂತೆ 38 ಪಾಕೇಟ್ ಹಿರೇಕಾಯಿ ಬೀಜಗಳನ್ನು ಬಿತ್ತನೆ ಮಾಡಿದ್ದರು.ಪ್ರತಿದಿನ 100 ಪಾಕೇಟ್ ಕಟಾವು ಮಾಡಲಾಗುತ್ತಿತ್ತು.ಕೆಜಿಗೆ 35 ರೂ ನಂತೆ ಮಾರಾಟ ಮಾಡುತ್ತಿದ್ದೆವು. ನೆರೆ ರಾಜ್ಯದ ರೈತರುಗಳು ಇಳುವರಿಯನ್ನು ವೀಕ್ಷಿಸಲು ಬರುತ್ತಿದ್ದರು ಗಾಳಿ ಮಳೆಗೆ ಬೆಳೆ ನಷ್ಟವಾಗಿದ್ದು ರೈತನು ತಣ್ಣೀರಿನ ಬಟ್ಟೆಯನ್ನು ಹಾಕಿ ಕೊಳ್ಳುವಂತಾಗಿದೆ ಎಂದು ತಿಪ್ಪೇಸ್ವಾಮಿ ಬೇಸರ ವ್ಯಕ್ತಪಡಿಸಿದರು.