ಪರಿಸರ ಸಂರಕ್ಷಣೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಹಾಗೂ ಜಾಗೃತಿಯನ್ನು ಮೂಡಿಸುತ್ತಿರುವುದು ಅತ್ಯಂತ ಸಂತಸ ಹಾಗೂ ವಿದ್ಯಾರ್ಥಿಗಳು ಕಲಿಕೆಯಿಂದಲೇ ಪರಿಸರದ ಜಾಗೃತಿ ವಹಿಸಿದಾಗ ಪರಿಸರ ಸಂರಕ್ಷಣೆಗೆ ಸಹಕಾರಿಯಾಗಲಿದೆ ಎಂದು ಹಿರೇಗುಂಟನೂರು ಶ್ರೀ ಸ್ವಾಮಿ ವಿವೇಕಾನಂದ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಮುಸ್ತಫಾ ಅಭಿಪ್ರಾಯಪಟ್ಟರು .

ತಾಲೂಕಿನ ಹಿರೇಗುಂಟನೂರು ಗ್ರಾಮದಲ್ಲಿ ಸೋಮವಾರ ಸ್ವಾಮಿ ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಮಡಿಲು ಗ್ರಾಮೀಣ ಮತ್ತು ನಗರ ಅಭಿವೃದ್ಧಿ ಸಂಸ್ಥೆ ವತಿಯಿಂದ ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆ ವಿಷಯ ಕುರಿತ
ಪ್ರಬಂಧ ಸ್ಪರ್ಧೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಪ್ರಸ್ತುತ ಸ್ಪರ್ಧಾತ್ಮಕ ದಿನಗಳಲ್ಲಿ ಹೆಚ್ಚಿನದಾಗಿ ವಿದ್ಯಾಭ್ಯಾಸದ ಕಡೆಗೆ ಗಮನ ಹರಿಸಬೇಕು ಜೊತೆಗೆ ಪರಿಸರ ಉಳಿಸುವಂತಹ ಸಾಮಾಜಿಕ ಕೆಲಸಗಳನ್ನು ಕೂಡ ಮಾಡಬೇಕು ನಮ್ಮ ಸುತ್ತಮುತ್ತಲಿನ ವಾತಾವರಣವನ್ನು ನಾವು ಶುಚಿಯಾಗಿಟ್ಟುಕೊಂಡರೆ ನಮಗೆ ಉತ್ತಮ ಆರೋಗ್ಯ ಯುತ ಜೀವನ ದೊರೆಯುತ್ತದೆ. ಪ್ರತಿಯೊಬ್ಬರು ಸಹ ಪರಿಸರದ ಸಂರಕ್ಷಣೆಯ ಬಗ್ಗೆ ಪ್ರಜ್ಞಾವಂತರಾಗಿ ಗಿಡ ಮರಗಳನ್ನು ಸಂರಕ್ಷಣೆ ಮಾಡುವುದರ ಮೂಲಕ ಪರಿಸರವನ್ನು ಅಭಿವೃದ್ಧಿಪಡಿಸಬೇಕು ಎಂದರು.

ಮನುಷ್ಯನ ಅತಿಯಾದ ಆಸೆಯಿಂದ ಪರಿಸರಕ್ಕೆ ಮಾರಕವಾಗಿದ್ದಾನೆ, ಆದರೆ ಕೆಲವೊಂದಿಷ್ಟು ಸಾಮಾಜಿಕ ಹೊಣೆ ಹೊತ್ತಂತಹ ಸಂಘ ಸಂಸ್ಥೆಗಳು ಪರಿಸರ ಪ್ರೇಮಿಗಳು ಪ್ರಜ್ಞಾವಂತರು ಪರಿಸರ ಸಂರಕ್ಷಣೆಯಲ್ಲಿ ತೊಡಗಿದ್ದಾರೆ. ಜೊತೆಗೆ ವಿದ್ಯಾರ್ಥಿ ಸಮೂಹವು ಕೂಡ ಕೈಜೋಡಿಸಿ ಪರಿಸರ ಸಂರಕ್ಷಣೆ ಮಾಡಬೇಕು ಎಂದು ತಿಳಿಸಿದರು.

ಸಂಸ್ಥೆಯ ನಿರ್ದೇಶಕ ಮಹಾಂತೇಶ್ ಮಾತನಾಡಿ ಪರಿಸರ ಮಾಲಿನ್ಯವು ಜನರ,ಸಸ್ಯ ಮತ್ತು ಪ್ರಾಣಿಗಳ ಆರೋಗ್ಯ ಮತ್ತು ಜೀವನಕ್ಕೆ ಮತ್ತು ವಾತಾವರಣಕ್ಕೆ ಗಂಭೀರ ಅಪಾಯವಾಗಿದೆ. ಮಣ್ಣಿನ ಮಾಲಿನ್ಯವು ಭೂಮಿಯ ಗುಣಮಟ್ಟವನ್ನು ಕುಗ್ಗಿಸುವುದರ ಜೊತೆಗೆಕೃಷಿಯ ಮೇಲೆ ದುಷ್ಪರಿಣಾಮಗಳು ಬೀರಲಿವೆ. ರೈತರು ಬೆಳೆ ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ಕೀಟಗಳಿಂದ ರಕ್ಷಿಸಲು ಬಳಸುವ ರಾಸಾಯನಿಕ ಗೊಬ್ಬರಗಳು ಮತ್ತು ಕೀಟನಾಶಕಗಳ ಔಷಧಿಗಳು ನಿಧಾನವಾಗಿ ಬಂಜರು ಭೂಮಿಗೆ ಕಾರಣವಾಗುತ್ತದೆ ಎಂದರು.

ಮನುಷ್ಯ ಪರಿಸರವನ್ನು ನಾಶ ಮಾಡುವುದರಿಂದ ಮಾಲಿನ್ಯ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಜನರು ತೀವ್ರ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಆದ್ದರಿಂದ, ಪ್ರತಿಯೊಬ್ಬರೂ ಮಾಲಿನ್ಯ ಮತ್ತು ಅದರ ಪರಿಣಾಮಗಳು ಮತ್ತು ಅದನ್ನು ಯಶಸ್ವಿಯಾಗಿ ಕಡಿಮೆ ಮಾಡುವ ಬಗ್ಗೆ ತಿಳಿದಿರಬೇಕು ಎಂದು ತಿಳಿಸಿದರು.

ಮಡಿಲು ಸಂಸ್ಥೆಯ ಉಪಾಧ್ಯಕ್ಷ ಕಿರಣ್ ಕುಮಾರ್ ಮಾತನಾಡಿ ಭೂಮಿಯ ಮೇಲೆ ವಾಸ ಮಾಡುತ್ತಿರುವಂತಹ ಮನುಷ್ಯನಿಂದ ಹಿಡಿದು ಸಕಲ ಜೀವರಾಶಿಯೂ ಕೂಡ ಪರಿಸರವನ್ನು ಅವಲಂಬಿತವಾಗಿದೆ, ಇಂತಹ ಪರಿಸರವನ್ನೇ ನಾವು ಇಂದು ನಾಶ ಮಾಡುವುದರ ಕಡೆ ಸಾಗುತ್ತಿದ್ದೇವೆ, ಭೂಮಿಯ ಮೇಲೆ ನಡೆಯುವಂತಹ ವಿಕೋಪಗಳಿಗೆ ನೇರವಾಗಿ ಮಾನವನೇ ಹೊಣೆಯಾಗುತ್ತಿದ್ದಾನೆ. ಮಾನವನ ಅತಿ ಆಸೆಯಿಂದಾಗಿ ಪರಿಸರ ವಿನಾಶದ ಕಡೆಗೆ ಸಾಗುತ್ತಿದೆ ಎಂದರು.
ಪರಿಸರದ ಮೇಲೆ ತೀವ್ರವಾಗಿ ಪರಿಣಾಮ ಬೀರುವ ವಿವಿಧ ರೀತಿಯ ಮಾಲಿನ್ಯಗಳಿವೆ, ಇದು ಪರಿಸರ ವ್ಯವಸ್ಥೆ ಮತ್ತು ಪರಿಸರದ ಜೀವವೈವಿಧ್ಯತೆಯನ್ನು ಹಾಳುಮಾಡುತ್ತದೆ, ವಿಷಕಾರಿ ವಸ್ತುಗಳು ಪರಿಸರಕ್ಕೆ ಪ್ರವೇಶಿಸಿದಾಗ ಮತ್ತು ಅದರ ಸಮತೋಲನವನ್ನು ತೊಂದರೆಗೊಳಿಸಿದಾಗ ಪರಿಸರ ಮಾಲಿನ್ಯ ಸಂಭವಿಸುತ್ತದೆ ಹಾಗಾಗಿ ಪರಿಸರಕ್ಕೆ ಯಾವುದೇ ಹಾನಿ ಮಾಡಬಾರದು ಎಂದು ತಿಳಿಸಿದರು.

ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ಆಕಾಶ್ ಭುವನೇಶ್ವರಿ, ಆಯಿಷ ಸಿದ್ಧಿಖ ಅವರಿಗೆ ಸಂಸ್ಥೆಯಿಂದ ಪ್ರಶಸ್ತಿ ಪತ್ರ ಹಾಗೂ ಪದಕವನ್ನು ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಶಿವಮೂರ್ತಿ ಶ್ರೀಧರ್ ಯೋಗೇಶ್ ನಾರಾಯಣ ನಾಯಕ್ ಸುರೇಶ್ ಮತ್ತು ಸಂಸ್ಥೆಯ ಅಧ್ಯಕ್ಷ ಕುಮಾರಸ್ವಾಮಿ,ಕಾರ್ಯದರ್ಶಿ ಆನಂದ್, ಸದಸ್ಯರಾದ ಲಕ್ಷ್ಮಿಪತಿ,ಪ್ರವೀಣ್ ಕುಮಾರ್, ಧ್ಯಾಮ್ ಕುಮಾರ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Q
ಚಿತ್ರದುರ್ಗ ಸುದ್ದಿ: ಜುಲೈ 03

Namma Challakere Local News
error: Content is protected !!