ಚಳ್ಳಕೆರೆ: ಬಾಲ್ಯವಾಸ್ಥೆ ಹಾಗೂ ಕಿಶೋರವಾಸ್ಥೆ ಕಾರ್ಮಿಕ ನಿಷೇಧ 1986 ಕಾಯ್ದೆಯಡಿ ತಪಾಸಣೆ
ಚಿತ್ರದುರ್ಗ(ಕರ್ನಾಟಕ ವಾರ್ತೆ)ಜೂನ್28:
ಚಳ್ಳಕೆರೆ ನಗರದ ವಾಣಿಜ್ಯ ಸಂಸ್ಥೆಗಳಿಗೆ ಬುಧವಾರ ಅಧಿಕಾರಿಗಳ ತಂಡ ಭೇಟಿ ನೀಡಿ ಬಾಲ್ಯವಾಸ್ಥೆ ಹಾಗೂ ಕಿಶೋರವಾಸ್ಥೆ ಕಾರ್ಮಿಕ ನಿಷೇಧ 1986 ಕಾಯ್ದೆಯಡಿ ತಪಾಸಣೆ ನಡೆಸಲಾಯಿತು.
ತಪಾಸಣೆ ಸಂದರ್ಭದಲ್ಲಿ ಒಂದು ಮಗುವನ್ನು ಕೆಲಸದಿಂದ ಬಿಡುಗಡೆಗೊಳಿಸಿ, ಮಕ್ಕಳ ಕಲ್ಯಾಣ ಸಮಿತಿಗೆ ಹಾಜರುಪಡಿಸಲಾಯಿತು.
ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಕುರಿತು ಸಂಸ್ಥೆಗಳ ಮುಂದೆ ಜಾಗೃತಿಗಾಗಿ ಸ್ಟಿಕರ್ಸ್‍ಗಳನ್ನು ಅಂಟಿಸಲಾಯಿತು.
ಕಾರ್ಯಾಚರಣೆಯಲ್ಲಿ ಕಾರ್ಮಿಕ ನಿರೀಕ್ಷಕರಾದ ಟಿ.ಕುಸುಮ, ಬಾಲ ಕಾರ್ಮಿಕ ಯೋಜನಾ ಸೊಸೈಟಿ ಯೋಜನಾ ನಿರ್ದೇಶಕ ಪಿ.ಸತೀಶ್ ಕುಮಾರ್, ಮಕ್ಕಳ ರಕ್ಷಣಾ ಘಟಕದ ರೇಖಾ, ಸಹಾಯಕ ಶಿಶು ಅಭಿವೃದ್ದಿ ಅಧಿಕಾರಿ ರಾಮಾಂಜನೇಯ ಹಾಗೂ ಪೆÇಲೀಸ್ ಇಲಾಖೆಯ ಶಿವಣ್ಣ ಹಾಜರಿದ್ದರು.