ಚಳ್ಳಕೆರೆ ; 2022-23ನೇ ಸಾಲಿನ ಅಂತರಾಷ್ಟ್ರೀಯ ಒಲಂಪಿಯಾಡ್ ಸ್ಪರ್ಧಾತ್ಮಕ ಪರೀಕ್ಷೆಯನ್ನು 163 ವಿದ್ಯಾರ್ಥಿಗಳು ತೆಗೆದುಕೊಂಡಿದ್ದು, ಎಲ್ಲ ವಿದ್ಯಾರ್ಥಿಗಳು ಉತ್ತಮ ಅಂಕಗಳೊAದಿಗೆ ತೇರ್ಗಡೆ ಹೊಂದಿ ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಇದರಲ್ಲಿ 62 ವಿದ್ಯಾರ್ಥಿಗಳು ವಿವಿಧ ವಿಷಯಗಳಲ್ಲಿ ಚಿನ್ನದ ಪದಕಗಳನ್ನು ಗಳಿಸಿದ್ದಾರೆ. ಈ ಪರೀಕ್ಷೆಯ ಎರಡನೇ ಹಂತದಲ್ಲಿ 9ನೇ ತರಗತಿ ವಿದ್ಯಾರ್ಥಿ ಧವನ್ ಎಸ್.ರೆಡ್ಡಿ ವಲಯ ಮಟ್ಟದಲ್ಲಿ ಕ್ರಮವಾಗಿ ಇಂಗ್ಲೀಷ್ ವಿಷಯದಲ್ಲಿ 8ನೇ ರ‍್ಯಾಂಕ್, ಗಣಿತ ವಿಷಯದಲ್ಲಿ 13ನೇ ರ‍್ಯಾಂಕ್, ವಿಜ್ಞಾನ ವಿಷಯದಲ್ಲಿ 16ನೇ ರ‍್ಯಾಂಕ್ ಪಡೆದಿರುತ್ತಾನೆ. ಹಾಗೂ ತನ್ಮಯಿ. ಟಿ. ಎಸ್ ವಿದ್ಯಾರ್ಥಿನಿ ಐದು ಸಾವಿರ ರೂಪಾಯಿಗಳ ವಿದ್ಯಾರ್ಥಿ ವೇತನವನ್ನು ಪಡೆದಿರುತ್ತಾಳೆ.
ವಿದ್ಯಾರ್ಥಿಗಳ ಈ ಸಾಧನೆಗೆ ಹಾಗೂ ಮಾರ್ಗದರ್ಶನ ನೀಡಿದ ಶಿಕ್ಷಕರುಗಳಿಗೆ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಬಿ.ಎ. ಲಿಂಗಾರೆಡ್ಡಿ ಅವರು, ಕಾರ್ಯದರ್ಶಿಗಳಾದ ಶ್ರೀಮತಿ ಸುಜಾತ ಲಿಂಗಾರೆಡ್ಡಿಯವರು ಹಾಗೂ ಶಾಲೆಯ ಪ್ರಾಂಶುಪಾಲರಾದ ಶ್ರೀ ವಿಜಯ್. ಬಿ.ಎಸ್ ಅವರು ಅಭಿನಂದಿಸಿದ್ದಾರೆ.