ಚಳ್ಳಕೆರೆ : ರಾಜ್ಯದಲ್ಲಿ ನೂತನವಾಗಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷದ ಸರಕಾರ ತಮ್ಮ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿರುವ ಹಿನ್ನಲೆಯಲ್ಲಿ ಗ್ರಾಮೀಣ ಭಾಗದ ಸಾರ್ವಜನಿಕರು ಈ ಯೋಜನೆಯ ಸೌಲಭ್ಯ ಪಡೆಯಲು ತಾ ಮುಂದು ನೀ ಮುಂದು ಎಂದು ನಗರದತ್ತ ಮುಖ ಮಾಡಿದ್ದಾರೆ
ಇನ್ನೂ ಬೆಸ್ಕಾಂ ಇಲಾಖೆಯ ನಿರ್ಲಕ್ಷ್ಯ ವೋ ಅಥವಾ ಬೇಜಾವಾಬ್ದಾರಿನೋ ಗೊತ್ತಿಲ್ಲ ಒಂದು ಮೀಟರ್ ಗೆ ಎರಡು ಕರೆಂಟ್ ಬಿಲ್ ನೀಡಿರುವುದು ಕಂಡು ಬಂದಿದೆ.
ತಾಲೂಕಿನ ಲಕ್ಷ್ಮಿ ಪುರ ಗ್ರಾಮದ ಬಡ ಕೂಲಿ ಕಾರ್ಮಿಕ ಇನ್ನೂ ಕೂಲಿ ಮಾಡಿ ಜೀವನ ನಡೆಸುವ ಕೂಲಿ ಕಾರ್ಮಿಕನ ಮನೆಯಲ್ಲಿ ಕೇವಲ ಎರಡು ಬಲ್ಪ ಬೆಳಗುವುದು ಬಿಟ್ಟರೆ ಬೇರೆ ಯಾವುದೇ ಬಳಕೆಯಾಗುವ ವಸ್ತುಗಳಿಲ್ಲ ಆದರೆ ಮಹೇಶ್ ಎಂಬ ಹೆಸರಿನ ಮೀಟರ್ ಹಾಕುವ ಬದಲು ಪಾಲಮ್ಮ ಎಂಬ ಹೆಸರಿನ ಆರ್ ಆರ್ ನಂಬರ್ ಇರುವ ಮೀಟರ್ ಅಳವಡಿಸಿರುವುದು ಕೂಲಿಕಾರ್ಮಿಕ ನಿಟ್ಟುಸಿರು ಬಿಡುವಂತಾಗಿದೆ
ಇನ್ನೂ ಕಳೆದ ಆರು ತಿಂಗಳಿAದ ಈ ಸಮಸ್ಯೆ ಬಗ್ಗೆ ಅಧಿಕಾರಿಗಳ ಗಮನ ಸೇಳೆದರು ಇದಕ್ಕೆ ಕ್ಯಾರೆ ಎನ್ನದ ಅಧಿಕಾರಿಗಳು ಎರಡು ಮೀಟರ್ ಬಿಲ್ ಪಾವತಿಸುವಂತೆ ಹೇಳಿದ್ದಾರೆ
ಅಂತೆ ಈಗೇ ಬೆಸ್ಕಾಂ ನಿರ್ಲಕ್ಷ್ಯ ಕ್ಕೆ ರೋಸಿ ಹೊದ ಗ್ರಾಮೀಣ ಭಾಗದ ಕೂಲಿ ಕಾರ್ಮಿಕ ದಿಕ್ಕು ತೋಚದಂತಾಗಿದ್ದಾನೆ
ಬಾಕ್ಸ್ :
ಸ್ವಾಮಿ ನಾನು ಬಡವ ಕೂಲಿ ಮಾಡಿ ಜೀನ ನಡೆಸಬೇಕು ಆದರೆ ಬೆಸ್ಕಾಂ ಇಲಾಕೆಯವರು ನನ್ನ ಹೆಸರಿನ ಆರ್ ಆರ್ ನಂಬರ್ ಇರುವ ಮೀಟರ್ ಬೇರೆ ಎಲ್ಲೋ ಹಾಕಿಕೊಂಡು ಪಾಲಮ್ಮ ಎಂಬುವವರ ಮೀಟರ್ ಅಳವಡಿಸಿದ್ದಾರೆ ಇದರಿಂದ ಎರಡು ಬಿಲ್ ನನಗೆ ಕೊಡುತ್ತಾರೆ, ಎರಡು ಬಲ್ಪ್ ಬೆಳಗಿಸುವ ನನಗೆ ಸುಮಾರು ಇಪ್ಪತ್ತು ಸಾವಿರ ಬಿಲ್ ಬರುತ್ತೆ ಹೇಗೆ ಕಟ್ಟಲಿ ಸ್ವಾಮಿ ನಾನು..—
ಮಹೇಶ್ ಮನೆ ಮಾಲೀಕ ನೊಂದ ಫಲಾನುಭವಿ