ಚಳ್ಳಕೆರೆ : ಸಾರ್ವಜನಿಕ ಆಸ್ಪತ್ರೆಯ ಸಭಾಂಗಣದಲ್ಲಿ ಚಳ್ಳಕೆರೆಯ ಪ್ರೌಢಶಾಲಾ ವಿಜ್ಞಾನ ಶಿಕ್ಷಕರಿಗೆ ಮಲೇರಿಯಾ ನಿರ್ಮೂಲನೆ ಕುರಿತು ಒಂದು ದಿನದ ತರಬೇತಿ ಕಾರ್ಯಗಾರವನ್ನು ಆಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಡಾ.ನಾಗರಾಜ್ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಶಿಕ್ಷಕರಾದ ಹೆಚ್ಚು ಮಂಜುನಾಥ್ ಹಾಗೂ ಶ್ರೀನಿವಾಸ ಮೂರ್ತಿ ಇವರು ಭಾಗವಹಿಸಿ ಈ ತರಬೇತಿಯನ್ನು ನೀಡಿದರು.
2025ಕ್ಕೆ ನಾವು ಸಂಪೂರ್ಣವಾಗಿ ಮಲೇರಿಯಾವನ್ನು ಇಡೀ ದೇಶದಿಂದ ನಿರ್ಮೂಲನೆ ಮಾಡುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಮಲೇರಿಯಾ ಕಾಯಿಲೆಗೆ ಔಷಧಿಯನ್ನು ಕಂಡುಹಿಡಿಯಲಾಗಿದೆ
ಆದರೆ ಡೆಂಗ್ಯೂ, ಚಿಕನ್ ಗುನ್ಯಾ, ಆನೆಕಲ್ಲು ರೋಗಗಳಂತಹುಕ್ಕೆ ಇಂದಿಗೂ ನಿಖರವಾದ ಔಷಧಿಗಳನ್ನು ಕಂಡುಹಿಡಿಯಲು ಆಗಿರುವುದಿಲ್ಲ. ಆರೋಗ್ಯವಂತ ಮನುಷ್ಯನಿಗೆ ರೋಗಾಣುಗಳ ಮೂಲಕ ರೋಗಗಳು ಬರುತ್ತವೆ ಆ ರೋಗಾಣುಗಳನ್ನು ರೋಗ ವಾಹಕಗಳಾಗಿ ಒಬ್ಬರಿಂದ ಒಬ್ಬರಿಗೆ ಹರಡುವುದು ಸೊಳ್ಳೆಗಳು.
ಸೊಳ್ಳೆಗಳಲ್ಲಿ ನಾನಾ ರೀತಿಯ ಸೊಳ್ಳೆಗಳು ಇದ್ದರೂ ಎಲ್ಲಾ ಸೊಳ್ಳೆಗಳು ನಮಗೆ ರೋಗಗಳನ್ನು ತರುವುದಿಲ್ಲ ಆದರೆ ಅನಪಿಲೀಸ್ ಹೆಣ್ಣು ಮಲೇರಿಯಾ ರೋಗವನ್ನು ಹರಡಿದರೆ. ಈಡೀಸ್ ಎಂಬ ಸೊಳ್ಳೆಯು ಚಿಕನ್ ಗುನ್ಯಾ ಡೆಂಗ್ಯೂ ಕಾಯಿಲೆಗಳನ್ನು ತರುತ್ತದೆ ಎಂದರು.
ನಮ್ಮ ಮನೆಯ ಸುತ್ತ ನೀರು ನಿಲ್ಲದಂತೆ ತಡೆದರೆ ನಾವು ಸಂಪೂರ್ಣವಾಗಿ ಸೊಳ್ಳೆಗಳನ್ನು ನಿಯಂತ್ರಿಸಬಹುದು ಸೊಳ್ಳೆಗಳ ತಾಣವೇ ನಿಂತ ನೀರು ಇದನ್ನು 2027 ಕ್ಕೆ ನಾವು ಸಂಪೂರ್ಣವಾಗಿ ಸೊಳ್ಳೆಯನ್ನು ನಿವಾರಿಸಿದರೆ ಈ ರೋಗಗಳನ್ನು ನಿಯಂತ್ರಿಸಬಹುದು ಎಂದು ಡಾಕ್ಟರ್ ನಾಗರಾಜ್ ರವರು ತಿಳಿಸಿದರು
ಶಿಕ್ಷಕರ ಸೈನ್ಯ ತುಂಬಾ ದೊಡ್ಡದು ಮಕ್ಕಳನ್ನು ಈಗ ಇಲ್ಲಿಂದಲೇ ತರಬೇತಿಗೊಳಿಸಿದರೆ ಈ ರೋಗಗಳನ್ನು ಕೀಟಗಳಿಂದ ಸೊಳ್ಳೆಗಳಿಂದ ಹರಡುವ ಮಲೇರಿಯಾ ಕಾಯಿಲೆಗೆ ಔಷಧಿಯನ್ನು ಕಂಡುಹಿಡಿಯಲಾಗಿದೆ ಎಂದರು.
ಇದೇ ಸಂಧರ್ಭದಲ್ಲಿ ಆರೋಗ್ಯ ಇಲಾಖೆಯ ತಾಲೂಕು ವೈಧ್ಯಾದಿಕಾರಿ ಡಾ.ಕಾಶಿ, ಸಹಾಯಕ ಅಧಿಕಾರಿ ಕುದಾಪುರ ತಿಪ್ಪೆಸ್ವಾಮಿ, ಡಾ.ನಾಗರಾಜ್, ಉಪನ್ಯಾಸಕ ಮಂಜುನಾಥ್, ಇತರರು ಇದ್ದರು.

Namma Challakere Local News
error: Content is protected !!