ಚಳ್ಳಕೆರೆ : ಗ್ರಾಮೀಣ ಪ್ರದೇಶಗಳಲ್ಲಿ ಜನರು ವಾಸ ಮಾಡಲು ವಸತಿ ನಿವೇಶನಕ್ಕಾಗಿ ನಿಂರತರವಾಗಿ ಅಲೆದಾಟು ನಡೆಸುತ್ತಿದ್ದಾರೆ ಅದರಂತೆ ತಾಲೂಕಿನ ಘಟಪರ್ತಿ ಗ್ರಾಮದ ಬನವಿಗೊಂಡನಹಳ್ಳಿ ಗ್ರಾಮವೊಂದರಲ್ಲಿ ಕಳೆದ ನಾಲ್ಕು ವರ್ಷಗಳಿಂದ ಗ್ರಾಮೀಣ ಪ್ರದೇಶದ ಹೈದರು ನಿವೇಷನಕ್ಕಾಗಿ ಅಲೆಯುತ್ತಿರುವ ದೃಶ್ಯ ಕಂಡು ಬಂದಿದೆ
ಅದರAತೆ ಸರಕಾರಿ ಜಮೀನಿನಲ್ಲಿ ಗುಡಿಸಲು ನಿರ್ಮಿಸಿಕೊಂಡು ವಾಸ ಮಾಡುವ ಮೂಲಕ ಅಧಿಕಾರಗಳಿಗೆ ತುರುಗೇಟು ನೀಡಿದ್ದಾರೆ.
ಇನ್ನೂ ಇದೇ ಸರ್ವೆ ನಂಬರ್ 1ರಲ್ಲಿ ಸುಮಾರು 5 ಎಕರೆ 16 ಗುಂಟೆ ಜಾಗದಲ್ಲಿ ಸುಮಾರು 30 ಗುಡಿಸಲು ನಿರ್ಮಿಸಿ ತಮ್ಮ ಹಕ್ಕಿಗಾಗಿ ಹೋರಾಟ ನಡೆಸುತ್ತಿದ್ದಾರೆ.
ಏನಿದು ವಿವಾದದ ಪ್ರಕರಣ :
ಕಳೆದ ನಾಲ್ಕು ವರ್ಷಗಳಿಂದ ಎರಡು ಗುಂಪುಗಳ ಮಧ್ಯೆ ಇದು ವಿವಾದ ಸೃಷ್ಠಿಯಾಗಿ ನ್ಯಾಯಲಾಯದ ಮೊರೆ ಹೋಗಿದೆ. ಇನ್ನೂ ಈದೇ ಸರ್ವೆ ನಂಬರ್ ಜಾಗದಲ್ಲಿ ಬಗರ್ ಹುಕ್ಕುಂ ಯೋಜನೆಯ ಅರ್ಜಿ ಹಾಕಿಕೊಂಡು ಬಂದಿರುವ ರೈತ ತಿಪ್ಪಣ್ಣ ಹಾಗೂ ಓಬಣ್ಣ, ಪ್ರಕಾಶ ರವರು ಇದು ಸರಕಾರಿ ಭೂಮಿ ಇಲ್ಲಿ ನಾವು ಕಳೆದ ಹಲವು ವರ್ಷಗಳಿಂದ ಭೂಮಿ ಉಳುಮೆ ಮಾಡಿಕೊಂಡು ಬಂದಿರುತ್ತೆವೆ ಎಂಬ ವಾದವಿದೆ. ಇನ್ನೂ ಪಕ್ಕದಲ್ಲೆ ಇರುವ ಶ್ರೀ ಬಸವೇಶ್ವರ ದೇವಾಸ್ಥಾನಕ್ಕೆ ಒಂದು ಎಕರೆ ಭೂಮಿ, ಗ್ರಾಮದ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಶಾಲೆಗೆ ಒಂದು ಎಕರೆ, ಅಂಗನವಾಡಿ, ಆಸ್ವತ್ರೆ, ಇನ್ನು ವಸತಿ ನಿವೇಶನಕ್ಕೆ 2.16 ಗುಂಟೆ ಭೂಮಿ ನೀಡಬೇಕು ಎಂದು ಸರಕಾರದ ಗಮನ ಸೆಳೆದ ಗ್ರಾಮದ ತಿಪ್ಪೆಶಿ, ಬೊಮ್ಮಣ್ಣ, ಓಬಳೇಶ್, ರಾಜಣ್ಣ, ದೊಡ್ಡ ತಿಪ್ಪಣ್ಣ, ನಾಗರಾಜ್, ಪಾತಲಿಂಗಪ್ಪ, ಪ್ರಕಾಶ್, ಮಂಜಮ್ಮ, ತಿಮ್ಮಕ್ಕ, ಕೆಂಗಮ್ಮ ಇಲ್ಲಿನ ಹಲವು ಕುಟುಂಬಗಳು ಈದೇ ಜಾಗದಲ್ಲಿ ಹೋರಾಟ ನಡೆಸುತ್ತಿದ್ದಾರೆ.
ಈ ಮೂರು ಕುಟುಂಬಗಳು ಹಾಗೂ ಗ್ರಾಮದ ಹಲವು ಕುಟುಂಬಗಳ ವಿವಾದ ತಾರಕ್ಕೆ ಏರಿದೆ ಇನ್ನೂ ಕಳೆದ ನಾಲ್ಕು ವರ್ಷಗಳಿಂದ ಈ ವಿವಾದಕ್ಕೆ ಕಡಿವಾಣ ಹಾಕಬೇಕಾದ ಅಧಿಕಾರಿಗಳು ಮಾತ್ರ ಮೌನ ವಹಿಸಿದ್ದಾರೆ.
ಇನ್ನೂ ಈ ಪ್ರಕರಣ ಗಂಭೀರತೆ ಪಡೆಯುವ ಮುನ್ನ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಕೋಮು ಗಲಭೆಗೆ ತಿರುವು ಪಡೆಯುವ ಮುನ್ನ ಸಮಸ್ಯೆಯನ್ನು ತಿಳಿಗೊಳಿಸವರೇ ಕಾದು ನೋಡಬೇಕಿದೆ.
ಬಾಕ್ಸ್ :
ಈ ಪ್ರಕರಣ ನಮ್ಮ ಗಮನಕ್ಕೆ ಬಂದಿಲ್ಲ ಜೂನ್.22 ರಂದು ಬಂದಿದೆ ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ, ಕಂದಾಯ ಅಧಿಕಾರಿಗಳು ಬೇಟಿ ನೀಡಿ ವರದಿ ಸಲ್ಲಿಸಲಿದ್ದಾರೆ ನಂತರ ಅಲ್ಲಿನ ಪರಸ್ಥಿತಿಯನ್ನು ಅವಲೋಕಿಸಿ ನಂತರ ಪರೀಶಿಲನೆ ನಡೆಸಲಾಗುವುದು.—ರೇಹಾನ್ ಪಾಷ ತಹಶೀಲ್ದಾರ್.