ಚಳ್ಳಕೆರೆ : ರಾಜ್ಯ ಸರಕಾರ ನೀಡುವ ಅಂತರ್ಜಾತಿ ವಿವಾಹ ದಂಪತಿಗಳ ಉತ್ತೆಜನ ಕಾರ್ಯಕ್ರಮದಡಿಯಲ್ಲಿ 2020-21 ನೇ ಸಾಲಿನ ಅಂತರ್ಜಾತಿ ವಿವಾಹ ದಂಪತಿಗಳ ಪ್ರೋತ್ಸಾಹಧನದ ಬಾಂಡ್ ವಿತರಣಾ ಕಾರ್ಯಕ್ರಮವನ್ನು ನಗರದ ಶಾಸಕರ ಭವನದಲ್ಲಿ ಆಯೋಜಿಸಿಲಾಗಿತ್ತು
ಇನ್ನೂ ಸ್ಥಳಿಯ ಶಾಸಕ ಟಿ.ರಘುಮೂರ್ತಿ ಬಾಗವಹಿಸಿ ದಂಪತಿಗಳಿಗೆ ಪ್ರೋತ್ಸಾಹಧನದ ಬಾಂಡ್ ವಿತರಣೆ ಮಾಡಿ ನಿಮ್ಮ ದಂಪತ್ಯ ಸುಖಿ ಸಂಸಾರ ಸುಖಿಕರವಾಗಿರಲಿ ಎಂದು ಶುಭಾ ಆರೈಸಿದರು.

ನಂತರ ಪರಿಶಿಷ್ಠ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಶಾಸಕರ ಭವನದ ಆರಣದಲ್ಲಿ ನಡೆದ 2020-21ನೇ ಸಾಲಿನ ಕೇಂದ್ರ ಪುರಸ್ಕೃತ ಸ್ವಯಂ ಉದ್ಯೋಗದಡಿ ಕುರಿ/ಮೇಕೆ ಘಟಕದ ಐದು ಕುರಿ ಒಂದು ಟಗರ್‌ನ್ನು ಫಲಾನುಭವಿಗಳಿಗೆ ಸ್ಥಳೀಯ ಶಾಸಕ ಟಿ.ರಘುಮೂರ್ತಿ ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ತಾಲೂಕು ಪರಿಶಿಷ್ಠ ವರ್ಗಗಳ ಕಲ್ಯಾಣ ಅಧಿಕಾರಿಗಳಾದ ಶಿವರಾಜ, ನಗರಸಭೆ ಸದಸ್ಯರಾದ ರಮೇಶ್ ಗೌಡ, ಕವಿತಾ ಬೋರಯ್ಯ, ರಾಘವೇಂದ್ರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶಶಿಧರ, ಉಪ್ಪಾರ ಸಂಘದ ತಾಲ್ಲೂಕು ಅಧ್ಯಕ್ಷರಾದ ಹನುಮಂತಪ್ಪ , ಮುಖಂಡರು, ಕಾರ್ಯಕರ್ತರು, ಸಾರ್ವಜನಿಕರು ಉಪಸ್ಥಿತರಿದ್ದರು.

About The Author

Namma Challakere Local News
error: Content is protected !!