ಚಳ್ಳಕೆರೆ : ರಾಜ್ಯ ಸರ್ಕಾರ ಘೋಷಿಸಿರುವ ಗೃಹಜ್ಯೋತಿ ಯೋಜನೆ ಗೊಂದಲದಿAದ ಕೂಡಿದೆ. ಬೆಸ್ಕಾಂ ಕಚೇರಿಗಳ ಮುಂದೆ ನೂರಾರು ಜನ ತಮ್ಮ ಕೆಲಸ-ಕಾರ್ಯಗಳನ್ನು ಬಿಟ್ಟು ಕಾಯುವಂತಾಗಿದೆ. ಜೂನ್ 21ರ ನಾಲ್ಕನೇ ದಿನವಾದ ಇಂದು ಕೂಡ ಸೇವಾಸಿಂಧು ಪೋರ್ಟಲ್ ಸಮಸ್ಯೆ ಎದ್ದು ಕಾಣುತ್ತಿದೆ. ಅಧಿಕಾರಿಗಳಿಗೆ ಗೃಹಜ್ಯೋತಿ ಟಾರ್ಗೆಟ್ ರೀಚ್ ಮಾಡಲು ಆಗ್ತಿಲ್ಲ. ಒಂದು ದಿನಕ್ಕೆ ಹತ್ತು ಲಕ್ಷ ಜನರಿಂದ ಅಪ್ಲಿಕೇಶನ್ ಹಾಕಿಸಲು ಇಂಧನ ಇಲಾಖೆ ಪ್ಲಾನ್ ಮಾಡಿತ್ತು. ಆದರೆ ಮೊದಲ ದಿನ 55 ಸಾವಿರ ಎರಡನೇ ದಿನ 1.06.4032 ಲಕ್ಷ ಜನ ಅರ್ಜಿ ಸಲ್ಲಿಸಿದ್ದಾರೆ. ರಾಜ್ಯದಲ್ಲಿ 200 ಯೂನಿಟ್ ವಿದ್ಯುತ್ ಬಳಕೆ ಮಾಡುವವರ ಸಂಖ್ಯೆ 2 ಕೋಟಿ 14 ಲಕ್ಷ ಇದೆ. ಹಾಗಾಗಿ ಅಧಿಕಾರಿಗಳು ಒಂದು ದಿನಕ್ಕೆ ಹತ್ತು ಲಕ್ಷ ಜನರಿಂದ ಅಪ್ಲಿಕೇಶನ್ ಹಾಕಿಸಿದ್ರೆ, 21 ಅಥವಾ 22 ದಿನಗಳಲ್ಲಿ ರಾಜ್ಯದ ಎಲ್ಲಾ ಫಲಾನುಭವಿಗಳಿಂದ ಅರ್ಜಿ ಹಾಕಿಸಿದಂತೆ ಆಗುತ್ತದೆ ಎಂದು ಇಂಧನ ಇಲಾಖೆ ಪ್ಲಾನ್ ಮಾಡಿತ್ತು.
ಆದ್ರೆ ಸರ್ವರ್ ಸ್ಲೋ ಸಮಸ್ಯೆಯಿಂದ ಟಾರ್ಗೆಟ್ ರೀಚ್ ಮಾಡೋದು ಕಷ್ಟ ಆಗುತ್ತಿದೆ. ಇಂದು ಮೂರನೇ ದಿನವು ಸರ್ವರ್ ಡೌನ್ ಆಗುತ್ತಿದೆ. ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಜನರು ನಾ ಮುಂದು ತಾ ಮುಂದು ಎಂದು ಮುಗಿಬೀಳುತ್ತಿದ್ದಾರೆ. ಇಂದು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸಲು ಜನರು ಬರುವ ಸಾಧ್ಯತೆ ಇದೆ.
ಸ್ಥಳೀಯ ಬೆಸ್ಕಾಂಗಳಲ್ಲಿಯೂ ಸಹ ಅರ್ಜಿ ಸಲ್ಲಿಕ್ಕೆಗೆ ಅವಕಾಶ ನೀಡಲಾಗಿದೆ. ಸೇವಾ ಸಿಂಧು ಪೋರ್ಟಲ್ಗೆ ಕೇವಲ 1 ಲಕ್ಷಕ್ಕೂ ಹೆಚ್ಚು ಅರ್ಜಿ ಸ್ವೀಕರಿಸುವ ಕೆಪ್ಯಾಸಿಟಿಯಿದ್ದು ಲಕ್ಷಕ್ಕೂ ಹೆಚ್ಚು ಜನರು ಅರ್ಜಿ ಸಲ್ಲಿಸುತ್ತಿರುವುದರಿಂದ ಸರ್ವರ್ ಸಮಸ್ಯೆ ಎದುರಾಗ್ತಿದೆ ಅನ್ನೋ ಮಾಹಿತಿ ಸಿಕ್ಕಿದೆ.