ಚಳ್ಳಕೆರೆ ನಗರದ ಹೊಂಗಿರಣ ಇಂಟರ್ ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ
ಚಳ್ಳಕೆರೆ : ಶಾಂತಿ, ಸಮಾಧಾನ ಇರಬೇಕಾದರೆ ಮಾನವನ ದೇಹದ ಮೇಲೆ ನಿಯಂತ್ರಣ ಇರಬೇಕು. ದೇಹ ಮತ್ತು ಮನಸ್ಸು ಬೇರೆಯಾದರೆ ಒತ್ತಡ ಸೃಷ್ಠಿಯಾಗುತ್ತದೆ. ಆಗ ಬೇಕಿಲ್ಲದ ಕಾಯಿಲೆಗಳು ಅಂಟಿಕೊಳ್ಳುತ್ತವೆ. ಆರೋಗ್ಯ ಸಮಸ್ಯೆ ಪತ್ತೆ ಮಾಡಲು ಯೋಗ ಮತ್ತು ಧ್ಯಾನ ಇಂದಿನ ಅಗತ್ಯ ಎಂದು ಪಂತಜಲಿ ಶಿಕ್ಷಣ ಸಮಿತಿಯ ಯೋಗ ಗುರು ಮನೋಹರ್‌ಅಣ್ಣಾ ಹೇಳಿದರು.

ನಗರದ ಹೊಂಗಿರಣ ಇಂಟರ್ ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇಂದು ವಿಶ್ವ ಯೋಗ ದಿನಾಚರಣೆ ಅಂಗವಾಗಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಹಮ್ಮಿಕೊಂಡ ಯೋಗ ದಿನಾಚರಣೆ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರಸ್ತುತ ದಿನಗಳಲ್ಲಿ ಯುವ ಸಮೂಹ ಹೆಚ್ಚು ಹೆಚ್ಚು ಪಾಶ್ಚಿಮಾತ್ಯ ಸಂಸ್ಕೃತಿ ಅಳವಡಿಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಒಲವು ತೋರುತ್ತಿದೆ. ಆದರೆ ಇದಕ್ಕೆ ವಿರುದ್ಧವಾಗಿ ಪಾಶ್ಚಿಮಾತ್ಯ ದೇಶಗಳು ನಮ್ಮ ಭಾರತ ಸಂಸ್ಕೃತಿ ಅಳವಡಿಸಿಕೊಂಡು ಉತ್ತಮ ಆರೋಗ್ಯ ಕಾಪಾಡಿಕೊಳ್ಳುತ್ತಿವೆ ಎಂದರು.
ಇನ್ನೂ ಯೋಗ ಬಂಧು ಶಿವನಾಗಪ್ಪ ಅಣ್ಣಾ ಮಾತನಾಡಿ, ಮನುಷ್ಯನ ಹುಟ್ಟು ಮತ್ತು ಸಾವು ಹೇಗೆ ನಿಗೂಢವೋ ಹಾಗೆಯೆ ಅವನ ಶರೀರ, ಮನಸ್ಸು ಚಿಂತನೆಗಳೂ ಕೂಡ. ಇವುಗಳನ್ನು ಸರಿಯಾದ ಮಾರ್ಗದಲ್ಲಿ ಉದ್ದೀಪನಗೊಳಿಸಿದಾಗ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ಪ್ರತಿನಿತ್ಯ ಯೋಗ ಮಾಡುವುದರಿಂದ ಅಸಮರ್ಪಕ ಮತ್ತು ಒತ್ತಡ ಸಂದರ್ಭಗಳನ್ನು ಸಮಚಿತ್ತದಿಂದ ಎದುರಿಸಲು ಸಾಧ್ಯವಾಗುತ್ತದೆ ಎಂದರು.
ಸAಸ್ಥೆಯ ಕಾರ್ಯದರ್ಶಿ ದಯಾನಂದ್ ಪ್ರಲ್ಹಾದ್ ಮಾತನಾಡಿ, “ಯೋಗ” ಎನ್ನುವುದು ಭಾರತದ ಸಾವಿರಾರು ವರ್ಷಗಳಿಂದ ನಮ್ಮದೇಯಾದ ಆರೋಗ್ಯ, ಚೈತನ್ಯ ಹೆಚ್ಚು ಮಾಡುವುದು. ದೇಹಕ್ಕೆ ಬೇಕಾಗಿರುವ ಆರೋಗ್ಯದ ಜೊತೆಗೆ ಮಾನಸಿಕವಾಗಿ, ಭೌತಿಕವಾಗಿ ನಮ್ಮೆಲ್ಲರನ್ನು ಗಟ್ಟಿ ಮಾಡುವ ಪ್ರಕ್ರಿಯೆ ಯೋಗ. ವಿಶ್ವದ ಚಿಕ್ಕ ಚಿಕ್ಕ ದೇಶಗಳಲ್ಲಿಯೂ ಕೂಡ ಯೋಗವನ್ನೂ ಪರಿಚಯ ಮಾಡಿಕೊಡುವ ನಿಟ್ಟಿನಲ್ಲಿ ಪ್ರಧಾನಮಂತ್ರಿಗಳ ಕೊಡುಗೆ ಅತ್ಯಂತ ಮಹತ್ವದಾಗಿದೆ ಎಂದರು.

ಈ ಸಂಧರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ದಯಾನಂದ್ ಪ್ರಲ್ಹಾದ್ , ಶಿವಪ್ರಸಾದ್, ಮಧುಸೂದನ್, ಕಿರಣ್ , ರಾಜೇಶ್ ಗುಪ್ತ, ಇನ್ನಿತರ ಶಾಲಾ ಮಕ್ಕಳು ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.

About The Author

Namma Challakere Local News
error: Content is protected !!