ನಾಯಕನಹಟ್ಟಿ:; 2023 -24ನೇ ಸಾಲಿನ ಮುಂಗಾರು ಹಂಗಾಮು ಶೇಂಗಾ ಬಿತ್ತನೆ ಬೀಜ ವಿತರಣೆ ಮಾಡಲಾಗಿದೆ ಎಂದು ಕೃಷಿ ಅಧಿಕಾರಿ ಹೇಮಂತ್ ನಾಯ್ಕ್ ಹೇಳಿದ್ದಾರೆ.

ಅವರು ಮಂಗಳವಾರ ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಶೇಂಗಾ ಬೀಜ ವಿತರಣೆ ಮಾಡಿ ಮಾತನಾಡಿದ್ದಾರೆ.
ಪ್ರಸ್ತುತ 2023 -24ನೇ ಸಾಲಿನ ಈ ಬಾರಿ ರೈತರಿಗೆ ಪ್ರಥಮವಾಗಿ ನಾಯಕನಹಟ್ಟಿ ಹೋಬಳಿಯ ಗ್ರಾಮ ಪಂಚಾಯಿತಿ ಗೌಡಗೆರೆ, ನಲಗೇತನಹಟ್ಟಿ ನಾಯಕನಹಟ್ಟಿ ಗ್ರಾಮ ಪಂಚಾಯತಿ ರೈತರಿಗೆ ವಿತರಣೆ ಮಾಡಲಾಗಿದೆ.
ದಿನಾಂಕ 14 /06./2023ರ ಬುಧವಾರ ಗ್ರಾಮ ಪಂಚಾಯತಿಗಳಾದ ನೇರಲಗುಂಟೆ, ತಿಮ್ಮಪ್ಪಯ್ಯನ ಹಳ್ಳಿ ಎನ್ ಮಹದೇವಪುರ ಗ್ರಾಮದ ರೈತರಿಗೆ ವಿತರಣೆ ಮಾಡಲಾಗುವುದು ದಿನಾಂಕ 16 /6/ 2023 ರಂದು ಅಬ್ಬೇನಹಳ್ಳಿ ಮಲ್ಲೂರಹಳ್ಳಿ ಎನ್ ದೇವರಹಳ್ಳಿ, ಗ್ರಾಮ ಪಂಚಾಯತಿ ರೈತರಿಗೆ ಶೇಂಗಾ ಬಿತ್ತನೆ ಬೀಜ ವಿತರಣೆ ಮಾಡಲಾಗುವುದು ಎಂದು ಕೃಷಿ ಅಧಿಕಾರಿ ಹೇಮಂತ್ ನಾಯ್ಕ ರೈತರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ನಾಯಕನಹಟ್ಟಿ, ಗೌಡಗೆರೆ ,ನಲಗೇತನಹಟ್ಟಿ ಗ್ರಾಮದ ರೈತರು ಹಾಗೂ ರೈತ ಸಂಪರ್ಕ ಕೇಂದ್ರದ ಸಿಬ್ಬಂದಿಗಳಾದ ಮಚ್ಚೆಂದ್ರಪ್ಪ ಮಹಾಂತೇಶ್ ಶರಣಪ್ಪ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.
ಶೇಂಗಾ ಬಿತ್ತಲೆ ಬೀಜ ಬೆಲೆ ಕಡಿಮೆ ಮಾಡುವಂತೆ ರೈತರಿಂದ ಒತ್ತಾಯ

ಹೋಬಳಿಯ ಜೋಗಿಹಟ್ಟಿ ಭೂತಯ್ಯರ್ ಗೋವಿಂದಪ್ಪ, ಕಾವಲು ಬಸವೇಶ್ವರನಗರ ಕಾಮರಾಜ್, ಮನುಮೈನಹಟ್ಟಿ ಜಯಣ್ಣ ಸೇರಿದಂತೆ ಶೇಂಗಾ ಬಿತ್ತನೆ ಬೀಜ ಕಳೆದ ಬಾರಿಗಿಂತ ಈ ಬಾರಿ ಬೆಲೆ ಏರಿಕೆಗೆ ರೈತರು ಕಂಗಲಾಗಿದ್ದಾರೆ ಸರ್ಕಾರ ಕೂಡಲೇ ಶೇಂಗಾ ಬಿತ್ತನೆ ಬೀಜ ದರವನ್ನು ಕಡಿಮೆ ಮಾಡುವಂತೆ ಒತ್ತಾಯಿಸಿದ್ದಾರೆ

Namma Challakere Local News
error: Content is protected !!