ಚಿತ್ರದುರ್ಗ ಜೂನ್.9:
ಜೂನ್ 8ರಂದು ಸುರಿದ ಮಳೆಯ ವಿವರದನ್ವಯ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಸೂಗೂರಿನಲ್ಲಿ 48.4 ಮಿ.ಮೀ ಮಳೆಯಾಗಿದೆ. ಇದು ಜಿಲ್ಲೆಯ ಅತ್ಯಧಿಕ ಮಳೆಯಾಗಿದೆ.
ಮೊಳಕಾಲ್ಮೂರು ತಾಲ್ಲೂಕಿನ ಮೊಳಕಾಲ್ಮುರಿನಲ್ಲಿ 21.2 ಮಿ.ಮೀ, ರಾಯಾಪುರದಲ್ಲಿ 40 ಮಿ.ಮೀ, ಬಿಜಿಕೆರೆಯಲ್ಲಿ 24 ಮಿ.ಮೀ ಮಳೆಯಾಗಿದೆ. ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿಯಲ್ಲಿ 1 ಮಿ.ಮೀ, ಪರುಶುರಾಂಪುರದಲ್ಲಿ 14 ಮಿ.ಮೀ, ಡಿ ಮರಿಕುಂಟೆಯಲ್ಲಿ 16.4 ಮಿ.ಮೀ, ತಳುಕುನಲ್ಲಿ 1.4 ಮಿ.ಮೀ ಮಳೆಯಾಗಿದೆ.
12 ಮನೆಗಳು ಭಾಗಶಃ ಹಾನಿ: ಗುರುವಾರ ಸುರಿದ ಮಳೆಯಿಂದಾಗಿ ಜಿಲ್ಲೆಯಾದ್ಯಂತ ಒಟ್ಟು 12 ಮನೆಗಳು ಭಾಗಶಃ ಹಾನಿಯಾಗಿದೆ.
ಹಿರಿಯೂರು ತಾಲ್ಲೂಕಿನಲ್ಲಿ 1 ಮನೆ ಭಾಗಶಃ ಹಾನಿಯಾಗಿದ್ದು, 1 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದೆ. ಚಳ್ಳಕೆರೆ ತಾಲ್ಲೂಕಿನಲ್ಲಿ 10 ಮನೆಗಳು ಭಾಗಶಃ ಹಾನಿಯಾಗಿದ್ದು, 6 ಸಣ್ಣ ಜಾನುವಾರುಗಳಿಗೆ ಹಾನಿ ಹಾಗೂ 8 ಹೆಕ್ಟೇರ್ ಕೃಷಿ ಬೆಳೆ ಹಾನಿಯಾಗಿದೆ. ಮೊಳಕಾಲ್ಮೂರು ತಾಲ್ಲೂಕಿನಲ್ಲಿ 1 ಮನೆ ಭಾಗಶಃ ಹಾನಿ ಹಾಗೂ 1 ಹೆಕ್ಟೇರ್ ಕೃಷಿ ಬೆಳೆ ಹಾನಿಯಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ

About The Author

Namma Challakere Local News
error: Content is protected !!