ಇಂದಿನ ಆಧುನಿಕ ಕಾಲಘಟ್ಟದಲ್ಲೂ ನಾವು ನಮ್ಮ ಪೂರ್ವಜರನ್ನು ಅನುಸರಿಸದೇ ಪಾಶ್ಚಾತ್ಯ ಸಂಸ್ಕೃತಿಯನ್ನು ನಮ್ಮ ಜೀವಿತದಲ್ಲಿ ಅಳವಡಿಸಿಕೊಂಡು ವಿವಿಧ ಮಾರಕ ರೋಗಗಳಿಗೆ ಒಳಗಾಗುತ್ತಿದ್ದೇವೆ ಎಂದು ದೊಡ್ಡೇರಿ ಗ್ರಾಪಂ ಸದಸ್ಯ ದೊಡ್ಡೇರಿ ಶಿವಣ್ಣ ಹೇಳಿದರು
ಸಮೀಪದ ದೊಡ್ಡೇರಿ ಗ್ರಾಮದಲ್ಲಿ ಶನಿವಾರ ಶಾಲಾ ಶಿಕ್ಷಣ ಇಲಾಖೆ, ಗ್ರಾಮದ ಆರೋಗ್ಯ ಕ್ಷೇಮ ಕೇಂದ್ರದ ವತಿಯಿಂದ ತಂಬಾಕು ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತ ಶಾಲಾ ಮಕ್ಕಳ ಬೈಸಿಕಲ್ ಜಾಗೃತಿ ಜಾತಾ ಕಾರ್ಯಕ್ರಮದಲ್ಲಿ ಮಾತನಾಡಿದರು
ನಾವಿಂದು ನಮ್ಮ ಜನವಸತಿ ಪ್ರದೇಶಗಳಲ್ಲಿ ಶಾಲಾ ಕಾಲೇಜು ಹಂತದ ವಿದ್ಯಾರ್ಥಿಗಳಿಗೆ ಮಾದಕ ವಸ್ತು, ಮದ್ಯಸೇವನೆ ದುಷ್ಚಟಗಳಿಂದ ನಮ್ಮ ಆರೋಗ್ಯದ ಮೇಲೆ ಆಗುವ ದುಷ್ಪರಿಣಾಮಗಳ ಕುರಿತು ಮನವರಿಕೆ ಮಾಡಿಕೊಡದೇ ಹೋದರೆ ಸಮಾಜದ ಸ್ವಾಸ್ಥö್ಯ ಹಾಳಾಗುತ್ತದೆ ಎಂದರು
ಗ್ರಾಮದ ಸಹಿಪ್ರಾ ಶಾಲಾ ಮುಖ್ಯಶಿಕ್ಷಕ ನಾಗಗೊಂಡನಹಳ್ಳಿ ನಾಗರಾಜು ಪ್ರಾಸ್ತಾವಿಕ ಮಾತನಾಡಿ ಇಂದು ನಮ್ಮ ನೆರೆಹೊರೆಯವರನ್ನು ನೋಡಿ ವಿದ್ಯಾರ್ಥಿಗಳು ದುಷ್ಚಟಗಳನ್ನು ರೂಡಿಸಿಕೊಳ್ಳುತ್ತಾರೆ ಕೇವಲ ಶಾಲೆಯಲ್ಲಿ ಮಾತ್ರ ನೈತಿಕ ಪಾಠ ಹೇಳಿ ಜನವಸತಿ ಪ್ರದೇಶದಲ್ಲಿ ಜನರು ದಿನ ನಿತ್ಯ ಮಾಡಬಹುದಾದ ದುಷ್ಕೃತ್ಯಗಳು ಅವರ ಮನಸ್ಸಿನ ಮೇಲೆ ಪರಿಣಾಮ ಬೀರುವುದರಿಂದ ನಾವಿಂದು ನಮ್ಮ ಮಕ್ಕಳ ಎದುರು ಯಾವುದೇ ಕೆಟ್ಟ ಹವ್ಯಾಸಗಳನ್ನು ಮಾಡದೇ ಉತ್ತಮ ಪರಿಸರ ಉಂಟುಮಾಡಬೇಕು ಎಂದರು
ಇದೇ ವೇಳೆ ಗ್ರಾಮದ ಶಾಲಾ ಮಕ್ಕಳೂ ಸೇರಿದಂತೆ ಗ್ರಾಮದ ಶಾಲಾ ಕಾಲೇಜು ವಿದ್ಯಾರ್ಥಿಗಳು ಬೈಸಿಕಲ್ ಜಾತಾ ನಡೆಸಿ ಸಾರ್ವಜನಿಕರಲ್ಲಿ ಮಾದಕ ಮದ್ಯ ಮತ್ತು ಭರಿಸುವ ವಸ್ತುಗಳ ಸೇವನೆ ಉತ್ತಮವಲ್ಲ ಎಂಬುವುದನ್ನು ಸೂಕ್ತ ಘೋಷಣೆಗಳು ಪ್ರಾತ್ಯಕ್ಷಿಕೆಗಳ ಮೂಲಕ ಮನವರಿಕೆ ಮಾಡಿಕೊಟ್ಟರು
ಸಂದರ್ಭದಲ್ಲಿ ಗ್ರಾಪಂ ಸದಸ್ಯ ಶಿವಣ್ಣ, ಬಡ್ತಿಮುಖ್ಯಶಿಕ್ಷಕ ಸಿ ನಾಗರಾಜು, ವಿದ್ಯಾರ್ಥಿಗಳಾದ ರಾಜು, ರವಿ, ಕೀರ್ತಿ, ಮಂಜುಳಾ, ಕೀರ್ತಿ, ಸುಜಾತಾ, ಶಿವಕುಮಾರ, ಶಿವು, ವಿನಯ್, ಆಕಾಶ, ಮೋಹನ, ಅಶಾ ಆರೋಗ್ಯ ಕಾರ್ಯಕರ್ತರು ಗ್ರಾಮಸ್ಥರು ಇದ್ದರು
ಪೋಟೋ (ಪಿಆರ್‌ಪುರ ಜಾಗೃತಿ 3 )
ದೊಡ್ಡೇರಿ ಗ್ರಾಮದಲ್ಲಿ ಶನಿವಾರ ಶಾಲಾ ಶಿಕ್ಷಣ ಇಲಾಖೆ, ಗ್ರಾಮದ ಆರೋಗ್ಯ ಕ್ಷೇಮ ಕೇಂದ್ರದ ವತಿಯಿಂದ ತಂಬಾಕು ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತ ಶಾಲಾ ಮಕ್ಕಳ ಬೈಸಿಕಲ್ ಜಾಗೃತಿ ಜಾತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ಆರೋಗ್ಯ ಆಶಾ ಕಾರ್ಯಕರ್ತರು